ಸಮಸ್ಯೆ ಬಗೆಹರಿಸುವುದಕ್ಕಾಗಿ ಮಹತ್ವದ ವ್ಯಕ್ತಿಯೊಬ್ಬರು ಈ ರಾಶಿಯವರಿಗೆ ಎದುರಾಗಬಹುದು !

Nithya Bhavishya
Published on

ಮೇಷ: ಅಲೌಕಿಕ ವಿಚಾರದ ಬೆನ್ನು ಹಿಡಿದಿರುವ

ನಿಮಗೆ ಹೊಸ ದರ್ಶನದ ಪ್ರಾಪ್ತಿಯಿದೆ.

ಭವಾನಿಯ ಸ್ತುತಿ ಮಾಡಿ. ಶುಭಸಂಖ್ಯೆ: 1

ವೃಷಭ: ಕುಟುಂಬದಲ್ಲಿನ ಶುಭಸಮಾರಂಭಕ್ಕೆ

ಪ್ರಮುಖ ನಿರ್ಣಯ ಕೈಗೊಳ್ಳುವಿರಿ. ಆದರೆ

ಆತುರದ ಬುದಿಟಛಿಯನ್ನು ಬಿಡಿ. ಶುಭಸಂಖ್ಯೆ: 3

ಮಿಥುನ: ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆಯಾದರೂ

ಅತಿಯಾದ ಸಂತೋಷ ಬೇಡ. ಹಿಂದಿನ

ಏರುಪೇರುಗಳನ್ನು ಸರಿಪಡಿಸಿ. ಶುಭಸಂಖ್ಯೆ: 5

ಕಟಕ: ಬಂಧುಗಳ ಅವಸರದಿಂದ ಬಾಧೆಪಡುವಿರಿ.

ಸೋಮಾರಿತನದಿಂದ ಅಮೃತವೂ ವಿಷವೇ

ಆದೀತು. ಆಲಸ್ಯ ಮಾತ್ರ ಬೇಡ. ಶುಭಸಂಖ್ಯೆ: 7

ಸಿಂಹ: ಸ್ವಜನರ ಬಾಧೆ ಇದ್ದರೂ ಲಾಭಕ್ಕೆ ಕೂಡ

ದಾರಿ ಇದೆ. ಬೆಟ್ಟಿಂಗ್ ವಿಚಾರದಲ್ಲಿ ಮಾತ್ರ

ಮುಂದುವರಿಯುವುದು ಬೇಡ. ಶುಭಸಂಖ್ಯೆ: 9

ಕನ್ಯಾ: ನಿಮ್ಮ ಕಷ್ಟಗಳಿಗೆ ಪರಿಹಾರದ ಅಭಯ

ಸಿಗಲಿದೆ. ದ್ವಾದಶ ನಾಮಗಳ ಮೂಲಕ

ಕುಲದೇವರ ಅರ್ಚನೆ ಮಾಡಿ. ಶುಭಸಂಖ್ಯೆ: 2

ತುಲಾ: ದುಡ್ಡಿದ್ದವರೆಲ್ಲ ದೊಡ್ಡವರಲ್ಲ ಎಂಬ ಸತ್ಯವನ್ನು

ಮನಗಾಣಲಿದ್ದೀರಿ. ಜನಸಾಮಾನ್ಯರಿಂದ

ಕೂಡ ಮನ್ನಣೆ ದೊರಕಲಿದೆ. ಶುಭಸಂಖ್ಯೆ: 4

ವೃಶ್ಚಿಕ: ಕೀರ್ತಿ ಹೊಂದುವ ಯೋಗವಿದೆ. ನಿಮ್ಮನ್ನು

ಅಣಕಿಸಿದವರೇ ಕ್ಷಮಿಸಿ ಎನ್ನಲಿದ್ದಾರೆ.

ಆರೋಗ್ಯದತ್ತ ಗಮನವಿರಲಿ. ಶುಭಸಂಖ್ಯೆ: 6

ಧನುಸ್ಸು: ದೌರ್ಬಲ್ಯಗಳ ಅವಲೋಕನ ಮಾಡಿಕೊಳ್ಳಿ.

ಬದುಕಿನ ಯಶಸ್ಸಿನ ಮಂತ್ರವಾದ ಹೊಸತನವೇ

ನಿಮ್ಮನ್ನು ಇಂದು ಕಾಪಾಡಲಿದೆ. ಶುಭಸಂಖ್ಯೆ: 8

ಮಕರ: ನಿತ್ಯದ ಕಷ್ಟಗಳ ಮಧ್ಯೆಯೇ ಹಳೆಯ ಕನಸು

ನನಸಾಗಲಿದೆ. ದಿನದ ಕಾರ್ಯಗಳಲ್ಲಿ ಸಕಾರಾತ್ಮಕ

ಬದಲಾವಣೆಗೆ ಅವಕಾಶವಿದೆ. ಶುಭಸಂಖ್ಯೆ: 1

ಕುಂಭ: ಮಹತ್ವದ ವ್ಯಕ್ತಿಯೊಬ್ಬರ ಭೇಟಿ ಮಾಡುವ

ಸಾಧ್ಯತೆ ಇದೆ. ನಿಮ್ಮ ಸಮಸ್ಯೆಗಳಿಗೂ ಅವರಿಂದ

ಪರಿಹಾರದ ದಾರಿ ಸಿಗುತ್ತದೆ. ಶುಭಸಂಖ್ಯೆ: 5

ಮೀನ: ಸಾಧನೆಗಾಗಿ ಹೇರಳವಾದ ಅವಕಾಶಗಳಿವೆ.

ಸಂಗಾತಿಯನ್ನು ವಿಶ್ವಾಸಕ್ಕೆ ಪಡೆದುಕೊಳ್ಳಿ. ಯಾವ

ಕಾರಣಕ್ಕೂ ಜಡತ್ವ ಬೇಡ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net