

ಮೇಷ: ಕೆಲವು ಜನ ಅವಿವೇಕಿಗಳು ಸವಾಲುಗಳನ್ನು ಹಾಕಬಹುದು. ಈ ವೇಳೆ ಸಮಯಪ್ರಜ್ಞೆಯನ್ನು ತೋರಿಸಿದರೆ ನಷ್ಟ ತಪ್ಪಲಿದೆ. ಶುಭಸಂಖ್ಯೆ: 1
ವೃಷಭ: ಪ್ರಮುಖ ಸ್ಥಾನದದಲ್ಲಿರುವ ಸಜ್ಜನರಿಂದ ನೆರವು ಸಿಗಲಿದೆ. ಮನಸ್ಸಿನಲ್ಲಿ ತುಂಬಿರುವ ಚಿಂತೆಗಳಿಗೂ ಪರಿಹಾರ ಲಭ್ಯ. ಶುಭಸಂಖ್ಯೆ: 4
ಮಿಥುನ: ಕ್ಲಿಷ್ಟಕರವಾದುದು ಎಂದೆನಿಸುವ ಕರ್ತವ್ಯಗಳಲ್ಲಿ ಮೇಲಧಿಕಾರಿಗಳ ನಿರೀಕ್ಷೆಗಳು ಹೆಚ್ಚಾಗಿದ್ದರೂ ಪೂರೈಸಿ. ಪದೋನ್ನತಿ ಸಿಗಲಿದೆ. ಶುಭಸಂಖ್ಯೆ: 8
ಕಟಕ: ನೀವು ತುಂಬ ಅಭಿಮಾನಪಡುವಂತಹ ಸುಸಂದರ್ಭವನ್ನು ಮಕ್ಕಳು ಸೃಷ್ಟಿಸಬಲ್ಲರು. ಗುರು ದತ್ತಾತ್ರೇಯನನ್ನು ಧ್ಯಾನಿಸಿ. ಶುಭಸಂಖ್ಯೆ: 9
ಸಿಂಹ: ಸಾಂಸ್ಕೃತಿಕ ಆಸಕ್ತಿಯುಳ್ಳವರಿಗೆ ಕಲಾಸ್ವಾದನೆಗೆ ಉತ್ತಮವಾದ ಅವಕಾಶಗಳಿವೆ. ಸ್ವಂತ ಉನ್ನತಿಯ ಮಾರ್ಗ ಕೂಡ ತೆರೆಯಲಿದೆ. ಶುಭಸಂಖ್ಯೆ: 3
ಕನ್ಯಾ: ಜಗಳಕ್ಕೆ ಕಾರಣವಾಗಿದ್ದ ಆಸ್ತಿಯ ವಿಚಾರದಲ್ಲಿ ಹೊಂದಾಣಿಕೆಗೆ ಅವಕಾಶವಿದೆ. ಈ ಕುರಿತಾಗಿ ಮನೆಯವರಲ್ಲಿ ಒಮ್ಮತವಿರಲಿ. ಶುಭಸಂಖ್ಯೆ: 6
ತುಲಾ: ಅನಿರೀಕ್ಷಿತ ದಿಕ್ಕುಗಳಿಂದ ಲಾಭಕ್ಕೆ ಅವಕಾಶವಿದೆ. ಅಡೆತಡೆಗಳಿಗೆ ಸ್ವಲ್ಪವೂ ಅಂಜದಿರಿ. ಭಕ್ತಿಯಿಂದ ಗುರುವಿನ ಸ್ತೋತ್ರವನ್ನು ಪಠಿಸಿ. ಶುಭಸಂಖ್ಯೆ: 2
ವೃಶ್ಚಿಕ: ಕಚೇರಿಯಲ್ಲಿ ಸಹೋದ್ಯೋಗಿಗಳು ಅಸಹಕಾರ ತೋರಿಸಬಹುದು. ಆ ಬಗ್ಗೆ ಚಿಂತಿಸಬೇಡಿ. ನಿಮ್ಮ ಧ್ಯೇಯವೇ ಜಯ ತರಲಿದೆ. ಶುಭಸಂಖ್ಯೆ: 5
ಧನುಸ್ಸು: ಹಿರಿಯರ ಬಳಿ ವಾಗ್ವಾದ ಸಂಭವಿಸಬಹುದು. ಅವರನ್ನು ನಿಮ್ಮ ನಯವಿನಯಗಳಿಂದಲೇ ಒಲಿಸಿಕೊಂಡರೆ ಲಾಭವಾಗಲಿದೆ. ಶುಭಸಂಖ್ಯೆ: 7
ಮಕರ: ಕೆಲಸಗಳಲ್ಲಿ ಅನ್ಯರನ್ನು ಕೂಡ ಹುರಿದುಂಬಿಸುವ ಉತ್ಸಾಹಿ ಮನೋಭಾವದ ನಿಮ್ಮ ನಾಯಕತ್ವಕ್ಕೆ ಉತ್ತಮವಾದ ಅವಕಾಶವಿದೆ. ಶುಭಸಂಖ್ಯೆ: 1
ಕುಂಭ: ಅವಿವಾಹಿತರಿಗೆ ಶೀಘ್ರವೇ ಕಂಕಣಬಲವು ಕೂಡಿಬರಲಿದೆ. ಹಿರಿಯರಿಂದ ಅಗತ್ಯವಿರುವ ನೆರವು ಕೂಡ ಒದಗಿಬರಲಿದೆ. ಶುಭಸಂಖ್ಯೆ: 4
ಮೀನ: ನಿಮ್ಮ ಜತೆಗೆ ಅದೃಷ್ಟವಿದೆ. ನಿಮಗೆ ಯಾರೇ ಆದರೂ ಹೊಂದಿಕೊಂಡು ಸಹಕರಿಸುತ್ತಾರೆ. ಶ್ರದ್ಧೆಯಿಂದ ದುರ್ಗಾಷ್ಟಕ ಓದಿ. ಶುಭಸಂಖ್ಯೆ: 8