

ಮೇಷ: ಭೂಮಿ ವಿಷಯವಾಗಿ ಗೆಲುವು ನಿಮ್ಮದಾಗಲಿದೆ. ಶರೀರಕ್ಕೆ ನೋವು. ಅತಿಯಾದ ಆತ್ಮವಿಶ್ವಾಸದಿಂದ ನಷ್ಟವಾಗುವ ಸಾಧ್ಯತೆ. ಶುಭಸಂಖ್ಯೆ: 6
ವೃಷಭ: ರಾಜಕಾರಣಿಗಳಿಗೆ ಅವಮಾನ ಭೀತಿ ಕಾಡೀತು. ಸಾಧು-ಸಂತರ ದರ್ಶನ ಮಾಡಿ. ಮನಸ್ಸು ಮಾಡಿದರೆ ಕಾರ್ಯಸಾಧನೆ. ಶುಭಸಂಖ್ಯೆ: 5
ಮಿಥುನ: ಕಲಾವಿದರಿಗೆ ಸನ್ಮಾನ. ಕಟ್ಟಡ ಸಾಮಗ್ರಿಗಳ ವ್ಯಾಪಾರದಲ್ಲಿ ಲಾಭ. ಕಾರ್ವಿುಕರಿಗೆ ನಷ್ಟ. ಆಸ್ತಿ ವಿವಾದಕ್ಕೆ ಸಂಬಂಧಿಸಿ ಶುಭ ಸುದ್ದಿ. ಶುಭಸಂಖ್ಯೆ: 9
ಕಟಕ: ಆಸ್ತಿ ಖರೀದಿಯಲ್ಲಿ ಮೋಸ ಹೋಗುವ ಸಾಧ್ಯತೆಯಿದೆ. ವೈದ್ಯರಿಗೆ ವಿಶೇಷ ಮನ್ನಣೆ. ರಾಜಕಾರಣಿಗಳಿಗೆ ಉತ್ತಮ ದಿನ. ಶುಭಸಂಖ್ಯೆ: 7
ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಾಗಲಿದೆ. ಉದ್ಯೋಗದಲ್ಲಿ ಬದಲಾವಣೆ ಸಂಭವ. ಸರ್ಕಾರದಿಂದ ಧನಸಹಾಯ. ಶುಭಸಂಖ್ಯೆ:5
ಕನ್ಯಾ: ಸ್ನೇಹಿತರಿಂದ ಕಿರಿಕಿರಿ ಅನುಭವಿಸುವಿರಿ. ಆಹಾರ ವಸ್ತುಗಳ ಪೂರೈಕೆದಾರರಿಗೆ ಲಾಭ. ಹೃದಯ ರೋಗಿಗಳಿಗೆ ತೊಂದರೆ. ಶುಭಸಂಖ್ಯೆ:9
ತುಲಾ: ವಿದ್ಯಾರ್ಥಿಗಳ ಪ್ರಯತ್ನಕ್ಕೆ ಸೂಕ್ತ ಫಲ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಸ್ನೇಹಿತರಿಂದ ಸಹಾಯ. ಶುಭಸಂಖ್ಯೆ:1
ವೃಶ್ಚಿಕ: ಅನವಶ್ಯಕ ವಾದ-ವಿವಾದದಿಂದ ದೂರವಿರುವುದು ಉತ್ತಮ. ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ. ಮಹಿಳೆಯರಿಗೆ ಧನಲಾಭ. ಶುಭಸಂಖ್ಯೆ: 8
ಧನುಸ್ಸು: ಬರಹಗಾರರಿಗೆ ಧನಲಾಭ. ವಿದ್ಯಾರ್ಥಿಗಳಿಗೆ ಅವಕಾಶಗಳು ಲಭ್ಯ. ಪ್ಲಾಸಿಕ್ ಉದ್ದಿಮೆಯಲ್ಲಿ ನಷ್ಟ. ಕಚೇರಿಯಲ್ಲಿ ತಳಮಳ. ಶುಭಸಂಖ್ಯೆ:3
ಮಕರ: ಅಧ್ಯಯನದಲ್ಲಿ ಆಶಾಕಿರಣ. ರಾಜಕಾರಣಿಗಳಿಗೆ ಅಶುಭ. ಮನೆಯಲ್ಲಿ ಶುಭ ಸಮಾರಂಭ. ಪಾಲುದಾರಿಕೆಯಲ್ಲಿ ವೈಮನಸ್ಯ. ಶುಭಸಂಖ್ಯೆ:5
ಕುಂಭ: ಸ್ವಂತ ಗ್ರಾಮಕ್ಕೆ ಪ್ರಯಾಣ ಸಾಧ್ಯತೆ. ವಿದೇಶ ವ್ಯವಹಾರಗಳಲ್ಲಿ ಪ್ರಗತಿ. ಉತ್ತಮ ಧನಲಾಭ ಸಂಭವ. ಅಪರಿಚಿತರಿಂದ ಮೋಸ. ಶುಭಸಂಖ್ಯೆ: 2
ಮೀನ: ಮಹಿಳೆಯರಿಂದ ಆರ್ಥಿಕ ನೆರವು ದೊರೆಯಲಿದೆ. ಮಹಿಳಾ ವಕೀಲರಿಗೆ ಲಾಭ. ಹೈನುಗಾರಿಕೆಯಲ್ಲಿ ಉತ್ತಮ ಆದಾಯ. ಶುಭ ಸಂಖ್ಯೆ 8