ನಿತ್ಯಭವಿಷ್ಯ|ಈ ರಾಶಿಯವರು ಬಹುದಿನಗಳಿಂದ ನಿರೀಕ್ಷಿಸಿದ ಕಾರ್ಯವೊಂದು ಇಂದು ಸಫಲವಾಗಲಿದೆ..

Nitya-Bhavishya-vvani-1-2-1
Published on

ಮೇಷ: ಪರಿಚಿತರಾಗುವವರೆಲ್ಲ ಪ್ರಯೋಜನಕಾರಿಗಳೇ ಆಗಿರುವುದಿಲ್ಲ. ಕೆಲವೊಮ್ಮೆ ಅಪರಿಚಿತರಿಂದಲೂ ಸಹಾಯ ಸಹಕಾರ ಸಿಗುತ್ತದೆ. ಶುಭಸಂಖ್ಯೆ: 1

ವೃಷಭ: ಕಚೇರಿಯ ಕೆಲಸಕಾರ್ಯಗಳಲ್ಲಿನ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಿ. ವ್ಯರ್ಥವಾಗಿ ಕಾಲ ಕಳೆಯುವಂಥ ಜನರನ್ನು ನಿರ್ಲಕ್ಷಿಸಿದರೆ ಒಳಿತು. ಶುಭಸಂಖ್ಯೆ: 9

ಮಿಥುನ: ಅಜ್ಞಾನದಿಂದಾಗಿ ಶತ್ರುಗಳನ್ನು ಬಹಳ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿದ್ದೀರಿ. ಮಣಿಕಂಠನ ಸ್ತುತಿಯಿಂದ ಸುಕ್ಷೇಮವೇ ಉಂಟಾಗಲಿದೆ. ಶುಭಸಂಖ್ಯೆ: 4

ಕಟಕ: ಯಶಸ್ಸು ನಿರೀಕ್ಷಿತ ಬಗೆಯಲ್ಲಿ ಕೈಗೆಟುಕದು. ಅನಿರೀಕ್ಷಿತವಾದ ವಿಧಾನವೊಂದು ಗೆಲುವಿನ ಕಡೆ ಕೈಹಿಡಿದು ನಡೆಸಲಿದೆ. ಶುಭಸಂಖ್ಯೆ: 8

ಸಿಂಹ: ಜೂಜು, ರೇಸ್​ನಂಥವುಗಳಿಗೆ ಏನೇನೋ ತಂತ್ರಗಳನ್ನು ನಂಬಿದರೆ ಜೇಬಿಗೆ ಕತ್ತರಿ ಬೀಳಲಿದೆ. ಜೋಪಾನವಾಗಿರಿ. ಶುಭಸಂಖ್ಯೆ: 2

ಕನ್ಯಾ: ಯಾವ ಪರಿಶ್ರಮವೂ ಇರದೆ ಮಹತ್ವದ್ದನ್ನು ಸಾಧಿಸಬೇಕು ಎಂಬ ವಿಚಾರವನ್ನು ಕೈಬಿಡಿ. ಶ್ರಮದಿಂದ ಸಿದ್ಧಿಯಿದೆ. ಶುಭಸಂಖ್ಯೆ: 6

ತುಲಾ: ಆರೋಗ್ಯದ ಬಗೆಗೆ ಸ್ವಲ್ಪ ಮಟ್ಟಿಗೆ ಅಲಕ್ಷ್ಯ ಮಾಡುತ್ತಿದ್ದೀರಿ. ತಜ್ಞ ವೈದ್ಯರ ಭೇಟಿ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ. ಶುಭಸಂಖ್ಯೆ: 3

ವೃಶ್ಚಿಕ: ವೃತ್ತಿಯ ಒತ್ತಡ ಇದ್ದೇ ಇರುತ್ತದೆ. ನಿಮ್ಮ ನೆಚ್ಚಿನ ಹವ್ಯಾಸಗಳನ್ನು ಮರೆಯದೆ ಮುಂದುವರಿಸಿದರೆ ಸಂತಸ, ನೆಮ್ಮದಿ ಲಭಿಸುತ್ತದೆ. ಶುಭಸಂಖ್ಯೆ: 7

ಧನುಸ್ಸು: ನಕಾರಾತ್ಮಕ ಆಲೋಚನೆಯ ಜನರು ಭೇಟಿಯಾಗಬಹುದು. ಯಾವುದೇ ಬಗೆಯ ವಿವಾದಗಳಿಗೆ ಆಸ್ಪದ ಬೇಡ. ಶುಭಸಂಖ್ಯೆ: 5

ಮಕರ : ಅನಿರೀಕ್ಷಿತ ತಿರುವುಗಳಿಂದ ಆಯಾಸಪಡಲಿದ್ದೀರಿ. ಆದರೂ ವಿಶೇಷವಾದ ಅನಿರೀಕ್ಷಿತ ಲಾಭದಿಂದ ಹರ್ಷದಾಯಕವಾಗಿ ಇರಲಿದ್ದೀರಿ. ಶುಭಸಂಖ್ಯೆ: 1

ಕುಂಭ: ಬಹುದಿನಗಳಿಂದ ನಿರೀಕ್ಷಿಸಿದ ಕಾರ್ಯವೊಂದು ಸಫಲವಾಗುವ ಮೂಲಕ ವಿಶೇಷವಾದ ಸಂತೃಪ್ತಿಯನ್ನು ಹೊಂದಲಿದ್ದೀರಿ. ಶುಭಸಂಖ್ಯೆ: 9

ಮೀನ: ನಿಮ್ಮ ಒಡನಾಟಗಳಿರುವುದು ಬುದ್ಧಿವಂತರ ಜತೆಗೆ ಮಾತ್ರ. ಅದು ಸರಿಯೇ ಆಗಿದ್ದರೂ ಮುಗ್ಧರನ್ನೂ ಜತೆಗಿಟ್ಟುಕೊಳ್ಳಿ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net