

ಮೇಷ: ನ್ಯಾಯವಾದಿಗಳಿಗೆ ಸ್ವಪ್ರಯತ್ನದಿಂದ ಕಾರ್ಯ ಕ್ಷೇತ್ರಗಳಲ್ಲಿ ಮುನ್ನಡೆ. ಮಕ್ಕಳಿಂದಲೇ ವಾದ- ವಿವಾದಗಳು ಹೆಚ್ಚಾಗಬಹುದು. ಶುಭಸಂಖ್ಯೆ: 4
ವೃಷಭ: ಮುಕ್ತ ಭಾವದಿಂದ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವಿರಿ. ಆಶ್ಚರ್ಯಕರ ರೀತಿಯಲ್ಲಿ ವಿರೋಧಿಗಳು ಬೆಂಬಲ ಸೂಚಿಸುವರು. ಶುಭಸಂಖ್ಯೆ: 7
ಮಿಥುನ: ಹಿರಿಯರ ಸಕಾಲಿಕ ಸಲಹೆಗಳಿಂದ ಆಗಬಹುದಾಗಿದ್ದ ಸಾಕಷ್ಟು ನಷ್ಟ ತಪ್ಪಿಸಿಕೊಳ್ಳುವಿರಿ. ಮಕ್ಕಳ ಆರೋಗ್ಯದ ಕಡೆ ಗಮನ ಅಗತ್ಯ. ಶುಭಸಂಖ್ಯೆ:1
ಕಟಕ: ಪದೇಪದೇ ನಿರ್ಧಾರ ಬದಲಿಸುವ ನಡವಳಿಕೆ ಯಿಂದಾಗಿ ಕುಟುಂಬದಲ್ಲಿ ಅಸಹನೆ. ವಿವಾಹ ಸಂಬಂಧ ಒದಗುವ ಸಾಧ್ಯತೆ ಇದೆ. ಶುಭಸಂಖ್ಯೆ: 9
ಸಿಂಹ: ಆತುರದ ನಿರ್ಧಾರ ಬೇಡ. ಮಹಿಳೆಯರಿಗೆ ಕುಟುಂಬ ವ್ಯವಹಾರಗಳಲ್ಲಿ ತೃಪ್ತಿ. ಸಾಮಾಜಿಕ ಕಾರ್ಯದಲ್ಲಿ ಭಾಗವಹಿಸುವಿರಿ. ಶುಭಸಂಖ್ಯೆ: 8
ಕನ್ಯಾ: ಸ್ನೇಹಿತರೊಂದಿಗೆ ಚರ್ಚೆ ಮಾಡಿ. ಸಾಲ ಮರುಪಾವತಿ ಮಾಡಿ ಗೌರವ ಉಳಿಸಿಕೊಳ್ಳುವಿರಿ. ಪಿತ್ರಾರ್ಜಿತ ಆಸ್ತಿ ಬಗ್ಗೆ ಮನಃಸ್ತಾಪ. ಶುಭಸಂಖ್ಯೆ: 4
ತುಲಾ: ಹಲವು ಪ್ರಯತ್ನ ಮಾಡುವಿರಿ. ಕೃಷಿಕರಿಗೆ ಬೆಲೆ ಕುಸಿತದ ಆತಂಕ. ಸ್ವಯಂ ಉದ್ಯೋಗದಲ್ಲಿ ಉತ್ತಮ ವ್ಯವಹಾರ, ಆದಾಯ. ಶುಭಸಂಖ್ಯೆ:1
ವೃಶ್ಚಿಕ: ಅನಿರೀಕ್ಷಿತ ಮೂಲಗಳಿಂದ ಆರ್ಥಿಕ ಸಹಾಯ. ಬಾಹ್ಯಾಕಾಶ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಮೇಲ್ದರ್ಜೆಯ ಹುದ್ದೆ ಸಾಧ್ಯತೆೆ. ಶುಭಸಂಖ್ಯೆ:7
ಧನುಸ್ಸು: ಕೆಲವೊಂದು ವಿಷಯಗಳಲ್ಲಿ ಭಾವೋದ್ವೇಗಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಸ್ವಲ್ಪ ಸಮಾಧಾನ ಚಿತ್ತದಿಂದ ವ್ಯವಹರಿಸಿರಿ. ಶುಭಸಂಖ್ಯೆ:6
ಮಕರ: ಸತ್ಯಶೋಧನೆಯಿಂದ ಆಂತರಿಕ ಗೊಂದಲಗಳ ನಿವಾರಣೆ. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಜಾಗರೂಕತೆ ಅಗತ್ಯ. ಶುಭಸಂಖ್ಯೆ:7
ಕುಂಭ: ಕೃಷಿ ಯಂತ್ರಗಳನ್ನು ಹೊಂದಿರುವವರಿಗೆ ಬಾಡಿಗೆಯಿಂದ ಹೆಚ್ಚಿನ ಆದಾಯ ಇದೆ. ಪ್ರೀತಿ- ಪ್ರೇಮದಲ್ಲಿ ಬಿದ್ದವರಿಗೆ ಹಿನ್ನಡೆ. ಶುಭಸಂಖ್ಯೆ:1
ಮೀನ: ನಿಮ್ಮ ಸಾಮರ್ಥ್ಯವನ್ನು ಅರಿತು ಕೆಲಸ ಆಯ್ಕೆಮಾಡಿ ಕೊಳ್ಳಿ. ನೌಕರಿಯಲ್ಲಿರುವವರಿಗೆ ಬಯಸಿದ್ದ ಸ್ಥಳಕ್ಕೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 9