ಈ ರಾಶಿಯವರಿಗೆ ಇಂದು ಹಣ ದೊರಕುವುದು: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆಸೆಗಳು ಈಡೇರುವವು. ತಂದೆಯ ಬಂಧುಗಳಿಂದ ನಷ್ಟ ಉಂಟಾಗುವ ಸಾಧ್ಯತೆ. ಪುಣ್ಯಕರ್ಮ ಮಾಡಿದ ಫಲ ಪ್ರಾಪ್ತಿ. ಶುಭಸಂಖ್ಯೆ: 9

ವೃಷಭ: ಹತ್ತಿರದ ಪ್ರಯಾಣ ಮಾಡಬೇಕಾಗುವುದು. ರಾಜಕೀಯ ವ್ಯಕ್ತಿಗಳನ್ನು ಭೇಟಿ ಮಾಡುವಿರಿ. ಆಸ್ತಿಯಿಂದ ಲಾಭವಾಗುವುದು. ಶುಭಸಂಖ್ಯೆ:1

ಮಿಥುನ: ಹಣ ಮತ್ತು ಉದ್ಯೋಗ ನಷ್ಟ ಸಂಭವಿಸುವುದು. ಕುಟುಂಬದಲ್ಲಿ ವಾಗ್ವಾದಗಳು. ಪತ್ರ ವ್ಯವಹಾರಗಳಿಗೆ ಅನುಕೂಲಕರ ದಿನ. ಶುಭಸಂಖ್ಯೆ: 5

ಕಟಕ: ಸ್ವಂತ ಉದ್ಯೋಗದವರಿಗೆ ಅನುಕೂಲ. ಧಾರ್ವಿುಕ ಚಿಂತನೆ. ಸರ್ಕಾರಿ ಅಧಿಕಾರಿಗಳಿಂದ ಧನ ನಷ್ಟ. ಯತ್ನ ಕಾರ್ಯದಲ್ಲಿ ಜಯ. ಶುಭಸಂಖ್ಯೆ: 7

ಸಿಂಹ: ನಷ್ಟದ ಪ್ರಮಾಣ ಅಧಿಕವಾಗಲಿದೆ. ಬಡ್ತಿ ಮತ್ತು ಪ್ರಶಂಸೆ ದೊರೆತು ಸಂತಸ. ತಂದೆಯಿಂದ ಅನುಕೂಲವಾಗಿ ನೆಮ್ಮದಿ. ಶುಭಸಂಖ್ಯೆ: 4

ಕನ್ಯಾ: ಆಸ್ತಿ ನಷ್ಟವಾಗುವ ಸಾಧ್ಯತೆ ಇದೆ. ಉನ್ನತ ಅಧಿಕಾರಿಗಳಿಗೆ ನಷ್ಟ ಉಂಟಾಗಲಿದೆ. ದಾಂಪತ್ಯ ಸಮಸ್ಯೆ ಅಧಿಕ. ಸಮಾಧಾನ ಮುಖ್ಯ. ಶುಭಸಂಖ್ಯೆ: 2

ತುಲಾ: ಉದ್ಯೋಗ ಲಾಭ. ಕಾರ್ಯಗಳಲ್ಲಿ ಜಯ ನಿಮ್ಮದಾಗಲಿದೆ. ಶತ್ರು ದಮನ. ಋಣ ರೋಗ ಬಾಧೆಗಳಿಂದ ಮುಕ್ತಿ ಪಡೆಯುವಿರಿ. ಶುಭಸಂಖ್ಯೆ: 6

ವೃಶ್ಚಿಕ: ಪ್ರಯಾಣ ಮಾಡುವ ಸಂದರ್ಭ. ದೂರ ಪ್ರದೇಶಕ್ಕೆ ತೆರಳುವಿರಿ. ರಾಜಕೀಯದವರ ಸಂಪರ್ಕದಲ್ಲಿ ಇರುವವರಿಗೆ ಅನುಕೂಲ. ಶುಭಸಂಖ್ಯೆ: 4

ಧನುಸ್ಸು: ಹಣ ದೊರಕುವುದು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಮನೆಯ ವಾತಾವರಣ ಕಲುಷಿತ ವಾಗುವುದು. ಆರೋಗ್ಯ ವ್ಯತ್ಯಾಸ. ಶುಭಸಂಖ್ಯೆ: 8

ಮಕರ: ಶುಭಕಾರ್ಯಕ್ಕೆ ವಿಘ್ನ ಎದುರಾಗಲಿದೆ. ಸ್ನೇಹಿತರು ದೂರವಾದಾರು. ಉನ್ನತ ಅಧಿಕಾರಿಗಳಿಂದ ಅಂತರ ಕಾಯ್ದುಕೊಂಡರೆ ಕ್ಷೇಮ. ಶುಭಸಂಖ್ಯೆ: 6

ಕುಂಭ: ಪಾಲುದಾರಿಕೆ ವ್ಯವಹಾರಕ್ಕಾಗಿ ಸಾಲ ಮಾಡಬೇಕಾಗಲಿದೆ. ದಾಂಪತ್ಯ ಸಮಸ್ಯೆ ಉಲ್ಬಣವಾದೀತು. ಮಾತಿನಿಂದ ತೊಂದರೆ. ಶುಭಸಂಖ್ಯೆ: 5

ಮೀನ: ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಕಳೆದುಕೊಳ್ಳುವ ಭೀತಿ. ಮನೋರೋಗಗಳು ಅಧಿಕ. ಉದ್ಯೋಗಸ್ಥ ಮಹಿಳೆಯರಿಗೆ ವರ್ಗಾವಣೆ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net