ನಿತ್ಯಭವಿಷ್ಯ|ಈ ರಾಶಿಯವರು ಅತಿಯಾದ ಸಲುಗೆ ತೋರದಿರಿ..

Nitya-Bhavishya-vvani-1-2
Published on

ಜಾಣ್ಮೆಯ ಮೂಲಕ ಜನರ ಗಮನ ಸೆಳೆಯುವ ನೀವು ಅಚಾತುರ್ಯ ಉಂಟಾಗದಂತೆ ಹೆಚ್ಚಿನದಾದ ಕಾಳಜಿ ವಹಿಸಿ. ಶುಭಸಂಖ್ಯೆ: 9

ನಿಮ್ಮ ಪ್ರಾಮಾಣಿಕ ನಡೆ-ನುಡಿಗಳೇ ವೃತ್ತಿಯಲ್ಲಿ ಯಶಸ್ಸನ್ನು ತಂದುಕೊಡಲಿವೆ. ಅವೇ ಕಷ್ಟಕಾಲದಲ್ಲಿ ರಕ್ಷಿಸಲಿವೆ. ಶುಭಸಂಖ್ಯೆ: 8

ಹವಾಮಾನದ ಏರುಪೇರುಗಳಿಂದ ಅನಾರೋಗ್ಯವಾದೀತು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಶುಭಸಂಖ್ಯೆ: 5

ಊರಿನಲ್ಲಿ ನಿಮ್ಮ ಘನತೆ, ಗೌರವ ಹೆಚ್ಚಾಗಲಿದೆ.ಆದರೆ ಯಾರಿಗೂ ಅತಿಯಾದ ಸಲುಗೆ ಮಾತ್ರ ಕೊಡಲು ಹೋಗದಿರಿ. ಶುಭಸಂಖ್ಯೆ: 4

ವ್ಯಾಪಾರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ನಿಮ್ಮ ಸಲಹೆಗಳನ್ನು ಪಡೆದುಕೊಳ್ಳಲು ಪ್ರತಿಷ್ಠಿತ ಜನರೇ ಬರಲಿದ್ದಾರೆ. ಶುಭಸಂಖ್ಯೆ: 2

ಕಾಂಟ್ರ್ಯಾಕ್ಟರ್​ಗಳು, ಗೃಹಾಲಂಕಾರ ವ್ಯಾಪಾರಿಗಳು, ಒಳಾಂಗಣ ವಿನ್ಯಾಸಕಾರರಿಗೆ ಲಾಭ ಒದಗಿಬರಲಿದೆ. ಶುಭಸಂಖ್ಯೆ: 1

ಮನದೊಳಗೇ ಅವಿತುಕೊಂಡಿರುವ ವಿಚಾರಗಳನ್ನು ಅಲ್ಲೇ ಇರಲು ಬಿಡಬೇಡಿ. ಸಾಕಾರಗೊಳಿಸಲು ಯತ್ನಿಸಿ. ಶುಭಸಂಖ್ಯೆ: 6

ಎಲ್ಲವೂ ನಿಮ್ಮ ನಿರೀಕ್ಷೆಯಂತೆಯೇ ಸಾಗುತ್ತದೆಂಬ ಅತಿಯಾದ ನಂಬಿಕೆ ಬೇಡ. ಚಾತುರ್ಯ ಮಾತ್ರ ಇರಲಿ. ಶುಭಸಂಖ್ಯೆ: 3

ನಿಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಎಚ್ಚರ ವಹಿಸಿ. ಅಪರಿಚಿತರು ಹತ್ತಿರವಾಗಲು ಯತ್ನಿಸಬಹುದು. ಜಾಗ್ರತೆ. ಶುಭಸಂಖ್ಯೆ: 7

ನೊಂದವರ ಕಣ್ಣೀರು ಒರೆಸುವ ನಿಮ್ಮ ಸಜ್ಜನಿಕೆಗೆ ಮನ್ನಣೆ ದೊರೆಯಲಿದೆ. ಅಪಾತ್ರರಿಗೆ ದಾನ ಮಾಡದಿರಿ. ಶುಭಸಂಖ್ಯೆ: 9

ಇಚ್ಛಿಸಿದ ಸಂಕಲ್ಪಗಳು ಸಾಕಾರಗೊಳ್ಳಲು ಸಂದರ್ಭ ಒದಗಿಬಂದಿದೆ. ಕುಲದೇವರನ್ನು ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಿ. ಶುಭಸಂಖ್ಯೆ: 8

ನಿಮ್ಮಲ್ಲಿನ ಪ್ರತಿಭೆಯಿಂದಲೇ ಯಶಸ್ಸು ದೊರೆಯುತ್ತದೆ. ಮಕ್ಕಳ ಆರೋಗ್ಯದ ಬಗೆಗೂ ಸ್ವಲ್ಪ ಗಮನ ಹರಿಸಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net