

ಮೇಷ: ಗುರು ಹಿರಿಯರ ಭೇಟಿ ಮಾಡುವಿರಿ. ಶತ್ರುಬಾಧೆ ವಿಪರೀತವಾಗಲಿದೆ. ವಾದ-ವಿವಾದಗಳಲ್ಲಿ ಎಚ್ಚರ ವಹಿಸುವುದು ಕ್ಷೇಮ. ಶುಭಸಂಖ್ಯೆ: 5
ವೃಷಭ: ಸ್ತ್ರೀಯರಿಗೆ ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ. ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಕಾರ್ಯಸಾಧನೆಗಾಗಿ ತಿರುಗಾಟ. ಶುಭಸಂಖ್ಯೆ: 1
ಮಿಥುನ: ಭೂ ವ್ಯವಹಾರದಲ್ಲಿ ಎಚ್ಚರದಿಂದಿರಿ. ನೆರೆಯವರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿ ಆಗಲಿದೆ. ದಾಂಪತ್ಯದಲ್ಲಿ ವಿರಸ. ಶುಭಸಂಖ್ಯೆ: 6
ಕಟಕ: ಇಷ್ಟಾರ್ಥ ಸಿದ್ಧಿಗೆ ಅಡೆತಡೆ ಎದುರಾಗುವುದು. ಮಾತಾಪಿತರಲ್ಲಿ ಪ್ರೀತಿ. ನಂಬಿದ ಜನರಿಂದ ಮೋಸ. ಜೇನು ಕೃಷಿಕರಿಗೆ ವಿಶೇಷ ದಿನ. ಶುಭಸಂಖ್ಯೆ: 8
ಸಿಂಹ: ಅವಿವಾಹಿತರಿಗೆ ವಿವಾಹಯೋಗ. ಹಳೇ ಸ್ನೇಹಿತರ ಭೇಟಿ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ನೌಕಾಯಾನ ಯೋಗವಿದೆ. ಶುಭಸಂಖ್ಯೆ: 1
ಕನ್ಯಾ: ಆಸ್ತಿ ವ್ಯವಹಾರದಲ್ಲಿ ಕಾರ್ಯಸಿದ್ಧಿಯಾಗಿ ಸಮಾಧಾನ. ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ. ಕೃಷಿಕರಿಗೆ ನಷ್ಟ ಸಾಧ್ಯತೆ. ಶುಭಸಂಖ್ಯೆ: 9
ತುಲಾ: ದೇವತಾ ಕಾರ್ಯಗಳಲ್ಲಿ ಭಾಗಿ. ಕಬ್ಬಿಣದ ವ್ಯಾಪಾರಿಗಳಿಗೆ ಲಾಭ. ಆನ್ಲೈನ್ ವ್ಯವಹಾರದಲ್ಲಿ ಎಚ್ಚರದಿಂದಿರಿ. ಶ್ರಮಕ್ಕೆ ತಕ್ಕ ಫಲ. ಶುಭಸಂಖ್ಯೆ: 5
ವೃಶ್ಚಿಕ: ಶುಭ ಕಾರ್ಯಕ್ಕೆ ವಿಪರೀತ ಖರ್ಚು. ಮಗಳ ವಿವಾಹ ಕೆಲಸ ಕಾರ್ಯಗಳಲ್ಲಿ ವಿಘ್ನ. ವೈದ್ಯರಿಗೆ ಉತ್ತಮ ಆದಾಯ ಸಿಗಲಿದೆ. ಶುಭಸಂಖ್ಯೆ: 4
ಧನಸ್ಸು: ಮಿತ್ರರು ಶತ್ರುಗಳಾಗಲಿದ್ದಾರೆ, ಎಚ್ಚರದಿಂದಿರಿ. ಮರಮಟ್ಟುಗಳ ವ್ಯಾಪಾರದಲ್ಲಿ ಲಾಭವಾಗುವುದು. ಆಪ್ತರೊಡನೆ ಕಲಹ. ಶುಭಸಂಖ್ಯೆ: 3
ಮಕರ: ಐಟಿ ಉದ್ಯೋಗಿಗಳಿಗೆ ಉದ್ಯೋಗ ನಷ್ಟವಾಗುವ ಭೀತಿ. ಮನೆಯಲ್ಲಿ ಶುಭಕಾರ್ಯದ ಸಡಗರ. ದುಷ್ಟರಿಂದ ದೂರವಿರಿ. ಶುಭಸಂಖ್ಯೆ: 2
ಕುಂಭ: ಸ್ನೇಹಿತರ ಮಾತಿಗೆ ಮರುಳಾಗಬೇಡಿ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಚಂಚಲ ಮನಸ್ಸು. ಯತ್ನ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 8
ಮೀನ: ಆರೋಗ್ಯದ ನಿರ್ಲಕ್ಷ್ಯದಿಂದ ಶಸ್ತ್ರಚಿಕಿತ್ಸೆ ಸಾಧ್ಯತೆ. ಮಧ್ಯವರ್ತಿಗಳಿಗೆ ದ್ರವ್ಯಲಾಭವಾಗಲಿದೆ. ವಾಣಿಜ್ಯ ಉದ್ಯೋಗದಲ್ಲಿ ತೊಂದರೆ. ಶುಭಸಂಖ್ಯೆ: 3