ಈ ರಾಶಿಯವರಿಗಿಂದು ಉತ್ತಮ ಆದಾಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ತಾಳ್ಮೆಯನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ಯಶಸ್ಸು. ಧಾರ್ವಿುಕ ಸಮಾರಂಭಗಳಲ್ಲಿ ಭಾಗಿ. ಶುಭಸಂಖ್ಯೆ: 9

ವೃಷಭ: ಪತ್ನಿಯ ಆರೋಗ್ಯ ಸಂಬಂಧ ಕಾಳಜಿ ವಹಿಸಿ. ಆಕಸ್ಮಿಕವಾಗಿ ಧನಲಾಭವಾಗಲಿದೆ. ಮಾನಸಿಕ ಒತ್ತಡ ಹೆಚ್ಚಾಗಬಹುದು. ಶುಭಸಂಖ್ಯೆ: 1

ಮಿಥುನ: ಹಿತಶತ್ರುಗಳ ಬಾಧೆ ಸಹಿಸಲು ಅಸಾಧ್ಯವೆನಿಸೀತು. ಬಂಧುಗಳ ಭೇಟಿಯಿಂದ ಸಮಾಧಾನ. ಸಮಾಜದಲ್ಲಿ ಮನ್ನಣೆ ಸಿಗಲಿದೆ. ಶುಭಸಂಖ್ಯೆ: 5

ಕಟಕ: ಸಾಮರಸ್ಯ ಕಾಯ್ದುಕೊಳ್ಳುವಿರಿ. ಉದ್ಯೋಗದಲ್ಲಿ ಒತ್ತಡ ಅನುಭವಿಸುವಿರಿ. ಸಹೋದರರೊಂದಿಗೆ ಜಗಳವಾದೀತು. ಶುಭಸಂಖ್ಯೆ: 2

ಸಿಂಹ: ವಿದ್ಯೆಯಲ್ಲಿ ನಿರಾಸಕ್ತಿ ಕಾಡಬಹುದು. ಕಾರ್ವಿುಕ ವರ್ಗದವರಿಗೆ ಶುಭ ಸಮಾಚಾರ. ಮನೆಯಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 7

ಕನ್ಯಾ: ವಿದ್ಯೆಯಲ್ಲಿ ಆಸಕ್ತಿ ತಾಳುವಿರಿ. ಅಧಿಕ ಖರ್ಚು ಎದುರಾಗಬಹುದು. ಆರೋಗ್ಯದಲ್ಲಿ ಏರುಪೇರು. ವೈದ್ಯರನ್ನು ಭೇಟಿ ಮಾಡಿ. ಶುಭಸಂಖ್ಯೆ: 6

ತುಲಾ: ಹೂಡಿಕೆ ವ್ಯವಹಾರದಲ್ಲಿ ನಷ್ಟವಾದೀತು. ವೈಭವಯುಕ್ತ ವಸ್ತು ಖರೀದಿಸುವಿರಿ. ಕಾನೂನು ವ್ಯಾಜ್ಯಗಳಲ್ಲಿ ಜಯ ನಿಮ್ಮ ಕಡೆಗಿದೆ. ಶುಭಸಂಖ್ಯೆ: 2

ವೃಶ್ಚಿಕ: ಪಿತೃವರ್ಗದಿಂದ ಧನಸಹಾಯ ಒದಗಿಬರಲಿದೆ. ಉದ್ಯೋಗದಲ್ಲಿ ನೆಮ್ಮದಿ. ಕೌಟುಂಬಿಕ ಕಲಹ ತಾರಕಕ್ಕೆ. ತಾಳ್ಮೆ ಇರಲಿ. ಶುಭಸಂಖ್ಯೆ: 6

ಧನುಸ್ಸು: ಉದ್ಯೋಗ ನಿಮಿತ್ತ ವರ್ಗಾವಣೆ ಸಾಧ್ಯತೆಯಿದೆ. ಸಹೋದ್ಯೋಗಿಗಳಿಂದ ಕಿರಿಕಿರಿ ಅನುಭವಿಸುವಿರಿ. ಮನೆಯಲ್ಲಿ ಅಶಾಂತಿ. ಶುಭಸಂಖ್ಯೆ: 3

ಮಕರ: ಸಿನಿಮಾರಂಗದವರಿಗೆ ಶುಭ. ಸಂಬಂಧಿಗಳಿಂದ ಧನ ಸಹಾಯ ಒದಗಿಬರಲಿದೆ. ಯಂತ್ರೋಪಕರಣಗಳಿಂದ ತೊಂದರೆ ಸಾಧ್ಯತೆ. ಶುಭಸಂಖ್ಯೆ: 4

ಕುಂಭ: ಭವಿಷ್ಯದ ಬಗ್ಗೆ ಚಿಂತೆ. ಇಷ್ಟ ದೇವರನ್ನು ಭಕ್ತಿಯಿಂದ ಭಜಿಸಿ. ಉತ್ತಮ ಆದಾಯ. ಔಷಧ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 8

ಮೀನ: ವಿವಾಹ ಯೋಗವಿದೆ. ವಿದ್ಯಾರ್ಥಿಗಳಿಗೆ ಹಿನ್ನಡೆಯಾದೀತು. ರಾಜಕಾರಣಿಗಳಿಗೆ ನಿರೀಕ್ಷಿತ ಸಹಕಾರ ದೊರೆಯುವುದು. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net