ಮಕರ ರಾಶಿಯವರಿಗೆ ಒದಗಿ ಬರಲಿದೆ ಒಂದು ವಿನೂತನ ಅವಕಾಶ...

Nitya-Bhavishya-vvani-1-2-1
Published on

ಮೇಷ: ಪ್ರಬಲ ಮನೋಬಲದ ಮೂಲಕ ಯಶಸ್ಸನ್ನು ದೃಢವಾಗಿ ಹಿಡಿದಿಟ್ಟುಕೊಳ್ಳುವ ಯತ್ನಗಳಿಗೆ ಸಫಲತೆ ಸಿಗಲಿದೆ. ಶುಭಸಂಖ್ಯೆ: 5

ವೃಷಭ: ಜೀವನಸಂಗಾತಿಯ ಯುಕ್ತವಾದ ಸೂಚನೆಗಳಿಂದ ಅನೇಕ ಹೊಸ ಬದಲಾವಣೆಗಳಿಗೆ ದಾರಿ ತೆರೆದುಕೊಳ್ಳಲಿದೆ. ಶುಭಸಂಖ್ಯೆ: 2

ಮಿಥುನ: ನಿಮ್ಮ ತಪ್ಪು ನಿಮಗೆ ಕಾಣಿಸದು. ತಪ್ಪುಗಳನ್ನು ತೋರಿಸಿ ಸರಿಪಡಿಸುವ ಆಪ್ತರೊಬ್ಬರು ಅನಿರೀಕ್ಷಿತವಾಗಿ ಸಿಗಲಿದ್ದಾರೆ. ಶುಭಸಂಖ್ಯೆ: 7

ಕಟಕ: ಕಪಟವಿರದ ಮಧುರ ಮಾತೇ ನಿಮ್ಮ ಅತ್ಯುತ್ತಮವಾದ ಶಕ್ತಿಯಾಗಿದೆ. ಜನರ ಮೆಚ್ಚುಗೆಯೂ ಲಭ್ಯವಾಗಲಿದೆ. ಶುಭಸಂಖ್ಯೆ: 4

ಸಿಂಹ: ಅಲೌಕಿಕ ಚಿಂತನೆಗಳು ಮತ್ತು ತಾರ್ಕಿಕ ಸಾಮರ್ಥ್ಯಗಳು ನಿಮ್ಮ ಬುದ್ಧಿಶಕ್ತಿಯನ್ನು ವರ್ಧಿಸಿ ಸಂತೃಪ್ತಿ ನೀಡಲಿವೆ. ಶುಭಸಂಖ್ಯೆ: 9

ಕನ್ಯಾ: ಹತ್ತಾರು ತಪ್ಪು ಹಾದಿಗಳು ಎದುರಾದರೂ ನೀವು ಮಾತ್ರ ನಿಶ್ಚಿತವಾಗಿ ಯಶಸ್ಸಿನ ದಾರಿಯನ್ನೇ ಹಿಡಿಯುವಿರಿ. ಶುಭಸಂಖ್ಯೆ: 1

ತುಲಾ: ಬಾಳಿನಲ್ಲಿ ಬಹಳ ವಿಷಾದ ಕಂಡಿದ್ದೀರಿ. ಆ ಎಲ್ಲ ಅನುಭವಗಳಿಂದಾಗಿ ಇಂದಿನ ಕಷ್ಟವನ್ನು ಮನಸ್ಸು ಎದುರಿಸಲಿದೆ. ಶುಭಸಂಖ್ಯೆ: 6

ವೃಶ್ಚಿಕ: ಶತ್ರುಗಳೂ ಹತ್ತಿರವಾಗುವ, ದುರ್ಜನರ ಮನ ಪರಿವರ್ತನೆಗೊಳ್ಳುವ ಉತ್ತಮೋತ್ತಮವಾದ ಕಾಲ ಬರಲಿದೆ. ಶುಭಸಂಖ್ಯೆ: 3

ಧನಸ್ಸು: ಸತ್ಯನಿಷ್ಠೆಯಿಂದ ಏನು ಲಾಭ ಎಂಬ ನಿಮ್ಮ ಪ್ರಶ್ನೆಗೆ ಇಂದು ಸುಲಭದಲ್ಲಿಯೇ ಉತ್ತರವೊಂದು ದೊರೆಯಲಿದೆ. ಶುಭಸಂಖ್ಯೆ: 8

ಮಕರ: ಸುಂಟರಗಾಳಿಯನ್ನೂ ಎದುರಿಸಿ ನಿಲ್ಲುವ ಆತ್ಮಶಕ್ತಿಯ ನಿಮಗೆ ವಿನೂತನ ಅವಕಾಶವೊಂದು ಎದುರಾಗಲಿದೆ. ಶುಭಸಂಖ್ಯೆ: 5

ಕುಂಭ: ಜೀವನದಲ್ಲಿ ಬಹು ದೂರ ಸಾಗಿಬಂದು ದಣಿವಾಗಿದ್ದರೂ, ಹೊಸ ಆಲೋಚನಾವಿಧಾನದಿಂದ ಬೇಗ ಗೆಲುವಿದೆ. ಶುಭಸಂಖ್ಯೆ: 2

ಮೀನ: ನಿಮ್ಮ ದೊಡ್ಡ ಆಸ್ತಿಯೆನಿಸಿರುವ ಮಕ್ಕಳ ಒತ್ತಡವನ್ನು ನಿವಾರಣೆ ಮಾಡಿ. ನಿಮ್ಮ ಸಂತಸಕ್ಕೆ ದಾರಿ ಮುಕ್ತವಾಗಲಿದೆ. ಶುಭಸಂಖ್ಯೆ: 7 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net