ನಿತ್ಯ ಭವಿಷ್ಯ: ಈ ರಾಶಿಯವರು ನಿಮ್ಮ ಅನುಮಾನ ಪ್ರವೃತ್ತಿಯನ್ನು ಬಿಟ್ಟರೆ ಒಳ್ಳೆಯದು

Nitya-Bhavishya-vvani-1-2-1
Published on

ಮೇಷ: ನೀವು ಬುದ್ಧಿವಂತರೇ ಆಗಿರುತ್ತೀರಿ. ಗಣ್ಯರ ಪ್ರಶಂಸೆಯ ಬಗೆಗಿನ ಅವಕಾಶ ಒದಗಿಬರಲಿದೆ. ಶುಭಸಂಖ್ಯೆ: 7

ವೃಷಭ: ನೀವು ಸಲಹೆ ಕೊಡುವ ವಿಷಯ ಬಂದಾಗ ತಾಳ್ಮೆಯನ್ನು ಕಳೆದುಕೊಳ್ಳದೆ ಸೂಕ್ತವಾಗಿ ಸಹಕರಿಸಿ. ಒಳಿತಿದೆ. ಶುಭಸಂಖ್ಯೆ: 3

ಮಿಥುನ: ಶ್ರೀದೇವಿಯನ್ನು ಆರಾಧಿಸುವ ಮೂಲಕ ಹಣಕಾಸಿನ ಬಗೆಗಿನ ಅನುಗ್ರಹವನ್ನು ಸಂಪಾದನೆ ಮಾಡಿಕೊಳ್ಳಿ. ಶುಭಸಂಖ್ಯೆ: 1

ಕಟಕ: ನಿಮಗೆ ಸಂಬಂಧಿಸಿಯೇ ಇರದ ಗೋಳಾಟವೊಂದು ತಲೆಗೆ ಸುತ್ತಿಕೊಳ್ಳಬಹುದು. ತುಸು ಎಚ್ಚರವಾಗಿರಿ. ಶುಭಸಂಖ್ಯೆ: 9

ಸಿಂಹ: ನಿಮ್ಮ ಸಲಹೆ ಸೂಚನೆ ಕೇಳಲು ಬಂದವರಿಗೆ ಮಾತ್ರ ಮಾರ್ಗದರ್ಶನ ಮಾಡಿ. ಅನವಶ್ಯಕ ಶ್ರಮ ಬೇಡ. ಶುಭಸಂಖ್ಯೆ: 2

ಕನ್ಯಾ: ಅನವಶ್ಯಕವಾದ ಕಿರಿಕಿರಿಯೊಂದನ್ನು ರೂಪಿಸಿಕೊಳ್ಳದಿರಲು ಸೂಕ್ತವಾದ ಯೋಜನೆಯನ್ನು ತಯಾರಿಸಿ. ಶುಭಸಂಖ್ಯೆ: 4

ತುಲಾ: ನೀರು ಹಾಗೂ ಆರೋಗ್ಯದ ವಿಚಾರಗಳಲ್ಲಿ ಪರಸ್ಪರ ಸಂಬಂಧಗಳಿವೆ. ಅದನ್ನು ಸೂಕ್ತವಾಗಿ ನಿಭಾಯಿಸಿ. ಶುಭಸಂಖ್ಯೆ: 5

ವೃಶ್ಚಿಕ: ಕೆಲವು ವ್ಯಾಪಾರ ವಹಿವಾಟುಗಳ ಸಂಬಂಧವಾಗಿ ಪ್ರಖ್ಯಾತಿಯ ಪಥವೊಂದು ಸಿಕ್ಕಿ ಹರ್ಷಕ್ಕೆ ದಾರಿ ಇದೆ. ಶುಭಸಂಖ್ಯೆ: 8

ಧನಸ್ಸು: ಸದ್ಗುರು ಶ್ರೀ ಮೇಧಾ ದಕ್ಷಿಣಾಮೂರ್ತಿಯನ್ನು ಸ್ತುತಿಸಿ. ಮಕ್ಕಳನ್ನು ವಿದ್ಯೆಯ ಬಗೆಗೆ ಹುರಿದುಂಬಿಸಿ. ಶುಭಸಂಖ್ಯೆ: 2

ಮಕರ: ನಿಮ್ಮಲ್ಲಿ ಶಕ್ತಿ, ಉತ್ಸಾಹ ಇದೆ. ಆದರೆ ಅದನ್ನು ಜಾಣತನದಿಂದ ಅನುಷ್ಠಾನಕ್ಕೆ ತನ್ನಿ. ಲಾಭಕ್ಕೆ ದಾರಿ ಸ್ಪಷ್ಟ. ಶುಭಸಂಖ್ಯೆ: 9

ಕುಂಭ: ವಿನಾಕಾರಣ ಮನೆಯಲ್ಲಿ ಪ್ರತಿಯೊಬ್ಬ ಸದಸ್ಯರ ಬಳಿಯೂ ಮನಸ್ತಾಪ ನಿರ್ಮಾಣ ಆಗದಿರಲಿ. ಶುಭಸಂಖ್ಯೆ: 7

ಮೀನ: ನಿಮ್ಮ ಅನುಮಾನ ಪ್ರವೃತ್ತಿಯನ್ನು ನಿಯಂತ್ರಣ ಮಾಡಲೇಬೇಕು. ಸಜ್ಜನರು ದೂರವಾಗಲು ಬಿಡಬೇಡಿ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net