

ಮೇಷ: ಅಪರಿಚಿತರನ್ನು ಭೇಟಿಯಾಗುವ ಅವಕಾಶವಿದೆ. ಅವರ ಜತೆಗೆ ಗೌರವದಿಂದಲೇ ಮಾತನಾಡಿ. ಮುಂದೆ ನಿಮಗೆ ಒಳಿತಾಗಲಿದೆ. ಶುಭಸಂಖ್ಯೆ: 1
ವೃಷಭ: ಯಾವುದೇ ಕಾರಣಕ್ಕೂ ಹತಾಶೆಗೆ ಅವಕಾಶ ಮಾಡಿಕೊಡದೆ ಮುನ್ನುಗ್ಗಿ. ನಿಮ್ಮ ಫಲಾಪೇಕ್ಷೆ ಬಹು ಬೇಗ ಈಡೇರಲಿದೆ. ಶುಭಸಂಖ್ಯೆ: 9
ಮಿಥುನ: ವೃತ್ತಿಯಲ್ಲಿ ಶಾಂತರಾಗಿ ಸಾಗಿದರೆ ಉತ್ತಮ. ಧಾವಂತದಿಂದ ಓಡಿದರೆ ಜಾರಿಬೀಳುತ್ತೀರಿ. ತಾಳ್ಮೆಯಿಂದ ನಡೆದರೆ ಜಯ. ಶುಭಸಂಖ್ಯೆ: 8
ಕಟಕ: ಹೊಸ ಹಸುವಿನ ಖರೀದಿಗೆ ತಕ್ಕ ಸಂದರ್ಭ ಇದಾಗಿದೆ. ಶ್ರದ್ಧೆಯಿಂದ ಕ್ರಿಯಾಶೀಲರಾದರೆ ಲಾಭದ ಮಾರ್ಗ ತೆರೆಯಲಿದೆ. ಶುಭಸಂಖ್ಯೆ: 7
ಸಿಂಹ: ಕೃಷಿಕರಿಗೆ ಪರೀಕ್ಷೆಯ ಕಾಲ. ದುಷ್ಟ ಜನರು ನಿಮ್ಮ ದೌರ್ಬಲ್ಯವನ್ನು ದುರುಪಯೋಗ ಮಾಡದಂತೆ ಜಾಗ್ರತೆ ವಹಿಸಿ. ಶುಭಸಂಖ್ಯೆ: 4
ಕನ್ಯಾ: ಕಾಗೆಗಳಿಗೆ ತಿನ್ನಲು ಸ್ವಲ್ಪ ಆಹಾರವನ್ನು ಹೊರಗೆ ಇಡಿ. ಗ್ರಹದೋಷದ ಸಮಸ್ಯೆ ಇಳಿಮುಖವಾಗಲು ಸಾಧ್ಯವಿದೆ. ಶುಭಸಂಖ್ಯೆ: 2
ತುಲಾ: ಮೂಗಿನ ತುದಿಯಲ್ಲೇ ಅಡಗಿರುವಂತಹ ಕೋಪ ನಿಮ್ಮ ಮೊದಲ ದೌರ್ಬಲ್ಯ. ಅದನ್ನು ನಿಯಂತ್ರಿಸಿದಷ್ಟೂ ಲಾಭವಿದೆ. ಶುಭಸಂಖ್ಯೆ: 3
ವೃಶ್ಚಿಕ: ಹಿರಿಯ ಮಹಿಳೆಯೊಬ್ಬರ ನೆರವಿನಿಂದ ನಿಮ್ಮ ಅನೇಕ ಬಗೆಯ ಬಿಕ್ಕಟ್ಟುಗಳನ್ನು ದೂರ ಮಾಡಿಕೊಳ್ಳಲಿದ್ದೀರಿ. ಶುಭಸಂಖ್ಯೆ: 6
ಧನಸ್ಸು: ಪೂರ್ವ ನಿಯೋಜಿತ ಯೋಜನೆಗಳ ಕರಡನ್ನು ಸಿದ್ಧ ಮಾಡದೆ ಮುನ್ನುಗ್ಗಿದರೆ ನಿಮಗೇ ತೊಂದರೆಯಾಗಿದೆ. ಶುಭಸಂಖ್ಯೆ: 5
ಮಕರ: ಸಂಗೀತ, ಚಿತ್ರಕಲೆ, ನೃತ್ಯ ಮುಂತಾದವುಗಳನ್ನು ಕಲಿಸುವ ಸಂಸ್ಥೆಗಳಿಗೆ ವಿಶೇಷವಾದಂತಹ ಜನಮನ್ನಣೆ ಒದಗಿಬರಲಿದೆ. ಶುಭಸಂಖ್ಯೆ: 9
ಕುಂಭ: ಹೊಸದಾದ ಕಾರ್ಯತಂತ್ರವೊಂದರ ಬಗ್ಗೆ ಪ್ರಭಾವಶಾಲಿ ವ್ಯಕ್ತಿಯೊಬ್ಬರಿಂದ ಸಲಹೆ ಸೂಚನೆಗಳನ್ನು ಸ್ವೀಕರಿಸುವಿರಿ. ಶುಭಸಂಖ್ಯೆ: 8
ಮೀನ: ಆರೋಗ್ಯದ ವಿಚಾರದಲ್ಲಿ ತುಸು ಏರುಪೇರು ಆಗುವ ಸಾಧ್ಯತೆ ಇದೆ. ಹೊರಗಿನ ಆಹಾರದಿಂದ ಆದಷ್ಟು ದೂರವಿದ್ದರೆ ಕ್ಷೇಮ. ಶುಭಸಂಖ್ಯೆ: 1