

ಮೇಷ: ಅನಿವಾರ್ಯತೆಯ ಖರ್ಚುಗಳು ಆದಾಯಕ್ಕಿಂತ ಜಾಸ್ತಿ ಎದುರಾಗಬಹುದು. ಹಣಕಾಸಿನ ವಿಚಾರದಲ್ಲಿ ಜಾಗ್ರತೆ. ಶುಭಸಂಖ್ಯೆ:1
ವೃಷಭ: ವೈಯಕ್ತಿಕ ಜೀವನದ ಸಮಸ್ಯೆಗಳು ಬಗೆಹರಿದು ಮನಸ್ಸಿಗೆ ನೆಮ್ಮದಿ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಾಧನೆಗೆ ಸುಸಮಯ. ಶುಭಸಂಖ್ಯೆ: 5
ಮಿಥುನ: ಮಕ್ಕಳೊಡನೆ ಉಪಯುಕ್ತ ಸಮಯ ಕಳೆಯುವಿರಿ. ಕೌಟುಂಬಿಕ ನೆಮ್ಮದಿ ಸಮೃದ್ಧಿಯಾಗಿದ್ದರೂ ಸಣ್ಣ-ಪುಟ್ಟ ಕಿರಿಕಿರಿ ತಪ್ಪದು. ಶುಭಸಂಖ್ಯೆ:1
ಕಟಕ: ಯೋಜನೆಗಳಿಗೆ ಸ್ತ್ರೀವರ್ಗದಿಂದ ಮಹತ್ವದ ಸಹಾಯ. ಸಮಾಜ ಸೇವೆಯ ಹವ್ಯಾಸವಿದ್ದವರಿಗೆ ರಾಜಕೀಯದಲ್ಲಿ ಭವಿಷ್ಯವಿದೆ. ಶುಭಸಂಖ್ಯೆ: 7
ಸಿಂಹ: ಕೆಲಸಗಳಲ್ಲಿ ಯಶಸ್ಸು, ಲಾಭ. ಅಭಿವೃದ್ಧಿಯಿಂದ ಸಂತೋಷ. ಗ್ರಹಗಳ ಚಲನೆಯ ಪರಿಣಾಮ ಆರೋಗ್ಯದತ್ತ ನಿಗಾ ಇಡಬೇಕು. ಶುಭಸಂಖ್ಯೆ: 3
ಕನ್ಯಾ: ದುಷ್ಪಲವನ್ನು ಅನುಭವಿಸುತ್ತಿರುವ ನೀವು ಸ್ವಲ್ಪಮಟ್ಟಿನ ಚೇತರಿಕೆ ಕಾಣುವಿರಿ. ಹಂತ ಹಂತವಾಗಿ ವಿವಾದಗಳ ನಿವಾರಣೆ ಆಗಲಿದೆ. ಶುಭಸಂಖ್ಯೆ: 2
ತುಲಾ: ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ, ಹೆಚ್ಚಿನ ಅವಕಾಶ. ಹಳೆಯ ಕೇಸ್ಗಳು ಮುಕ್ತಾಯಗೊಳ್ಳುವ ಸಂಭವ. ಶುಭಸಂಖ್ಯೆ: 6
ವೃಶ್ಚಿಕ: ಅವಕಾಶಗಳನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಂಡಲ್ಲಿ ವ್ಯವಹಾರದಲ್ಲಿ ಅಧಿಕ ಲಾಭ. ಇನ್ನೊಬ್ಬರಿಗೆ ಮೋಸ ಸಲ್ಲದು. ಶುಭಸಂಖ್ಯೆ:1
ಧನುಸ್ಸು: ಕಚೇರಿಯಲ್ಲಿ ನಿಸ್ವಾರ್ಥ ಕೆಲಸಗಳಿಂದಾಗಿ ಭವಿಷ್ಯದಲ್ಲಿ ಹೆಚ್ಚಿನ ಲಾಭವಿದೆ. ಸರ್ಕಾರಿ ಅಧಿಕಾರಿಗಳಿಗೆ ಒತ್ತಡ ಕಡಿಮೆಯಾಗಲಿದೆ. ಶುಭಸಂಖ್ಯೆ: 6
ಮಕರ: ಸಂಪಾದನೆಯಲ್ಲಿ ಈಗೀಗ ವೈರಾಗ್ಯ ಹೊಂದಿರುವ ನೀವು ಆತ್ಮವಿಶ್ವಾಸ ಹೆಚ್ಚಿಸಿಕೊಂಡು ದುಡಿದರೆ ಪ್ರಗತಿಯ ಹಾದಿ ಕಾಣುವಿರಿ. ಶುಭಸಂಖ್ಯೆ: 6
ಕುಂಭ: ದೈಹಿಕ ಕೆಲಸ ಮಾಡುತ್ತಿರುವವರು ದೇಹಕ್ಕೆ ಸ್ವಲ್ಪ ವಿಶ್ರಾಂತಿ ನೀಡಿ. ಸರ್ಕಾರಿ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಿ. ಶುಭಸಂಖ್ಯೆ: 4
ಮೀನ: ಚರ್ಮಸಂಬಂಧಿ ಅನಾರೋಗ್ಯವು ಕಾಣಿಸಿದಲ್ಲಿ ಆಯುರ್ವೇದದ ಮೊರೆ ಹೋದರೆ ಶಾಶ್ವತ ಪರಿಹಾರ ದೊರಕಲಿದೆ. ಶುಭಸಂಖ್ಯೆ: 6