ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ವೈಮನಸ್ಸು: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆರ್ಥಿಕವಾಗಿ ಅನುಕೂಲ. ಆರೋಗ್ಯ ಸಮಸ್ಯೆ ಕಾಡಬಹುದು. ಮಾನಸಿಕವಾಗಿ ನೋವು ಅನುಭವಿಸುವ ಸಂಭವ. ಶುಭಸಂಖ್ಯೆ: 8

ವೃಷಭ: ಅಧಿಕ ಖರ್ಚು. ಮಿತ್ರರೊಂದಿಗೆ ಮೋಜು-ಮಸ್ತಿ. ಪತ್ರ ವ್ಯವಹಾರ. ನೆರೆಹೊರೆಯವರಿಂದ ಅನುಕೂಲ. ಶುಭಸಂಖ್ಯೆ: 5

ಮಿಥುನ: ಆರ್ಥಿಕ ಸಮಸ್ಯೆಯಿಂದ ಮುಕ್ತಿ ದೊರೆತು ಸಂತಸ. ಸ್ವಂತ ವ್ಯವಹಾರದಲ್ಲಿ ಪ್ರಗತಿ. ಮಿತ್ರರಿಂದ ಉದ್ಯೋಗ ಲಾಭ. ಶುಭಸಂಖ್ಯೆ: 9

ಕಟಕ: ಅಧಿಕ ಖರ್ಚು. ಉದ್ಯೋಗ ನಷ್ಟ. ಅನಾರೋಗ್ಯ ಸಮಸ್ಯೆ ಕಾಡಬಹುದು. ವೈದ್ಯರ ಸಲಹೆಯನ್ನು ನಿರ್ಲಕ್ಷ್ಯ ಮಾಡಬೇಡಿ. ಶುಭಸಂಖ್ಯೆ: 1

ಸಿಂಹ: ದೂರ ಪ್ರಯಾಣ ಸಾಧ್ಯತೆ. ಪ್ರಯಾಣದಲ್ಲಿ ವಸ್ತುಗಳ ಕಳವು. ತಂದೆ ಮಕ್ಕಳಲ್ಲಿ ಮನಸ್ತಾಪ. ಅಪಮಾನ, ಗೌರವಕ್ಕೆ ಧಕ್ಕೆ . ಶುಭಸಂಖ್ಯೆ: 1

ಕನ್ಯಾ: ಅನಿರೀಕ್ಷಿತ ಸ್ನೇಹಿತರ ಭೇಟಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಉಂಟಾದೀತು. ಪಾಲುದಾರಿಕೆಯಲ್ಲಿ ಅನುಕೂಲವಿದೆ. ಶುಭಸಂಖ್ಯೆ: 5

ತುಲಾ: ಮಹಿಳೆಯರಿಂದ ನೋವು ಅನುಭವಿಸುವಿರಿ. ದಾಂಪತ್ಯದಲ್ಲಿ ವೈಮನಸ್ಸು. ನಿದ್ರಾಭಂಗ. ಭವಿಷ್ಯದ ಚಿಂತೆ ಕಾಡಲಿದೆ. ಶುಭಸಂಖ್ಯೆ: 6

ವೃಶ್ಚಿಕ: ಋಣ ರೋಗ ಬಾಧೆಗಳಿಂದ ಮುಕ್ತಿ. ಉದ್ಯೋಗದಲ್ಲಿ ಒತ್ತಡ. ಸೌಂದರ್ಯವರ್ಧಕ ವಸ್ತುಗಳ ಖರೀದಿ. ಅಧಿಕ ನಷ್ಟ. ಶುಭಸಂಖ್ಯೆ: 9

ಧನುಸ್ಸು: ಸಾಲದ ಚಿಂತೆ. ಸ್ಥಿರಾಸ್ತಿ ಅಥವಾ ವಾಹನದ ಮೇಲೆ ಸಾಲ. ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ. ತಂದೆಯಿಂದ ಲಾಭ. ಶುಭಸಂಖ್ಯೆ: 6

ಮಕರ: ಪಾಲುದಾರಿಕೆಯಲ್ಲಿ ಮನಸ್ತಾಪ. ಪ್ರಯಾಣದಲ್ಲಿ ಅಡೆತಡೆ ಎದುರಿಸಬೇಕಾದೀತು. ಉದ್ಯೋಗ ಬದಲಾವಣೆಯಿಂದ ಸಮಸ್ಯೆ. ಶುಭಸಂಖ್ಯೆ: 4

ಕುಂಭ: ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ. ದಾಂಪತ್ಯದಲ್ಲಿ ಅಹಂಭಾವ ಒಳ್ಳೆಯದಲ್ಲ. ಸಕಾಲಕ್ಕೆ ಸ್ನೇಹಿತರಿಂದ ನೆರವು. ಶುಭಸಂಖ್ಯೆ: 8

ಮೀನ: ಮಕ್ಕಳ ನಡವಳಿಕೆಯಲ್ಲಿ ಸಂಶಯ. ದರ್ಪದ ಮಾತಿನಿಂದ ಶತ್ರುಗಳು ಜಾಸ್ತಿಯಾಗುವರು. ವಾಹನಗಳಿಂದ ತೊಂದರೆ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net