

ಮೇಷ: ಪದವಿ ಪ್ರಾಪ್ತಿಯಲ್ಲಿ ಅಡೆತಡೆ. ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಸರ್ಕಾರಿ ಕ್ಷೇತ್ರದ ಮಹಿಳಾ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ: 2
ವೃಷಭ: ಸಂಗೀತಗಾರರಿಗೆ ವಿಶೇಷ ವೇದಿಕೆ. ಸಾರ್ವಜನಿಕವಾಗಿ ರಾಜಕಾರಣಿಗಳಿಗೆ ಹಿನ್ನಡೆ. ಅಧಿಕಾರಿಗಳಿಗೆ ಸಹವರ್ತಿಗಳಿಂದ ಮೋಸ. ಶುಭಸಂಖ್ಯೆ: 8
ಮಿಥುನ: ಅರಣ್ಯ ಉತ್ಪನ್ನಗಳ ಮಾರಾಟದಲ್ಲಿ ಲಾಭ. ಗೃಹ ಆರಂಭಕ್ಕೆ ಯೋಜನೆ ಸಿದ್ಧ. ಉದ್ಯೋಗ ಪ್ರಾಪ್ತಿಯಲ್ಲಿ ವಿಳಂಬವಾಗಬಹುದು. ಶುಭಸಂಖ್ಯೆ: 6
ಕಟಕ: ನಿಮ್ಮ ಧೋರಣೆಯ ಬಗ್ಗೆ ಕುಟುಂಬದಲ್ಲಿ ವಿರೋಧ. ದೃಢ ನಿರ್ಧಾರ ಮಾಡುವಲ್ಲಿ ಗೊಂದಲ. ಖಿನ್ನತೆಗೆ ಜಾರುವ ಸಾಧ್ಯತೆ. ಶುಭಸಂಖ್ಯೆ: 1
ಸಿಂಹ: ಚಿನ್ನ -ಬೆಳ್ಳಿ ವ್ಯಾಪಾರದಲ್ಲಿ ಲಾಭ. ಷೇರು ವ್ಯವಹಾರದಲ್ಲಿ ಎಚ್ಚರವಿರಲಿ. ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ, ಹುಷಾರಾಗಿರಿ. ಶುಭಸಂಖ್ಯೆ: 9
ಕನ್ಯಾ: ಮನೆ ಖರೀದಿಗೆ ತೀರ್ವನ. ಹಳೇ ಸ್ನೇಹಿತನ ಭೇಟಿ. ಕುಟುಂಬ ಸಮೇತ ಯಾತ್ರೆ. ದಿನದ ಅಂತ್ಯದಲ್ಲಿ ಆತ್ಮೀಯರ ವಿಯೋಗ. ಶುಭಸಂಖ್ಯೆ: 2
ತುಲಾ: ಹೂಡಿಕೆ ವ್ಯವಹಾರಕ್ಕೆ ಹೊಸ ಪಾಲುದಾರರು. ಷೇರು ವ್ಯವಹಾರದಲ್ಲಿ ಲಾಭ. ಕಿರುಚಿತ್ರ ತಂತ್ರಜ್ಞರಿಗೆ ವಿಶೇಷ ಅವಕಾಶ ಲಭ್ಯ. ಶುಭಸಂಖ್ಯೆ: 6
ವೃಶ್ಚಿಕ: ಪಿತ್ರಾರ್ಜಿತ ಆಸ್ತಿಗಾಗಿ ವಾಗ್ವಾದ. ಕೋರ್ಟ್ ಕೆಲಸದಲ್ಲಿ ವಿಳಂಬ. ಕಾರ್ಖಾನೆ ಮಾಲೀಕರಿಗೆ ಅಶುಭ. ರಿಯಲ್ಎಸ್ಟೇಟ್ನಲ್ಲಿ ಲಾಭ. ಶುಭಸಂಖ್ಯೆ: 3
ಧನಸ್ಸು: ಸಹೋದ್ಯೋಗಿಗಳಿಂದ ಸಹಾಯ. ಸಂಗಾತಿಯೊಂದಿಗೆ ಕಲಹ. ಕಷ್ಟಜೀವಿಗಳಿಗೆ ಧನ ಲಾಭ. ಆನ್ಲೈನ್ ವ್ಯವಹಾರದಲ್ಲಿ ಮೋಸ. ಶುಭಸಂಖ್ಯೆ: 9
ಮಕರ: ಕುಟುಂಬದಲ್ಲಿ ಆತಂಕ ಕಾಣಿಸೀತು. ಶಸ್ತ್ರ ಚಿಕಿತ್ಸೆ ಸಾಧ್ಯತೆ. ಭೂ ಖರೀದಿ ವಿವಾದವಾಗಲಿದೆ. ಉದ್ಯೋಗ ಬದಲಾವಣೆ ಸಾಧ್ಯತೆ. ಶುಭಸಂಖ್ಯೆ: 1
ಕುಂಭ: ಅವಿವಾಹಿತರಿಗೆ ಶುಭ ಸುದ್ದಿ. ನವದಂಪತಿಗೆ ತೊಂದರೆ. ಆಟೋ ಚಾಲಕರಿಗೆ ವಿಶೇಷ ದಿನ. ಸಗಟು ವ್ಯಾಪಾರದಲ್ಲಿ ಮೋಸ. ಶುಭಸಂಖ್ಯೆ: 7
ಮೀನ: ಕುಟುಂಬದ ಸಮಸ್ಯೆಗಳಿಂದ ನಿದ್ರಾಭಂಗ. ಅಪರಿಚಿತರಿಂದ ಮೋಸವಾದೀತು, ಎಚ್ಚರ. ಅಮೂಲ್ಯ ವಸ್ತು ಖರೀದಿಸುವಿರಿ. ಶುಭಸಂಖ್ಯೆ: 3