ಕನಸು ಕೈಗೂಡುವ ದಾರಿಯಲ್ಲಿದ್ದಾರೆ ಈ ರಾಶಿಯವರು...

Nitya-Bhavishya-vvani-1-2-1
Published on

ಮೇಷ: ಸುಖ, ನೆಮ್ಮದಿಗಳಿಗಾಗಿ ಮನಸಾ ಇಚ್ಛಿಸಿ ಯೋಜನೆಗಳನ್ನು ತಯಾರಿಸಿದರೆ ಗೆಲುವು, ಪ್ರಶಂಸೆಗಳೆಲ್ಲ ದೊರೆಯಲಿವೆ. ಶುಭಸಂಖ್ಯೆ: 7

ವೃಷಭ: ನಿಮ್ಮ ಅಪರೂಪದ ಸಂಘಟನಾತ್ಮಕ ಸಾಮರ್ಥ್ಯದಿಂದ ಜನರನ್ನು ಒಗ್ಗೂಡಿಸಿ ಮುನ್ನಡೆಸಲು ಅವಕಾಶವಿದೆ. ಶುಭಸಂಖ್ಯೆ: 9

ಮಿಥುನ: ತಾಯಿ ದುರ್ಗಾದೇವಿಯನ್ನು ಆರಾಧಿಸಿ. ಅನೇಕ ಬಗೆಯ ಮಾನಸಿಕ ಅಶಾಂತಿಗಳಿಂದ ವಿಮುಕ್ತಿ ಲಭ್ಯವಾಗಲಿದೆ. ಶುಭಸಂಖ್ಯೆ: 5

ಕಟಕ: ನಿಮ್ಮ ನೆರವಿಗಾಗಿ ನಿಮ್ಮವರೇ ಬರುವುದು ಅನುಮಾನಾಸ್ಪದ ವಿಚಾರ. ಆದರೆ ಇತರ ಜನರ ಒತ್ತಾಸೆ ಸಿಗಲಿದೆ. ಶುಭಸಂಖ್ಯೆ: 3

ಸಿಂಹ: ಮಕ್ಕಳಿಂದ ಅತ್ಯುತ್ತಮವಾದುದನ್ನು ಸ್ವೀಕರಿಸಲು ಈ ಕಾಲಘಟ್ಟವು ನಿಮಗೆ ಅನುಕೂಲಕರವಾಗಿದೆ. ಶುಭಸಂಖ್ಯೆ: 8

ಕನ್ಯಾ: ದಾರಿಯೇ ತೋಚುತ್ತಿಲ್ಲ ಎಂಬ ಮೊಂಡು ವಾದ ಬೇಡ. ಕ್ರಿಯಾಶೀಲತೆಯನ್ನು ನಂಬಿ ಮುನ್ನಡೆದರೆ ಒಳಿತಾಗಲಿದೆ. ಶುಭಸಂಖ್ಯೆ: 2

ತುಲಾ: ಜನರು ನಿಮ್ಮಲ್ಲಿರುವ ಪ್ರಾಮಾಣಿಕತೆಯನ್ನು ಮುಕ್ತಕಂಠದಿಂದ ಪ್ರಶಂಸಿಸುತ್ತಾರೆ. ಇದು ಸಂತಸದ ಅನುಭವ ತರಲಿದೆ. ಶುಭಸಂಖ್ಯೆ: 6

ವೃಶ್ಚಿಕ: ಅಧಿಕ ಪರಿಶ್ರಮದಿಂದ ನೀವು ಬಯಸಿದ ಕನಸುಗಳಿಗೆ ಅಚ್ಚುಕಟ್ಟಾದ ಸಿದ್ಧಿಯೊಂದನ್ನು ನಿರ್ವಿುಸಬಹುದಾಗಿದೆ. ಶುಭಸಂಖ್ಯೆ: 1

ಧನುಸ್ಸು: ವಿಘ್ನನಿವಾರಕ ಮಹಾಗಣಪತಿಯನ್ನು ಆರಾಧಿಸಿ. ಕಾರ್ಯಗಳಲ್ಲಿ ಎದುರಾಗುವ ಸಮಸ್ಯೆಗಳು ದೂರವಾಗಲಿವೆ. ಶುಭಸಂಖ್ಯೆ: 4

ಮಕರ: ನಿಮ್ಮ ಮೃದು ಮನೋಭಾವನೆ ಎಲ್ಲ ಸಲವೂ ಅನುಕೂಲಕ್ಕೆ ಬರುವುದಿಲ್ಲ. ಗಟ್ಟಿ ಧ್ವನಿಯಲ್ಲಿ ಮಾತನಾಡಿ. ಗೆಲುವಿದೆ. ಶುಭಸಂಖ್ಯೆ: 7

ಕುಂಭ: ಕನಸನ್ನು ನನಸಾಗಿಸುವ ದಾರಿಯಲ್ಲಿದ್ದೀರಿ. ಏಕಾಗ್ರತೆಯಿಂದ ಇನ್ನಷ್ಟು ಪ್ರಯತ್ನಗಳನ್ನು ಮಾಡಿದರೆ ಲಾಭ ಲಭಿಸಲಿದೆ. ಶುಭಸಂಖ್ಯೆ: 9

ಮೀನ: ಉತ್ತಮವಾಗಿ ಶ್ರಮಪಟ್ಟಲ್ಲಿ ಯಾರಿಂದಲೂ ನಿಮ್ಮನ್ನು ಸೋಲಿಸಲಾಗದು. ಸದ್ಗುರá-ವಾದ ದತ್ತಾತ್ರೇಯನನ್ನು ಆರಾಧಿಸಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net