ನಿಮ್ದು ಈ ರಾಶಿನಾ.. ಆರೋಗ್ಯ ಸಮಸ್ಯೆ ಕಾಡಬಹುದು ಎಚ್ಚರ!

Nitya-Bhavishya-vvani-1-2-1
Published on

ಮೇಷ: ಪ್ರಮುಖ ವಿಚಾರಗಳಿಗೆ ಕಾಲಾವಕಾಶ ಬೇಕಾಗಿದೆ ಎನಿಸಿ ಪ್ರಯತ್ನಿಸುತ್ತೀರಿ. ಕೆಲವು ಕೆಲಸಗಳನ್ನು ಬಿಡುತ್ತೀರಿ. ಅದೃಷ್ಟಸಂಖ್ಯೆ: 1

ವೃಷಭ: ಊಟ ಮಾಡುವುದೂ ಸೇರಿದಂತೆ ಒತ್ತಾಯ ಮಾಡದೆ ನೀವು ಏನನ್ನೂ ಮಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಅದೃಷ್ಟಸಂಖ್ಯೆ: 7

ಮಿಥುನ:ಹತ್ತು ನಿಮಿಷದಲ್ಲಿ ಮಾಡಿ ಮುಗಿಸಬೇಕಾದ ಕೆಲಸವನ್ನು ನೀವಿಂದು ಸಂಜೆಯ ತನಕ ಮಾಡಿದರೂ ಆಶ್ಚರ್ಯವಿಲ್ಲ. ಅದೃಷ್ಟಸಂಖ್ಯೆ: 5

ಕಟಕ:ನಿಮ್ಮ ಓಡಾಟ ರದ್ದಾಗುವ ಸಾಧ್ಯತೆ ಹೆಚ್ಚು. ಕಟ್ಟಿಹಾಕಿ ಕೂರಿಸಿದಂತೆ ಒಂದೇ ಕಡೆ ಕೂರಬೇಕಾಗುತ್ತದೆ. ಅದೃಷ್ಟಸಂಖ್ಯೆ: 9

ಸಿಂಹ:ಸತ್ಯ ಕಹಿಯಾದರೂ ಅನಗತ್ಯ ಭಯ ಕಡಿಮೆ ಮಾಡಿ, ನೆಮ್ಮದಿಯಿಂದ ಧೈರ್ಯದ ಜೀವನಕ್ಕೆ ನೆರವಾಗುತ್ತದೆ. ಅದೃಷ್ಟಸಂಖ್ಯೆ: 3

ಕನ್ಯಾ:ಅಜೀರ್ಣ ಅಥವಾ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ಕಾಡಬಹುದು. ಅದಕ್ಕಾಗಿ ಮುನ್ನೆಚ್ಚರಿಕೆ ಅಗತ್ಯ. ಅದೃಷ್ಟಸಂಖ್ಯೆ: 7

ತುಲಾ: ಮುಖ್ಯ ಕೆಲಸ ಬಿಟ್ಟು ಇದೇನು ಮಾಡುತ್ತಿದ್ದೇನೆ ಎನಿಸಿದರೂ ಏನೂ ಮಾಡಲಾಗದ ಸ್ಥಿತಿ ಎಂಬುದಂತೂ ನಿಜ. ಅದೃಷ್ಟಸಂಖ್ಯೆ: 4

ವೃಶ್ಚಿಕ: ಮುಖ್ಯ ವಿಚಾರವನ್ನೇ ಮರೆಯಬಹುದು. ಯಾವುದಕ್ಕೂ ಕೆಲಸಗಳನ್ನು ಬರೆದು ಇಟ್ಟುಕೊಳ್ಳುವುದು ಉತ್ತಮ. ಅದೃಷ್ಟಸಂಖ್ಯೆ: 6

ಧನಸ್ಸು: ಹಿಂದೆಂದೋ ತೆಗೆದುಕೊಂಡ ನಿರ್ಧಾರಗಳ ಪರಿಣಾಮವಾಗಿ ಇವತ್ತು ದುಃಖವನ್ನು ಅನುಭವಿಸಬೇಕಾಗುತ್ತದೆ. ಅದೃಷ್ಟಸಂಖ್ಯೆ: 9

ಮಕರ: ಬಹಳ ಅಗತ್ಯ ಇರುವ, ಆದರೆ ಮುಖ್ಯವಾದ ಚಿಕ್ಕ ವಸ್ತುವನ್ನು ಪಡೆಯಲು ಬಹಳ ಹುಡುಕಾಡುತ್ತೀರಿ. ಅದೃಷ್ಟಸಂಖ್ಯೆ: 2

ಕುಂಭ: ನಿಮ್ಮ ಕೆಲವು ಹಳೆಯ ನಂಬಿಕೆಗಳನ್ನು ಬದಲಾಯಿಸಿಕೊಳ್ಳಲೇಬೇಕು ಎನ್ನುವಂಥ ಸಂದರ್ಭ ಕಾಣುತ್ತೀರಿ. ಅದೃಷ್ಟಸಂಖ್ಯೆ: 4

ಮೀನ: ನಿಮಗೆ ಓಡಾಟದ ಉತ್ಸಾಹ ಹೆಚ್ಚಾಗುತ್ತದೆ. ಬೇಡವಾದರೂ ಹುಡುಕಿ ಕೆಲಸ ಮಾಡುವಿರಿ. ಆದರೂ ಸಮಾಧಾನವಿಲ್ಲ. ಅದೃಷ್ಟಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net