ನಿತ್ಯಭವಿಷ್ಯ: ಈ ರಾಶಿಯವರಿಗೆ ಅಪಘಾತ ಸಾಧ್ಯತೆ ಎಚ್ಚರ

Nitya Bhavisya Vijayavani
Published on

ಮೇಷ: ಹಣಕಾಸು ವಿಚಾರವಾಗಿ ವಾಗ್ವಾದ. ಕುಟುಂಬದಲ್ಲಿ ಸಂಭ್ರಮ. ವ್ಯಾಪಾರದಲ್ಲಿ ಕಿರಿಕಿರಿ. ಕೌಟುಂಬಿಕ ಸಮಸ್ಯೆಯಿಂದ ನಿದ್ರಾಭಂಗ. ಶುಭಸಂಖ್ಯೆ: 6

ವೃಷಭ: ಬಂಧುಗಳ ಆಗಮನ. ಹಿರಿಯ ಸಹೋದರನಿಂದ ನಷ್ಟ. ಮಾನಸಿಕ ನೆಮ್ಮದಿ ಹಾಳು. ಗಾರ್ವೆಂಟ್ ವ್ಯಾಪಾರಿಗಳಿಗೆ ಶುಭದಿನ. ಶುಭಸಂಖ್ಯೆ: 1

ಮಿಥುನ: ಹಿರಿಯ ಸಹೋದರಿಯಿಂದ ಧನಾಗಮನ. ಬ್ಯಾಂಕ್ ಉದ್ಯೋಗಿಗಳಿಗೆ ಕೆಲಸದ ಒತ್ತಡ. ಶತ್ರುಗಳಿಂದ ತೊಂದರೆಗೆ ಸಿಲುಕುವಿರಿ. ಶುಭಸಂಖ್ಯೆ: 2

ಕಟಕ: ಕಾರ್ಯದಲ್ಲಿ ಮುನ್ನಡೆ. ವಿವಾಹಯತ್ನದಲ್ಲಿ ಹಿನ್ನಡೆಯಾದರೂ ಪ್ರಗತಿಯಿದೆ. ಪರೀಕ್ಷೆಯಲ್ಲಿ ಜಯ. ಉದ್ಯೋಗದಲ್ಲಿ ನಿರಾಸಕ್ತಿ. ಶುಭಸಂಖ್ಯೆ:2

ಸಿಂಹ: ದುಂದು ವೆಚ್ಚದಿಂದ ನಷ್ಟ. ದೂರ ಪ್ರಯಾಣ ಸಾಧ್ಯತೆ. ಆಸ್ತಿ ವಿಚಾರದಲ್ಲಿ ತಂದೆ-ಮಕ್ಕಳಲ್ಲಿ ಕಲಹ. ವೈದ್ಯ ವೃತ್ತಿಯಲ್ಲಿ ಸವಾಲು. ಶುಭಸಂಖ್ಯೆ: 8

ಕನ್ಯಾ: ಉದ್ಯೋಗಸ್ಥ ಮಹಿಳೆಯರಿಗೆ ಅನಿರೀಕ್ಷಿತ ತಿರುವು. ದಾಂಪತ್ಯದಲ್ಲಿ ವಿರಸ. ಅನಗತ್ಯ ಕಿರಿಕಿರಿ. ಮಾಂಗಲ್ಯ ಭಾಗ್ಯ ಕೂಡಿ ಬರಲಿದೆ. ಶುಭಸಂಖ್ಯೆ: 7

ತುಲಾ: ಸಂಗಾತಿಯೇ ಶತ್ರು. ಸಾಲಬಾಧೆಯಿಂದ ಅಶಾಂತಿ. ಮಾತಿನಲ್ಲಿ ಎಚ್ಚರ. ಸಾರ್ವಜನಿಕ ಮನ್ನಣೆ. ಸಗಟು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 6

ವೃಶ್ಚಿಕ: ಪ್ರಯಾಣದಲ್ಲಿ ಅಮೂಲ್ಯ ವಸ್ತು ಕಳವು. ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗಕ್ಕೆ ರಜೆ ಹಾಕುವಿರಿ. ಮೇಲಧಿಕಾರಿಗಳಿಂದ ಕಿರಿಕಿರಿ. ಶುಭಸಂಖ್ಯೆ: 5

ಧನುಸ್ಸು: ಕುಟುಂಬದಲ್ಲಿ ಅವಮಾನಕ್ಕೆ ಗುರಿಯಾಗುವಿರಿ. ವಿಚ್ಛೇದನ ಕೇಸ್​ನಲ್ಲಿ ಜಯ. ಮಕ್ಕಳಿಂದ ಧನ ನಷ್ಟ. ನೆಮ್ಮದಿ ಇಲ್ಲದ ಜೀವನ. ಶುಭಸಂಖ್ಯೆ: 9

ಮಕರ: ಕೃಷಿ ಭೂಮಿ ಖರೀದಿಸುವ ನಿರ್ಧಾರ. ಜೇನು ಸಾಕಣೆ ಮಾಡುವವರಿಗೆ ಲಾಭ. ಮಾನಸಿಕ ವ್ಯಥೆ. ಮೋಸ ಹೋಗುವ ಸಾಧ್ಯತೆ. ಶುಭಸಂಖ್ಯೆ: 6

ಕುಂಭ: ಸ್ವಯಂಕೃತ ಅಪರಾಧಗಳಿಂದ ಆರ್ಥಿಕ ಸಂಕಷ್ಟ ಆದೀತು. ಸ್ವಂತ ಉದ್ದಿಮೆದಾರರಿಗೆ ಗ್ರಾಹಕರ ಅಭಾವ. ಬಂಧುಗಳಿಂದ ಕಿರಿಕಿರಿ. ಶುಭಸಂಖ್ಯೆ: 1

ಮೀನ: ಹೆಣ್ಣು ಮಕ್ಕಳಿಂದ ಧನಾಗಮ. ಕುಟುಂಬ ಸಮೇತ ಪುಣ್ಯಕ್ಷೇತ್ರಕ್ಕೆ ಪ್ರಯಾಣ. ಆರ್ಥಿಕ ವಿಚಾರವಾಗಿ ಕಲಹ. ಅಪಘಾತ ಸಾಧ್ಯತೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net