ಈ ರಾಶಿಯವರಿಗೆ ಇಂದು ಸಾರ್ವಜನಿಕ ಕ್ಷೇತ್ರದಲ್ಲಿ ಕಾರ್ಯಸಿದ್ಧಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ನಿಮ್ಮ ಆಲಸ್ಯತನದಿಂದ ಉತ್ತಮ ಅವಕಾಶವನ್ನು ಕಳೆದುಕೊಳ್ಳುವಿರಿ. ವ್ಯಾಪಾರಿಗಳಿಗೆ ಧನ ನಷ್ಟ ಸಾಧ್ಯತೆಯಿದೆ, ಎಚ್ಚರ. ಶುಭಸಂಖ್ಯೆ: 9

ವೃಷಭ: ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಸಮಾಧಾನ. ಮೇಲಧಿಕಾರಿಗಳಿಂದ ಪ್ರಶಂಸೆ. ಗುರುಹಿರಿಯರ ಭೆೇಟಿ. ಶುಭಸಂಖ್ಯೆ: 5

ಮಿಥುನ: ಹೃದಯಸಂಬಂಧಿ ಆರೋಗ್ಯ ಸಮಸ್ಯೆ ಬಿಗಡಾಯಿಸ ಬಹುದು. ಹೊಸ ಆಸ್ತಿ ಖರೀದಿಗೆ ನಿರ್ಧಾರ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 7

ಕಟಕ: ಹಲವು ವರ್ಷಗಳಿಂದ ಕಾಡುತ್ತಿದ್ದ ಕುಟುಂಬದ ವಿವಾದಕ್ಕೆ ರ್ತಾಕ ಅಂತ್ಯ. ಹೆಂಡತಿ- ಮಕ್ಕಳೊಂದಿಗೆ ವಿಹಾರ. ಶುಭಸಂಖ್ಯೆ: 4

ಸಿಂಹ: ನಿಮ್ಮ ದುರ್ಬಲತೆಯನ್ನು ಪ್ರದರ್ಶಿಸಬೇಡಿ. ಹಿರಿಯರ ಸಲಹೆ ಪಡೆದುಕೊಳ್ಳಿ. ಮೇಲಧಿಕಾರಿಗಳಿಂದ ಒತ್ತಡ. ಶುಭಸಂಖ್ಯೆ: 1

ಕನ್ಯಾ: ಜಟಿಲ ಸಮಸ್ಯೆಗೆ ಹಿರಿಯರಿಂದ ಮತ್ತು ಕುಟುಂಬದಿಂದ ವಿಶೇಷ ಸಲಹೆ. ಮಕ್ಕಳಿಂದ ಹಣದ ವಿಚಾರದಲ್ಲಿ ಮನಸ್ತಾಪ. ಶುಭಸಂಖ್ಯೆ: 5

ತುಲಾ: ಅನವಶ್ಯಕ ತಿರುಗಾಟ. ಕಚೇರಿಯ ಕೆಲಸದಲ್ಲಿ ನಿರೀಕ್ಷಿಸಿದಂತೆ ಯಶಸ್ಸು ಪ್ರಾಪ್ತಿ. ಮನಸ್ಸಿಗೆ ಸಮಾಧಾನ. ಶುಭಸಂಖ್ಯೆ: 7

ವೃಶ್ಚಿಕ: ಸಂಗಾತಿಯೊಂದಿಗೆ ವಿರಸ. ಕಚೇರಿಯಲ್ಲಿ ಭಿನ್ನಾಭಿಪ್ರಾಯ. ಒತ್ತಡವನ್ನು ಸಮಾಧಾನದಿಂದ ನಿಭಾಯಿಸಿ. ಸ್ನೇಹಿತನ ಭೇಟಿ. ಶುಭಸಂಖ್ಯೆ: 3

ಧನುಸ್ಸು: ಯೋಚಿಸಿ ಮಾತನಾಡಿ. ರಾಜಕೀಯ ರಂಗದಲ್ಲಿ ಇರುವವರಿಗೆ ಅವಮಾನ ಆಗಬಹುದು. ಸಾರ್ವಜನಿಕ ಕ್ಷೇತ್ರದಲ್ಲಿ ಕಾರ್ಯಸಿದ್ಧಿ. ಶುಭಸಂಖ್ಯೆ: 7

ಮಕರ: ವ್ಯಾಪಾರದಲ್ಲಿ ನಷ್ಟ. ಅನಗತ್ಯ ಹಣದ ಖರ್ಚು. ಮಕ್ಕಳಿಂದ ಧನ ನಷ್ಟ. ಭೂ ವಿವಾದದಲ್ಲಿ ಮೋಸ. ಸುಬ್ರಹ್ಮಣ್ಯನನ್ನು ಆರಾಧಿಸಿ. ಶುಭಸಂಖ್ಯೆ: 6

ಕುಂಭ: ತಂದೆ ತಾಯಿಯನ್ನು ಗೌರವಿಸಿ. ಕುಟುಂಬ ವಿವಾದವನ್ನು ಹಿರಿಯರ ಸಲಹೆ ಮೇರೆಗೆ ಬಗೆಹರಿಸಿ. ದೀನರಿಗೆ ದಾನ ಮಾಡಿ. ಶುಭಸಂಖ್ಯೆ: 6

ಮೀನ: ಪ್ರತಿಭಾನ್ವಿತರಿಗೆ ವಿಶೇಷ ಜನಮನ್ನಣೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಂಧುಗಳ ವಿಯೋಗ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net