ಈ ರಾಶಿಯವರು 'ಅವರ' ಜತೆ ಮಾತ್ರ ಮಾತಿನ ಚಕಮಕಿಯಲ್ಲಿ ಮಾತ್ರ ತೊಡಗಬೇಡಿ..

Nithya Bhavishya vvani
Published on

ಮೇಷ: ಮತ್ತೆ ಮತ್ತೆ ಹಳೆಯ ತಪ್ಪನ್ನೇ ಪುನರಾವರ್ತನೆ

ಮಾಡುತ್ತಿದ್ದೀರಿ. ಧನವ್ಯಯವಾಗುವ ಭಯವಿದೆ.

ಎಚ್ಚರ ಇರಲಿ. ಶುಭಸಂಖ್ಯೆ: 6

ವೃಷಭ: ನಿಮ್ಮ ಸಂಗಾತಿಯಾಗುವವರು

ಮಾತಾಡಲು ಇಚ್ಛಿಸಬಹುದು. ಈ ವೇಳೆ

ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಶುಭಸಂಖ್ಯೆ: 3

ಮಿಥುನ: ವೈದ್ಯರು, ಸರ್ಕಾರಿ ಅಧಿಕಾರಿಗಳು

ಜನಮನ್ನಣೆಯಿಂದ ಹರ್ಷಪಡುವ ಅಪರೂಪದ

ಸನ್ನಿವೇಶ ಸೃಷ್ಟಿಯಾಗಲಿದೆ. ಶುಭಸಂಖ್ಯೆ: 9

ಕಟಕ: ಅನಿರೀಕ್ಷಿತ ಜಯಕ್ಕೆ ಅನಪೇಕ್ಷಣೀಯ

ತಿರುವು ಸಿಗುವ ಸಾಧ್ಯತೆ ಹೆಚ್ಚು. ಗುರು

ದತ್ತಾಷ್ಟಕ ಪಠಣದಿಂದ ಒಳಿತಿದೆ. ಶುಭಸಂಖ್ಯೆ: 5

ಸಿಂಹ: ಪ್ರಯಾಣದಲ್ಲಿ ಅಡಚಣೆಗಳು

ಸಂಭವಿಸಬಹುದು. ಚಂದ್ರಪೀಡಾ ನಿವಾರಣಾ

ಸ್ತೋತ್ರವನ್ನು ಭಕ್ತಿಯಿಂದ ಪಠಿಸಿ. ಶುಭಸಂಖ್ಯೆ: 2

ಕನ್ಯಾ: ಸಹೋದ್ಯೋಗಿಗಳು ಅಸಹಕಾರ

ತೋರಬಹುದು. ಅವರ ಜತೆ ಮಾತಿನ

ಚಕಮಕಿಯಲ್ಲಿ ಮಾತ್ರ ತೊಡಗಬೇಡಿ. ಶುಭಸಂಖ್ಯೆ: 8

ತುಲಾ: ನಿರಂತರವಾದ ವಿವಾದಗಳಿಂದ

ಹೊರಬರಲು ಹೊಂದಾಣಿಕೆಯ ಅವಕಾಶ

ಬರಲಿದೆ. ಧನಾತ್ಮಕವಾಗಿ ಸ್ಪಂದಿಸಿ. ಶುಭಸಂಖ್ಯೆ: 4

ವೃಶ್ಚಿಕ: ಬಹುಮುಖ್ಯ ವಹಿವಾಟಿನ ಆರಂಭಕ್ಕೂ

ಮೊದಲಿನ ಕಾತರ ಅನುಭವಿಸುವಿರಿ. ವ್ಯಾವಹಾರಿಕ

ಚಾತುರ್ಯ ತೋರಿ. ಶುಭಸಂಖ್ಯೆ: 1

ಧನುಸ್ಸು: ಪುಸ್ತಕ ಪ್ರಕಾಶಕರು, ಲೇಖಕರು,

ವ್ಯಾಪಾರಿಗಳಿಗೆ ಶುಭದ ದಿನ. ವಾಗ್ದೇವಿ

ಸರಸ್ವತಿಯನ್ನು ಭಕ್ತಿಯಿಂದ ಪ್ರಾರ್ಥಿಸಿ. ಶುಭಸಂಖ್ಯೆ: 7

ಮಕರ: ವ್ಯಾಪಾರದಲ್ಲಿ ಲಾಭವಾಗಲಿದೆ.

ಮಾತಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಅರ್ಥಪೂರ್ಣ

ಮಾತಿನಿಂದ ಧನಲಾಭವಿದೆ. ಶುಭಸಂಖ್ಯೆ: 3

ಕುಂಭ: ಆಧ್ಯಾತ್ಮಿಕ ಸಾಧನೆಗಳಿಂದ ಒತ್ತಡಗಳು

ದೂರವಾಗಲಿವೆ. ಇದರಿಂದ ಹೊಸ ಸಿದ್ಧಿಗೆ

ದಾರಿಯೂ ತೆರೆದುಕೊಳ್ಳಲಿದೆ. ಶುಭಸಂಖ್ಯೆ: 6

ಮೀನ: ತೆರಿಗೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು

ಎದುರಿಸಬೇಕಾಗುತ್ತದೆ. ಶ್ರೀಸೂಕ್ತದಿಂದ

ಲಕ್ಷ್ಮಿಯನ್ನು ಆರಾಧಿಸಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net