

ಮೇಷ: ಪಾಲುದಾರಿಕೆ ವ್ಯವಹಾರದಲ್ಲಿ ಹಾನಿಯಾದೀತು. ಮನೋಧೈರ್ಯ ದ್ವಿಗುಣ. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಲಾಭ. ಶುಭಸಂಖ್ಯೆ: 5
ವೃಷಭ: ಚರ್ಮ ಸಂಬಂಧಿ ಅನಾರೋಗ್ಯ ಕಾಡಬಹುದು. ಕುಟುಂಬದಲ್ಲಿ ಅಶಾಂತಿ. ವಿದ್ಯಾರ್ಥಿಗಳಿಗೆ ಯಶಸ್ಸಿನ ಹಾದಿ ಸುಲಭ. ಶುಭಸಂಖ್ಯೆ: 2
ಮಿಥುನ: ಸಂಗಾತಿಯ ಅಗಲಿಕೆ ಬಹುವಾಗಿ ಕಾಡುತ್ತದೆ. ವಿದೇಶಿ ಉದ್ಯೋಗಸ್ಥರಿಗೆ ಪ್ರಗತಿ. ಆಹಾರವಸ್ತುಗಳ ವ್ಯಾಪಾರಸ್ಥರಿಗೆ ಶುಭ. ಶುಭಸಂಖ್ಯೆ: 6
ಕಟಕ: ಪತ್ನಿಯೊಂದಿಗೆ ವಿರಸ. ಹಣಕಾಸಿನ ವಿಚಾರದಲ್ಲಿ ಎಚ್ಚರವಹಿಸಿ. ಆಹಾರದಲ್ಲಿನ ವ್ಯತ್ಯಾಸದಿಂದ ಅನಾರೋಗ್ಯ ಕಾಡೀತು. ಶುಭಸಂಖ್ಯೆ: 3
ಸಿಂಹ: ಉದ್ಯೋಗದಲ್ಲಿ ಉನ್ನತ ಸ್ಥಾನ ಗಳಿಕೆ, ಸ್ಟಾಕ್ ಷೇರಿನ ವ್ಯವಹಾರದಲ್ಲಿ ಲಾಭ. ಸ್ನೇಹಿತರಿಂದ ಆರ್ಥಿಕಸಹಾಯ ದೊರೆಯುತ್ತದೆ. ಶುಭಸಂಖ್ಯೆ: 6
ಕನ್ಯಾ: ವ್ಯಾಪಾರದ ಒಪ್ಪಂದಗಳನ್ನು ಅನುಭವಿಗಳ ಸಲಹೆಯೊಂದಿಗೆ ಮಾಡಿ. ವಿವಾಹದಲ್ಲಿ ವಿಘ್ನ, ಮಕ್ಕಳಿಂದ ಸಮಸ್ಯೆ. ಶುಭಸಂಖ್ಯೆ: 1
ತುಲಾ: ಅಧಿಕಾರಿಗಳಿಂದ ಸಮಸ್ಯೆಯಾಗಬಹುದು. ವಿದ್ಯಾರ್ಥಿಗಳಿಗೆ ಅಪಜಯ. ಹಣದ ವಿಚಾರಕ್ಕಾಗಿ ಓಡಾಟ ಮಾಡಬೇಕಾಗುವುದು. ಶುಭಸಂಖ್ಯೆ: 9
ವೃಶ್ಚಿಕ: ವಿದ್ಯಾರ್ಥಿಗಳಲ್ಲಿ ಪ್ರಗತಿ ಕಾಣಲಿದೆ. ಮನೆಯಲ್ಲಿ ಶುಭ ಸಮಾರಂಭ ಜರುಗುವುದು. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಪ್ರಗತಿ. ಶುಭಸಂಖ್ಯೆ: 1
ಧನುಸ್ಸು: ಭೂ ಲಾಭವಿರುತ್ತದೆ. ಮೇಲಧಿಕಾರಿಗಳಿಂದ ಸಹಾಯ ದೊರೆಯಲಿದೆ. ಆರ್ಥಿಕ ವ್ಯವಹಾರದಲ್ಲಿ ಎಚ್ಚರಿಕೆ ಇರುವುದು ಕ್ಷೇಮಕರ. ಶುಭಸಂಖ್ಯೆ: 5
ಮಕರ: ವಿದ್ಯಾರ್ಥಿಗಳಿಗೆ ಅಶುಭ. ಪಾಲುದಾರಿಕೆ ವ್ಯಾಪಾರ ದಲ್ಲಿ ಹಾನಿಯಾಗುವ ಸಾಧ್ಯತೆ ಜಾಸ್ತಿ. ಹಣಕಾಸಿನ ತೊಂದರೆ ಎದುರಿಸುವಿರಿ. ಶುಭಸಂಖ್ಯೆ: 7
ಕುಂಭ: ಆರ್ಥಿಕ ಅನಾನುಕೂಲದಿಂದ ತೊಂದರೆ. ಗೌರವದ ಸ್ಥಾನ ಲಭ್ಯವಾಗಲಿದೆ. ಸಿನಿಮಾ ಕ್ಷೇತ್ರದ ಸಾಧಕರಿಗೆ ಶುಭದಾಯಕ ದಿನ. ಶುಭಸಂಖ್ಯೆ: 6
ಮೀನ: ಸಮಯ ಸಾಧಕರಿಂದ ಅಂತರವಿರಲಿ. ಕೆಲಸದ ಹೊರೆ ಅಧಿಕವಾಗಿರುತ್ತದೆ. ದೊಡ್ಡ ಚಿಂತೆಗಳು ದೂರವಾಗಬಹುದು. ಶುಭಸಂಖ್ಯೆ: 9