

ಮೇಷ: ಭತ್ತದ ಬೇಸಾಯಗಾರರಿಗೆ ಶುಭದಿನ. ವೀಸಾ ಸಮಸ್ಯೆಯಿಂದ ವಿದೇಶ ಪ್ರಯಾಣರದ್ದು. ಕ್ಷೀರ ಉತ್ಪನ್ನಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 2
ವೃಷಭ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮನಸ್ತಾಪ. ದಾಂಪತ್ಯ ಜೀವನದಲ್ಲಿ ವಿರಸ. ಟ್ರಾವೆಲ್ಸ್ ವಾಹನಗಳ ರಿಪೇರಿಗೆ ಖರ್ಚು. ಶುಭಸಂಖ್ಯೆ: 6
ಮಿಥುನ: ವಿವಾಹ ವಿಳಂಬದಿಂದ ಬೇಸರ. ಪ್ರತಿಭೆಗೆ ಪುರಸ್ಕಾರ. ಕಲಾವಿದರಿಗೆ ವೇದಿಕೆ ಲಭ್ಯ. ಚಿಕ್ಕ ಪುಟ್ಟ ವ್ಯಾಪಾರದಲ್ಲಿ ಅಧಿಕ ಲಾಭ. ಶುಭಸಂಖ್ಯೆ: 9
ಕಟಕ: ಏಕಾದಶ ಗುರುವಿನಿಂದ ವ್ಯಾಪಾರದಲ್ಲಿ ಅಧಿಕ ಲಾಭ. ನಂಬಿಕಸ್ಥರಿಂದಲೇ ವಂಚನೆ. ಮಾಟದ ಭೀತಿ. ಮಕ್ಕಳ ಭವಿಷ್ಯದ ಚಿಂತೆ. ಶುಭಸಂಖ್ಯೆ: 3
ಸಿಂಹ: ಕುಟುಂಬ ಸಮೇತ ತೀರ್ಥಯಾತ್ರೆಗೆ ನಿರ್ಧಾರ. ಖರೀದಿಯಲ್ಲಿ ಮೋಸ. ಅಲಂಕಾರಿಕ ವಸ್ತುಗಳ ಪ್ರದರ್ಶನದಲ್ಲಿ ಲಾಭ ಸಿಗಲಿದೆ. ಶುಭಸಂಖ್ಯೆ: 9
ಕನ್ಯಾ: ರೇಷ್ಮೆ ಬೇಸಾಯದಲ್ಲಿ ಅಧಿಕ ಲಾಭ. ಸಾವಯವ ಆಹಾರ ವ್ಯಾಪಾರ ಆರಂಭಿಸಲು ನಿರ್ಧಾರ. ಆಸ್ತಿ ಮಾರಾಟದಲ್ಲಿ ಅಡೆತಡೆ. ಶುಭಸಂಖ್ಯೆ: 8
ತುಲಾ: ಉಪನ್ಯಾಸಕ ವೃತ್ತಿಯಲ್ಲಿ ತೊಂದರೆ. ಉದ್ಯಮಿ ಮಹಿಳೆಯರಿಗೆ ಸಹವರ್ತಿಗಳಿಂದ ತೊಂದರೆ. ಲೋಹಗಳ ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 2
ವೃಶ್ಚಿಕ: ಪ್ರಶಸ್ತಿ ಸಿಗಲಿದೆ. ಐಟಿ ಉದ್ಯಮದಲ್ಲಿ ನಷ್ಟ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ತಾಯಿಗೆ ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 8
ಧನಸ್ಸು: ದೂರದ ಊರಿಗೆ ಅನಿರೀಕ್ಷಿತ ಪ್ರಯಾಣ. ಅಪಘಾತವಾಗುವ ಸಾಧ್ಯತೆಯಿದೆ, ಎಚ್ಚರ. ಧಾರ್ವಿುಕ ವೃತ್ತಿಯವರಿಗೆ ಅವಮಾನ. ಶುಭಸಂಖ್ಯೆ: 1
ಮಕರ: ಜೇನು, ಅಡಕೆ ರೈತರಿಗೆ ಅಧಿಕ ಲಾಭ. ಸಾಂಬಾರ ಪದಾರ್ಥಗಳ ವ್ಯಾಪಾರದಲ್ಲಿ ನಷ್ಟ. ಸಮುದ್ರೋತ್ಪನ್ನ ರಫ್ತು ಟೆಂಡರ್ ಸಿಗಲಿದೆ. ಶುಭಸಂಖ್ಯೆ: 6
ಕುಂಭ: ಆಟೋಮೊಬೈಲ್ಸ್ ವ್ಯಾಪಾರದಲ್ಲಿ ಅಭಿವೃದ್ಧಿ. ಪಿತ್ರಾರ್ಜಿತ ಆಸ್ತಿ ಗೊಂದಲ. ಲೆಕ್ಕಪತ್ರಗಳ ಪರಿಶೋಧಕರಿಗೆ ಉತ್ತಮ ದಿನ. ಶುಭಸಂಖ್ಯೆ: 5
ಮೀನ: ನಾಟ್ಯ ತರಬೇತಿಯಲ್ಲಿ ಸಾಧನೆ. ವಾದಕರಿಗೆ ವಿಶೇಷ ಸನ್ಮಾನ. ಕಿರುಚಿತ್ರ ನಿರ್ದೇಶಕರಿಗೆ ಉತ್ತಮ ಅವಕಾಶ ಒದಗಿ ಬರಲಿದೆ. ಶುಭಸಂಖ್ಯೆ: 4