ಈ ರಾಶಿಯವರಿಗೆ ಅದ್ದೂರಿ ಜೀವನಶೈಲಿಯಿಂದಲೇ ಸಮಸ್ಯೆಯಾಗಲಿದೆ...

Nitya-Bhavishya-vvani-1-2-1
Published on

ಮೇಷ: ಧನಸಂಪಾದನೆಯ ಬಗೆಗೆ ಆಲೋಚನೆಗಳನ್ನು ಹೊಂದಿದ್ದರೆ ತಪ್ಪೇನೂ ಇಲ್ಲ. ಆದರೆ ಮೋಸ ಮಾಡುವವರ ಬಗ್ಗೆ ಜಾಗ್ರತೆ. ಶುಭಸಂಖ್ಯೆ: 9

ವೃಷಭ: ಎಲ್ಲ ದಿನಗಳೂ ಗೆಲುವಿನ ದಿನಗಳು ಎನಿಸಲಾರವು. ಸಾಧಕ ಬಾಧಕಗಳನ್ನು ಆಲೋಚಿಸದೆ ಅವಸರಪಡದಿರಿ. ಶುಭಸಂಖ್ಯೆ: 8

ಮಿಥುನ: ದುಃಖ ಎಂಬುದು ಎಂದಿಗೂ ಅಂತ್ಯವನ್ನು ಹೊಂದುವುದಿಲ್ಲ. ಕುಲದೇವರ ಕೃಪೆಯಿಂದ ನಿಮ್ಮ ಪಾಲಿಗೆ ಹರ್ಷವಿದೆ. ಶುಭಸಂಖ್ಯೆ: 1

ಕಟಕ: ಹಿರಿಯರೊಬ್ಬರಿಂದ ಆಸ್ತಿಯ ವಿಚಾರದಲ್ಲಿ ಅನಿರೀಕ್ಷಿತವಾಗಿ ಸಹಾಯ ದೊರೆಯಲಿದೆ. ನೆಮ್ಮದಿಯೂ ಲಭಿಸಲಿದೆ. ಶುಭಸಂಖ್ಯೆ: 2

ಸಿಂಹ: ಭೂಸಂಬಂಧಿ ಸಮಸ್ಯೆಗಳು ದೂರವಾಗಲು ಶ್ರೀ ಭೂವರಾಹಸ್ವಾಮಿಯನ್ನು ಆರಾಧಿಸಿ. ನಿಮಗೆ ಒಳಿತುಂಟಾಗಲಿದೆ. ಶುಭಸಂಖ್ಯೆ: 6

ಕನ್ಯಾ: ಕಳ್ಳತನದ ನಂತರ ದುಃಖಪಡುವ ಬದಲಿಗೆ ಮೊದಲೇ ಎಚ್ಚರಿಕೆಯಿಂದಿದ್ದರೆ ಕ್ಷೇಮವಿದೆ. ನಷ್ಟವೂ ಉಂಟಾಗದು. ಶುಭಸಂಖ್ಯೆ: 7

ತುಲಾ: ನಿಮ್ಮ ಮಾತುಗಳನ್ನು ಚಾತುರ್ಯದಿಂದ ಗಮನಿಸುವಂತಹ ಹಿತಶತ್ರುಗಳ ಎದುರು ಮನಬಂದಂತೆ ಮಾತಾಡಬೇಡಿ. ಶುಭಸಂಖ್ಯೆ: 4

ವೃಶ್ಚಿಕ: ವೃತ್ತಿಯಲ್ಲಿನ ಅಭದ್ರತೆಯ ಬಗ್ಗೆ ಅತಿಯಾಗಿ ಭಯಪಡಬೇಡಿ. ಮಹಾಗಣಪತಿಯನ್ನು ಸ್ತುತಿಸಿ. ಲಾಭವಾಗಲಿದೆ. ಶುಭಸಂಖ್ಯೆ: 3

ಧನುಸ್ಸು:  ತುಂಬಿದ ಕೊಡ ತುಳುಕುವುದಿಲ್ಲ ಎಂಬುದನ್ನು ನೆನಪಿಸಿಕೊಳ್ಳಿ. ಇದರಿಂದ ವಿಶೇಷ ಪ್ರಗತಿಗೆ ಬೇಕಾದ ದಾರಿ ತೆರವಾಗಲಿದೆ. ಶುಭಸಂಖ್ಯೆ: 5

ಮಕರ: ಕಲಾವಿದರು, ರೈತರು, ವಿಮಾ ಏಜೆಂಟರಿಗೆ ಸಂತಸದ ದಿನವಿದು. ಯಾವುದೇ ಕಾರಣಕ್ಕೆ ತಾಳ್ಮೆಯನ್ನು ಕಳೆದುಕೊಳ್ಳದಿರಿ. ಶುಭಸಂಖ್ಯೆ: 8

ಕುಂಭ: ಸ್ನೇಹಿತರೊಡನೆ ಜಗಳವಾಡುವುದು ಬೇಡ. ಅತಿಯಾದ ಸಲುಗೆಯನ್ನೂ ನೀಡಬೇಡಿ. ಸಮತೋಲನವೇ ಇರಲಿ. ಶುಭಸಂಖ್ಯೆ: 2

ಮೀನ: ಅದ್ಧೂರಿಯ ಜೀವನಶೈಲಿಯಿಂದ ಸಮಸ್ಯೆಯೇ ಎದುರಾದೀತು. ಸರಳ ನಡೆನುಡಿಗಳಿಂದಲೇ ಜನಪ್ರಿಯತೆ ಪಡೆಯುವಿರಿ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net