ವ್ಯರ್ಥ ಮಾತುಗಳನ್ನಾಡಿ ನಂಬಿಸುವ ಜನರನ್ನು ಈ ರಾಶಿಯವರು ದೂರವೇ ಇಡಿ...

Nitya-Bhavishya-vvani-1-2-1
Published on

ಮೇಷ: ಕೆಲವರು ನಿಮ್ಮಲ್ಲಿರುವ ಪ್ರಾಮಾಣಿಕತೆಯನ್ನು ಪ್ರಶ್ನಿಸಬಹುದು. ನೀವು ಮಾತ್ರ ಸಾಧ್ಯವಾದಷ್ಟು ತಾಳ್ಮೆ ವಹಿಸುವುದು ಉತ್ತಮ. ಶುಭಸಂಖ್ಯೆ: 7

ವೃಷಭ: ಹೊಸ ಸಂದರ್ಭದಲ್ಲಿನ ರೀತಿನೀತಿಗಳನ್ನು ಕಡೆಗಣಿಸದಿರಿ. ಬುದ್ಧಿವಂತಿಕೆಯ ಹೊಸ ವಿಧಾನಗಳಿಂದ ಜಯಿಸಬಲ್ಲಿರಿ. ಶುಭಸಂಖ್ಯೆ: 3

ಮಿಥುನ: ಮಹಾಗಣಪತಿಯ ಆರಾಧನೆಯಿಂದಾಗಿ ಕೈಗೊಂಡ ಕಾರ್ಯದಲ್ಲಿ ಬರುವ ಅಡೆತಡೆಗಳನ್ನು ಗೆಲ್ಲುವ ಶಕ್ತಿ ಪಡೆಯುವಿರಿ. ಶುಭಸಂಖ್ಯೆ: 9

ಕಟಕ: ಪರಸ್ಪರ ನಂಬಲಾಗದ ಸ್ಥಿತಿಯಲ್ಲಿರುವ ಸಹಪಾಲುದಾರರು ತಲೆನೋವು ತಂದರೂ ಜಾಣ್ಮೆಯಿಂದ ನಿಭಾಯಿಸಿ. ಶುಭಸಂಖ್ಯೆ: 1

ಸಿಂಹ: ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಬೇಕಾಗುತ್ತದೆ. ವೈದ್ಯರ ಸಲಹೆಯನ್ನು ಪಡೆಯಲು ಮಾತ್ರ ಮರೆಯದಿರಿ. ಶುಭಸಂಖ್ಯೆ: 8

ಕನ್ಯಾ: ಹೊಸ ಸಂಶೋಧನೆಗಳನ್ನು ಒಳಗೊಂಡಿರುವ ವಿನೂತನವಾದ, ಸೂಕ್ಷ್ಮ ಉದ್ಯೋಗಕ್ಕೆ ಅವಕಾಶ ದೊರೆಯಲಿದೆ. ಶುಭಸಂಖ್ಯೆ: 5

ತುಲಾ: ಆಯ್ಕೆಯ ಗೊಂದಲಗಳು ಎದುರಾಗಲಿವೆ. ರ್ತಾಕತೆಯಿಂದ ಕೂಡಿದ ಏಕಾಗ್ರತೆಯೇ ನಿಮ್ಮನ್ನು ಕಾಪಾಡಲಿದೆ. ಶುಭಸಂಖ್ಯೆ: 2

ವೃಶ್ಚಿಕ: ನಿಮಗೆ ಅಗತ್ಯವಾಗಿ ಬೇಕಾದ ವಿಚಾರವೊಂದು ದೂರದ ಸಂಬಂಧಿಕರಿಂದ ಸಿಗಲಿದೆ. ಹೀಗಾಗಿ ಅವರನ್ನು ಮರೆಯಬೇಡಿ. ಶುಭಸಂಖ್ಯೆ: 4

ಧನಸ್ಸು: ಕೆಲಸಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಬೇಕೆಂಬ ನಿರ್ಧಾರ ಸಾಕಾರಗೊಳ್ಳಲಿದೆ. ಆದರೆ ಗಡಿಬಿಡಿ ಮಾಡಬೇಡಿ. ಶುಭಸಂಖ್ಯೆ: 6

ಮಕರ: ಮನೆಯ ವಿಷಯವಾಗಿ ಗಲಿಬಿಲಿಗೊಳ್ಳುವ ವಿಚಾರವನ್ನು ಕೇಳಲಿದ್ದೀರಿ. ಸಮಸ್ಯೆಯಿಂದ ನಿಧಾನವಾಗಿಯೇ ಬಿಡಿಸಿಕೊಳ್ಳಿ. ಶುಭಸಂಖ್ಯೆ: 7

ಕುಂಭ: ವ್ಯಕ್ತಿತ್ವವನ್ನು ವೃದ್ಧಿಸಿಕೊಂಡು ಮೇಲಕ್ಕೇರಲು ನೆರವಾಗುವಂತಹ ಹೊಸ ಜವಾಬ್ದಾರಿಯೊಂದು ನಿಮಗಿಂದು ಒದಗಿಬರಲಿದೆ. ಶುಭಸಂಖ್ಯೆ: 9

ಮೀನ: ವ್ಯರ್ಥವಾದ ಮಾತುಗಳನ್ನಾಡಿ ನಂಬಿಸುವಂಥ ಜನರನ್ನು ದೂರ ಇಡಿ. ಸ್ವಸಾಮರ್ಥ್ಯದಿಂದಲೇ ವಿಜಯವನ್ನು ಸಾಧಿಸಲಿದ್ದೀರಿ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net