

ಮೇಷ: ಉದ್ವೇಗಕ್ಕೆ ಒಳಗಾಗಬೇಡಿ. ನಿಯಂತ್ರಿಸಿಕೊಳ್ಳಿ. ಹಳೆಯ ಸಹಪಾಠಿಯ ಭೇಟಿ. ದಿನಾಂತ್ಯದಲ್ಲಿ ಆಶ್ಚರ್ಯಕರ ಸುದ್ದಿ. ಶುಭಸಂಖ್ಯೆ: 1
ವೃಷಭ: ಪರಿಶ್ರಮಕ್ಕೆ ತಕ್ಕಪ್ರತಿಫಲ ದೊರೆತು ಖುಷಿ. ಸಂಬಂಧಪಡದ ವಿಷಯಗಳ ಬಗ್ಗೆ ತಲೆ ಹಾಕಬೇಡಿ. ಅದು ಒಳ್ಳೆಯದಲ್ಲ. ಶುಭಸಂಖ್ಯೆ: 9
ಮಿಥುನ: ಅಷ್ಟಮದ ಶನಿಯಿಂದ ಅನಿರೀಕ್ಷಿತವಾಗಿ ಆರೋಗ್ಯ ಸಮಸ್ಯೆ. ಆತ್ಮಾಭಿಮಾನಕ್ಕೆ ಧಕ್ಕೆ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು. ಶುಭಸಂಖ್ಯೆ: 7
ಕಟಕ: ಉದ್ಯೋಗ , ವ್ಯಾಪಾರದಲ್ಲಿ ನಿರಾಸೆ. ಧನವ್ಯಯ. ತಾಳ್ಮೆಯಿರಲಿ. ತೀರ್ಮಾನ ತೆಗೆದುಕೊಳ್ಳುವಲ್ಲಿ ಗೊಂದಲ. ಶುಭಸಂಖ್ಯೆ: 5
ಸಿಂಹ: ಸಹೋದರರೊಂದಿಗೆ ಆಸ್ತಿ ವಿಚಾರದಲ್ಲಿ ಮನಸ್ತಾಪ ತಾರಕಕ್ಕೆ. ತಾಯಿಯ ಸಲಹೆ ಪಾಲಿಸಿ. ಭಯದ ವಾತಾವರಣ. ಶುಭಸಂಖ್ಯೆ: 8
ಕನ್ಯಾ: ಹಠಮಾರಿತನ ಹಲವು ಸಮಸ್ಯೆಗಳಿಗೆ ಅವಕಾಶಮಾಡಿಕೊಡುತ್ತದೆ. ಹುಷಾರಾಗಿರಿ. ಖಾಸಗಿ ಉದ್ಯೋಗಿಗಳಿಗೆ ಬಡ್ತಿ. ಶುಭಸಂಖ್ಯೆ: 3
ತುಲಾ: ನಿಮ್ಮ ಪ್ರತಿಭೆಗೆ ತಕ್ಕಂತೆ ಪುರಸ್ಕಾರ ಸಿಗುತ್ತದೆ. ಸಾಹಿತಿಗಳಿಗೆ ವಿಶೇಷ ದಿನ. ನಂಬಿದವರಿಂದಲೇ ಮೋಸ ಹೋಗುವ ಸಾಧ್ಯತೆ. ಶುಭಸಂಖ್ಯೆ:5
ವೃಶ್ಚಿಕ: ಕೇಂದ್ರದ ಗುರು ವಿಶೇಷ ಧನಲಾಭಕ್ಕೆ ಕಾರಣವಾಗುತ್ತಾನೆ. ಪಿತ್ರಾರ್ಜಿತ ಆಸ್ತಿ ವಿಷಯದಲ್ಲಿ ತಕರಾರು. ಶುಭಸಂಖ್ಯೆ: 8
ಧನುಸ್ಸು: ಆಸ್ತಿ ವಿಚಾರದಲ್ಲಿ ಗೊಂದಲ. ಬಂಧುವರ್ಗದಲ್ಲಿ ವಿಶೇಷ ಗೌರವ ಲಭ್ಯ. ಮನೆಯಲ್ಲಿ ಶುಭ ಕಾರ್ಯಕ್ಕೆ ಚಾಲನೆ ಸಿಗಲಿದೆ. ಶುಭಸಂಖ್ಯೆ: 4
ಮಕರ: ನಿರ್ಧಾರಗಳನ್ನು ಕುಟುಂಬದವರು ವಿರೋಧಿಸುವ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸದ ಚಿಂತೆ. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 1
ಕುಂಭ: ಚಿತ್ತಚಾಂಚಲ್ಯವನ್ನು ನಿಯಂತ್ರಿಸಿಕೊಳ್ಳಿ. ಗೃಹ ನಿರ್ವಣದ ಬಗ್ಗೆ ಅಂತಿಮ ತೀರ್ವನ. ಅನಾರೋಗ್ಯದ ಸಾಧ್ಯತೆ. ಶುಭಸಂಖ್ಯೆ: 3
ಮೀನ: ವ್ಯಾಪಾರಸ್ಥರಿಗೆ ನಷ್ಟದ ಭೀತಿ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ಪ್ರತಿಭಾನ್ವಿತರಿಗೆ ವಿಶೇಷ ಅವಕಾಶ. ಶುಭಸಂಖ್ಯೆ: 7