

ಮೇಷ: ಸಾರ್ವಜನಿಕ ಜೀವನದಲ್ಲಿ ಅಗೌರವ. ಮನಸ್ಸಿಗೆ ನಾನಾರೀತಿಯ ಚಿಂತೆ. ತಾಯಿಯ ಸಲಹೆ ಪಾಲಿಸಿ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 6
ವೃಷಭ: ಭವಿಷ್ಯದ ಲ್ಲಿ ತೀರ್ಥಯಾತ್ರೆಗೆ ನಿರ್ಧಾರ. ಹೊಸ ಯೋಜನೆ ಬೇಡ, ವಿಫಲವಾಗಬಹುದು ಸಹೋದರಿಯಿಂದ ಸಮಾಧಾನ. ಶುಭಸಂಖ್ಯೆ:1
ಮಿಥುನ: ಕುಟುಂಬದಲ್ಲಿ ಅಸಮಾಧಾನ. ಸಂಗಾತಿಯ ಮಾರ್ಗದರ್ಶನದಿಂದ ಹೊಸ ಯೋಜನೆ ಕಾರ್ಯಗತ. ಆತ್ಮೀಯರ ವಿಯೋಗ. ಶುಭಸಂಖ್ಯೆ: 8
ಕಟಕ: ಹೊಸ ಯೋಜನೆಗೆ ಚಾಲನೆ. ಮಗನಿಗೆ ವಿದೇಶ ಪ್ರಯಾಣ ಸಾಧ್ಯತೆ. ಹಿತೈಷಿಗಳಿಂದ ಸಹಕಾರ. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 7
ಸಿಂಹ: ಖಾಸಗಿ ಉದ್ಯೋಗಿಗಳಿಗೆ ಕೆಲಸ ಹೋಗುವ ಭೀತಿ. ಅತಿ ಆತ್ಮಾಭಿಮಾನದಿಂದ ಸಮಸ್ಯೆಯಾದೀತು. ಸಂಗಾತಿಯ ಸಹಾಯ. ಶುಭಸಂಖ್ಯೆ: 2
ಕನ್ಯಾ: ಕುಟುಂಬದ ಅಸಹಕಾರ. ಸ್ನೇಹಿತರಿಂದ ಸಹಾಯ ದೊರೆಯಲಿದೆ. ಜೀವನದಲ್ಲಿ ಹೊಸತನ. ಧರ್ಮಕಾರ್ಯಾಸಕ್ತಿ. ಶುಭಸಂಖ್ಯೆ: 4
ತುಲಾ: ವ್ಯಾಪಾರ ಉದ್ಯೋಗಗಳು ಉತ್ತಮವಾಗಿ ಸಾಗುವುದು. ಭೂ ವ್ಯವಹಾರದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಶುಭಸಂಖ್ಯೆ: 6
ವೃಶ್ಚಿಕ: ಕುಟುಂಬದವರೊಂದಿಗೆ ಸಂತೋಷದ ಸಹಜೀವನ. ಸರ್ಕಾರಿ ಕೆಲಸಗಳಲ್ಲಿ ಸಫಲತೆ. ಸಹೋದರಿಯ ಸಾಂತ್ವನ. ಶುಭಸಂಖ್ಯೆ: 8
ಧನುಸ್ಸು: ಬಂಧು ಮಿತ್ರರು ವಿಶ್ವಾಸದಿಂದ ನಡೆದುಕೊಳ್ಳುವರು. ಸಾರ್ವಜನಿಕ ಜೀವನದಲ್ಲಿ ಬೆಂಬಲ. ನಂಬಿದವರಿಂದಲೇ ಮೋಸ. ಶುಭಸಂಖ್ಯೆ: 9
ಮಕರ: ವ್ಯಾಪಾರದಲ್ಲಿ ಲಾಭವಾಗಿ ನೆಮ್ಮದಿ. ಅವಿವಾಹಿತರಿಗೆ ಶುಭ ಸುದ್ದಿ ಕಾದಿದೆ. ಹೊಸ ಕಾರ್ಯಯೋಜನೆ ಸಫಲ. ಶುಭಸಂಖ್ಯೆ: 5
ಕುಂಭ: ಮಕ್ಕಳಿಂದ ಧನವ್ಯಯ. ಸಂಗಾತಿಯೊಂದಿಗೆ ಸಮಾಧಾನವಿರಲಿ. ಕಚೇರಿಯ ಒತ್ತಡಗಳನ್ನು ಸಮಾಧಾನದಿಂದ ನಿರ್ವಹಿಸಿ. ಶುಭಸಂಖ್ಯೆ: 5
ಮೀನ: ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ. ನಿಮ್ಮ ಅತಿ ನಿರೀಕ್ಷೆಯ ಪ್ರಯತ್ನ ಸಫಲ. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಶುಭಸಂಖ್ಯೆ: 3