ಈ ರಾಶಿಯವರಿಗಿಂದು ದೀರ್ಘಕಾಲದ ಸಮಸ್ಯೆಯಿಂದ ಮುಕ್ತಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆರ್ಥಿಕ ಸಮಸ್ಯೆಯಿಂದ ಮುಕ್ತಿ. ವಾಹನ ಮತ್ತು ಸ್ಥಿರಾಸ್ತಿಯಿಂದ ಅನುಕೂಲ. ಉದ್ಯೋಗದಲ್ಲಿ ಆಲಸ್ಯ ಕಾಣಿಸುವುದು. ಶುಭಸಂಖ್ಯೆ: 1

ವೃಷಭ: ಪತ್ರ ವ್ಯವಹಾರಗಳಲ್ಲಿ ಅನುಕೂಲವಿದೆ. ವಾಹನ, ಗೃಹ ಬದಲಾವಣೆಗೆ ಮನಸ್ಸು ಮಾಡುವಿರಿ. ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ:1

ಮಿಥುನ: ಆರ್ಥಿಕ ಅನುಕೂಲ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಉದ್ಯೋಗ ಬದಲಾವಣೆ ಯಿಂದ ಸಂಕಷ್ಟ ಎದುರಿಸುವಿರಿ. ಶುಭಸಂಖ್ಯೆ: 9

ಕಟಕ: ಅಧಿಕ ಧನಾಗಮನ. ಮಕ್ಕಳಿಂದ ಕಿರಿಕಿರಿ. ಋಣ, ರೋಗ ಬಾಧೆ. ಶತ್ರುಗಳಿಂದ ಮುಕ್ತಿ ದೊರೆತು ಮಾನಸಿಕ ಸಮಾಧಾನ. ಶುಭಸಂಖ್ಯೆ: 6

ಸಿಂಹ: ಬಹುದಿನಗಳ ಕನಸು ನನಸಾಗುವ ಸಮಯ. ಇಷ್ಟ ದೇವರನ್ನು ಭಕ್ತಿಯಿಂದ ಪೂಜಿಸಿ. ಆದಾಯ ಚೆನ್ನಾಗಿದ್ದರೂ ಅನಗತ್ಯ ಖಚು. ಶುಭಸಂಖ್ಯೆ: 5

ಕನ್ಯಾ: ಆರ್ಥಿಕ ಸಮಸ್ಯೆ. ಅಧಿಕ ಸ್ಥಿರಾಸ್ತಿ. ಮಿತ್ರರನ್ನು ನಷ್ಟ ಮಾಡಿಕೊಳ್ಳುವ ಸಂದರ್ಭ. ಸಹೋದರಿಯಿಂದ ಅನುಕೂಲವಾಗುವುದು. ಶುಭಸಂಖ್ಯೆ: 3

ತುಲಾ: ಉದ್ಯೋಗ ವ್ಯಾಪಾರ ಸಮಸ್ಯೆಯಿಂದ ಮುಕ್ತಿ ದೊರೆತು ಮಾನಸಿಕ ನಿರಾಳ. ಆರ್ಥಿಕವಾಗಿ ಸಂತೃಪ್ತಿ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಶುಭಸಂಖ್ಯೆ: 5

ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣ ಮಾಡಬೇಕಾಗುವುದು. ಆರೋಗ್ಯ ಸಮಸ್ಯೆ ಕಾಡುವುದು. ತಂದೆಯಿಂದ ಧನಾಗಮನ. ಶುಭಸಂಖ್ಯೆ: 2

ಧನುಸ್ಸು: ದೀರ್ಘಕಾಲದ ಸಮಸ್ಯೆಯಿಂದ ಮುಕ್ತಿ. ನೀರಿನಿಂದ ತೊಂದರೆ ಎಚ್ಚರ. ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆ. ಬಂಧುಗಳು ದೂರ. ಶುಭಸಂಖ್ಯೆ: 9

ಮಕರ: ದೈವ ಕಾರ್ಯಗಳಿಗಾಗಿ ಖರ್ಚು. ಮಿತ್ರರಿಂದ ಸಹೋದರರಿಂದ ಕಿರಿಕಿರಿ. ದಾಂಪತ್ಯದಲ್ಲಿ ಸಮಸ್ಯೆ ಅಧಿಕವಾಗಬಹುದು. ಶುಭಸಂಖ್ಯೆ: 2

ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ. ಮಾನಸಿಕ ಸಮತೋಲನ ಇರಲಿದೆ. ಸಾಲ ಬಾಧೆಯಿಂದ ಮುಕ್ತಿ. ಉದ್ಯೋಗದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 5

ಮೀನ: ಸಹೋದ್ಯೋಗಿಗಳೇ ಶತ್ರುಗಳಾಗಿ ಪರಿವರ್ತನೆ. ವ್ಯವಹಾರಕ್ಕಾಗಿ ಸಾಲ ಮಾಡುವ ಸನ್ನಿವೇಶ. ಹೆಣ್ಣುಮಕ್ಕಳಿಂದ ಉತ್ತಮ ಹೆಸರು. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net