

ಮೇಷ: ಸ್ನೇಹಪರ ಸ್ವಭಾವದಿಂದಾಗಿ ಕೀರ್ತಿ. ವಿಶೇಷ ಅಧಿಕಾರ ಲಭ್ಯ. ಮಹಿಳಾ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ಮಕ್ಕಳಿಂದ ಚಿಂತೆ. ಶುಭಸಂಖ್ಯೆ: 4
ವೃಷಭ: ಮನೆ ಖರೀದಿ ನಿಶ್ಚಯ. ವರ್ಗಾವಣೆಯಿಂದ ಅನುಕೂಲ. ಸಂಶೋಧಕರಿಗೆ, ನ್ಯಾಯಾಂಗ ಇಲಾಖೆಯವರಿಗೆ ಒಳ್ಳೆಯ ದಿನ. ಶುಭಸಂಖ್ಯೆ:2
ಮಿಥುನ: ಪಿತ್ರಾರ್ಜಿತ ಆಸ್ತಿ ವಿವಾದಕ್ಕೆ ರ್ತಾಕ ಅಂತ್ಯ. ವಿದೇಶ ಪ್ರಯಾಣ ಸಾಧ್ಯತೆ. ಮಹಿಳೆಯರಿಗೆ ಮೋಸವಾದೀತು, ಹುಷಾರು. ಶುಭಸಂಖ್ಯೆ: 8
ಕಟಕ: ದಿನಸಿ ವ್ಯಾಪಾರಸ್ಥರಿಗೆ ಅಧಿಕ ಲಾಭ ದೊರೆಯಲಿದೆ. ಕೃಷಿ ಕೆಲಸಗಳು ಸಮರ್ಪಕ. ಸ್ನೇಹಿತರಿಂದ ಸೂಕ್ತ ಸಲಹೆ ದೊರೆಯಲಿದೆ. ಶುಭಸಂಖ್ಯೆ: 7
ಸಿಂಹ: ಕೆಲ ಕಠಿಣ ನಿರ್ಧಾರಗಳಿಂದಾಗಿ ಉತ್ತಮ ಫಲ ಸಿಗಲಿದೆ. ಹುಟ್ಟೂರಿನಿಂದ ಶುಭಸುದ್ದಿ ಕೇಳುವಿರಿ. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 2
ಕನ್ಯಾ: ಸಾಧನೆ, ಪರಿಶ್ರಮಕ್ಕೆ ಪುರಸ್ಕಾರ. ಮಕ್ಕಳ ವಿದ್ಯಾಭ್ಯಾಸದತ್ತ ಗಮನ ತೋರಿ. ಮಗಳ ಮದುವೆಯ ಓಡಾಟ ಹೆಚ್ಚುವುದು. ಶುಭಸಂಖ್ಯೆ:3
ತುಲಾ: ಗಣ್ಯವ್ಯಕ್ತಿಯ ಭೇಟಿ. ಆದಾಯದಷ್ಟೇ ಖರ್ಚು ಇರುವುದು. ಆರೋಗ್ಯದ ಬಗ್ಗೆ ತಪಾಸಣೆ ಅಗತ್ಯ. ನಿರ್ಲಕ್ಷ್ಯ ಬೇಡ. ಶುಭಸಂಖ್ಯೆ: 5
ವೃಶ್ಚಿಕ: ಜೀವನ ಶೈಲಿಯಲ್ಲಿ ಬದಲಾವಣೆ . ಹೊಸ ವಿಷಯ ಅನುಭವಕ್ಕೆ ಬರಲಿವೆ. ಅಪರಿಚಿತರೊಂದಿಗೆ ವ್ಯವಹಾರದಲ್ಲಿ ಮೋಸ. ಶುಭಸಂಖ್ಯೆ: 6
ಧನುಸ್ಸು: ಅವಿವಾಹಿತರಿಗೆ ವಿವಾಹ ನಿಶ್ಚಯ. ಮನಸ್ಸಿನ ತುಮುಲವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಮಕ್ಕಳ ವಿಚಾರದಲ್ಲಿ ಹೆಮ್ಮೆ. ಶುಭಸಂಖ್ಯೆ: 2
ಮಕರ: ಸಣ್ಣಪುಟ್ಟ ತೊಡಕುಗಳು ಕಾಣಿಸಿಕೊಂಡರೂ ಕೆಲಸಗಳು ಅಬಾಧಿತವಾಗಿ ಸಾಗುವುದು. ಸೃಜನಶೀಲತೆಗೆ ಉತ್ತಮ ವೇದಿಕೆ. ಶುಭಸಂಖ್ಯೆ: 8
ಕುಂಭ: ಉದ್ಯೋಗದಲ್ಲಿ ಅತಂತ್ರ ಬದುಕು. ವಿಲಾಸಿ ಜೀವನಕ್ಕೆ ದುಂದುವೆಚ್ಚ. ಸೌಂದರ್ಯವರ್ಧಕಗಳ ವ್ಯಾಪಾರಿಗಳಿಗೆ ಒಳ್ಳೆಯ ದಿನ. ಶುಭಸಂಖ್ಯೆ: 1
ಮೀನ: ಸಹೋದರರಲ್ಲಿ ವಿಶಾಲವಾದ ಭಾವನೆ ಇರಲಿ. ಯೋಜನೆಗಳಿಗೆ ಅಡೆತಡೆ. ಸಂಬಂಧದಲ್ಲಿ ಸೌಹಾರ್ದ ಕಾಯ್ದುಕೊಳ್ಳುವಿರಿ. ಶುಭಸಂಖ್ಯೆ: 9