ಈ ರಾಶಿಯ ಹೆಣ್ಣು ಮಕ್ಕಳಿಗೆ ಇಂದು ಅನುಕೂಲಕರ ದಿನ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆರ್ಥಿಕ ಪ್ರಗತಿಯಾಗಿ ಸಂತಸ. ವೈವಾಹಿಕ ಜೀವನದಲ್ಲಿ ಸಮಾಧಾನ ದೊರೆಯುವುದು. ಅನ್ಯರ ವಿಚಾರಗಳಿಂದ ದೂರವಿರಿ. ಶುಭಸಂಖ್ಯೆ: 5

ವೃಷಭ: ಅಗ್ನಿಯ ಬಗ್ಗೆ ಜಾಗ್ರತೆ ಅಗತ್ಯ. ಮಕ್ಕಳ ವಿಚಾರದಲ್ಲಿ ಗೊಂದಲ. ಅನ್ಯರಿಂದ ಕಿರುಕುಳ ಸಾಧ್ಯತೆ. ಆರ್ಥಿಕ ಪರಿಸ್ಥಿತಿ ಸಾಧಾರಣ. ಶುಭಸಂಖ್ಯೆ: 1

ಮಿಥುನ: ದೂರದ ಪ್ರಯಾಣ. ಬೆನ್ನು ನೋವಿನ ಸಮಸ್ಯೆ. ಮಕ್ಕಳಿಂದ ಶುಭವಾರ್ತೆ. ವಿದೇಶಯಾನಕ್ಕೆ ಅಡೆತಡೆ, ಇಷ್ಟ ದೇವರ ಕೃಪೆ ಬೇಕು. ಶುಭಸಂಖ್ಯೆ:3

ಕಟಕ: ಜೀವನಕ್ಕೆ ಅನುಕೂಲ. ಪ್ರಯಾಣದಲ್ಲಿ ಕಳ್ಳರ ಬಗ್ಗೆ ಜಾಗ್ರತೆ ಇರಲಿ. ಮನಸ್ಸಿನಲ್ಲಿ ದುಗುಡ ಕಾಡೀತು. ಹಿತಶತ್ರುಗಳಿಂದ ದೂರವಿರಿ. ಶುಭಸಂಖ್ಯೆ: 6

ಸಿಂಹ: ಅಪವಾದ ಬಂದೀತು, ಧೃತಿಗೆಡಬೇಡಿ. ರಾಜಕೀಯ ವ್ಯಕ್ತಿಗಳಿಗೆ ಒಳ್ಳೆಯ ದಿನವಲ್ಲ. ಮಾನಸಿಕ ನೆಮ್ಮದಿಗೆ ಧ್ಯಾನ ಉತ್ತಮ. ಶುಭಸಂಖ್ಯೆ: 6

ಕನ್ಯಾ: ಲಾಭದ ಪ್ರಮಾಣ ಕಡಿಮೆ. ಬಂಧುಗಳ ವರ್ತನೆ ಯಿಂದ ಬೇಸರ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಅಗತ್ಯ. ಶುಭಸಂಖ್ಯೆ: 4

ತುಲಾ: ವ್ಯಾಪಾರದಲ್ಲಿ ನೆಮ್ಮದಿ. ಸ್ಥಿರಾಸ್ತಿಯಿಂದ ಲಾಭ. ರೈತರಿಗೆ ಅನುಕೂಲ. ರಾಜಕೀಯದವರಿಗೆ ಮುನ್ನಡೆೆ. ವಿದ್ಯಾರ್ಥಿಗಳಿಗೆ ಜಯ. ಶುಭಸಂಖ್ಯೆ: 7

ವೃಶ್ಚಿಕ: ಹಣಕಾಸಿಗಾಗಿ ಪರದಾಟ, ಮೇಲಧಿಕಾರಿಗಳಿಂದ ಕಿರುಕುಳ. ಲೇಖಕ ವೃತ್ತಿಯವರಿಗೆ ಸಮಾಧಾನ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 7

ಧನುಸ್ಸು: ಹಿರಿಯರಿಂದ ಪ್ರೀತಿಪೂರ್ವಕ ಬೈಗುಳ. ಕೃಷಿಕ ವಲಯದಲ್ಲಿ ಲಾಭ ಕಡಿಮೆ. ಹೆಣ್ಣು ಮಕ್ಕಳ ವಿಚಾರದಲ್ಲಿ ಜಾಗ್ರತೆ ಇರಲಿ. ಶುಭಸಂಖ್ಯೆ: 2

ಮಕರ: ಕಬ್ಬಿಣ ವ್ಯಾಪಾರದಲ್ಲಿ ಸಾಧಾರಣ ಪ್ರಗತಿ. ಚಾಲಕ ನಿಯಮ ಪಾಲನೆಯಲ್ಲಿ ಎಚ್ಚರದಿಂದಿರಿ. ಸರ್ಕಾರಿ ನೌಕರರಿಗೆ ವಿಪರೀತ ಒತ್ತಡ. ಶುಭಸಂಖ್ಯೆ: 6

ಕುಂಭ: ಹೆಣ್ಣು ಮಕ್ಕಳಿಗೆ ಅನುಕೂಲಕರ ದಿನ. ಮಾನಸಿಕ ಕಿರಿಕಿರಿ ದೂರಾಗಲಿದೆ. ಕೈಗಾರಿಕೆಯಿಂದ ಲಾಭ. ದೂರ ಪ್ರಯಾಣ ಮಾಡುವಿರಿ. ಶುಭಸಂಖ್ಯೆ: 2

ಮೀನ: ಸಂಬಂಧಿಕರಿಂದ ಅನುಕೂಲ. ಗಂಡು ಮಕ್ಕಳಿಂದ ಶುಭ. ವೈಚಾರಿಕ ಪ್ರಗತಿ. ಕೈಗಾರಿಕೆಯಲ್ಲಿ ನಿಮ್ಮಿಷ್ಟದಂತೆ ನಡೆಯುವುದು. ಶುಭಸಂಖ್ಯೆ:9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net