ನಿತ್ಯಭವಿಷ್ಯ: ಈ ರಾಶಿಯವರಿಂದು ಹಣಕಾಸಿನ ವಿಚಾರದಲ್ಲಿ ತುಂಬಾ ಜಾಗ್ರತೆ

Nitya Bhavisya Vijayavani
Published on

ಮೇಷ: ವೃತ್ತಿಜೀವನದಲ್ಲಿ ಬದಲಾವಣೆ. ಸಭೆ- ಸಮಾರಂಭದಲ್ಲಿ ಉಪಸ್ಥಿತಿ. ಆಪ್ತ ಸ್ನೇಹಿತರೊಂದಿಗೆ ಸಮಾಲೋಚನೆ ನಡೆಸುವಿರಿ. ಶುಭಸಂಖ್ಯೆ: 9

ವೃಷಭ: ಪತಿಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಬಹುದು. ಸಜ್ಜನರ ಸಹವಾಸ ಸಿಗಲಿದೆ. ಪೀಠೋಪಕರಣ ವ್ಯಾಪಾರದಲ್ಲಿ ಲಾಭವಿದೆ. ಶುಭಸಂಖ್ಯೆ: 1

ಮಿಥುನ: ವಕೀಲರ ವೃತ್ತಿಯಲ್ಲಿ ಪ್ರಗತಿದಾಯಕ ದಿನ. ಸರ್ಕಾರಿ ಕೆಲಸಗಳಲ್ಲಿ ಅಡೆತಡೆ ಉಂಟಾಗುವುದು. ರೈತಾಪಿ ವರ್ಗದವರಿಗೆ ಶುಭ. ಶುಭಸಂಖ್ಯೆ: 5

ಕಟಕ: ಸಹೋದ್ಯೋಗಿಗಳೊಂದಿಗೆ ವಿರೋಧ ಕಟ್ಟಿಕೊಳ್ಳುವಿರಿ. ಕೈಗಾರಿಕಾ ರಂಗದವರಿಗೆ ಶುಭ. ಸ್ತ್ರೀಯರಿಗೆ ಅಶಾಂತಿ ಕಾಡೀತು. ಶುಭಸಂಖ್ಯೆ: 3

ಸಿಂಹ: ಹೊಸ ವ್ಯಾಪಾರದಲ್ಲಿ ಸುಧಾರಣೆ ಕಾಣಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಸಾಹಿತಿ, ಕವಿಗಳಿಗೆ ವಿಶೇಷ ಗೌರವ ಪ್ರಾಪ್ತಿ. ಶುಭಸಂಖ್ಯೆ: 8

ಕನ್ಯಾ: ವ್ಯಾಪಾರದಲ್ಲಿ ಮೋಸ ಸಾಧ್ಯತೆ. ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಶುಭ. ಮಿತ್ರರ ಆಗಮನ. ಲಾಭ ದಾಯಕ ಉದ್ಯೋಗಕ್ಕೆ ಪ್ರಯತ್ನ. ಶುಭಸಂಖ್ಯೆ:6

ತುಲಾ: ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿ ಸಂತಸ. ಭೂಮಿಯ ವ್ಯವಹಾರದಲ್ಲಿ ಲಾಭ. ಮನೆ ಬದಲಾವಣೆಯ ನಿರ್ಧಾರ. ಶುಭಸಂಖ್ಯೆ: 4

ವೃಶ್ಚಿಕ: ಮೇಲಧಿಕಾರಿಗಳಿಂದ ಪ್ರಶಂಸೆ. ಕಲಾವಿದರಿಗೆ ವಿಶೇಷ ವೇದಿಕೆ ಪ್ರಾಪ್ತಿ. ಕ್ರೀಡಾಪಟುಗಳಿಗೆ ಶುಭ. ಕುತೂಹಲಕಾರಿ ಸುದ್ದಿ ಕೇಳುವಿರಿ. ಶುಭಸಂಖ್ಯೆ: 7

ಧನುಸ್ಸು: ಭೂಮಿ, ಆಸ್ತಿ ಖರೀದಿಯ ವಿಚಾರದಲ್ಲಿ ಜಾಗ್ರತೆ. ಹಿರಿಯರ ಆರೋಗ್ಯದತ್ತ ಹೆಚ್ಚಿನ ಗಮನವಿರಲಿ. ಆರೋಗ್ಯ ಕ್ಷೇತ್ರದವರಿಗೆ ಶುಭ. ಶುಭಸಂಖ್ಯೆ: 2

ಮಕರ: ಆಡುವ ಮಾತಿನಲ್ಲಿ ಹಿಡಿತವಿರಲಿ. ವಿದೇಶದಲ್ಲಿರುವ ಮಕ್ಕಳಿಂದ ಶುಭವಾರ್ತೆ ಬರಲಿದೆ. ರಾಜಕೀಯ ಕ್ಷೇತ್ರದವರಿಗೆ ಉತ್ತಮ ದಿನ. ಶುಭಸಂಖ್ಯೆ: 6

ಕುಂಭ: ಹಿರಿಯರ ಮಾರ್ಗದರ್ಶನದಿಂದ ಒಳ್ಳೆಯ ಫಲ. ಧರ್ಮ ಕಾರ್ಯದಲ್ಲಿ ಆಸಕ್ತಿ. ಪಾಲುದಾರಿಕೆಯಲ್ಲಿ ಹಣ ಹೂಡಿಕೆಗೆ ಅವಕಾಶ. ಶುಭಸಂಖ್ಯೆ: 6

ಮೀನ: ಅವಿವಾಹಿತರಿಗೆ ವಿವಾಹದ ಸೂಚನೆ. ವಿದ್ಯಾರ್ಥಿ ಗಳಿಗೆ ಉತ್ತಮ ಫಲಿತಾಂಶದ ಖುಷಿ. ದಂಪತಿಗಳ ನಡುವೆ ಸಾಮರಸ್ಯ ವೃದ್ಧಿ. ಶುಭಸಂಖ್ಯೆ:4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net