ಈ ರಾಶಿಯವರಿಗಿಂದು ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ಕೆಲಸದ ಪ್ರಗತಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆಹ್ಲಾದ ಎನಿಸುವ ಘಟನೆಗಳು ನಡೆಯುವವು. ಮನೆಯಲ್ಲಿ ಶುಭ ಕೆಲಸಕ್ಕೆ ಚಾಲನೆ. ವ್ಯಾಪಾರದಲ್ಲಿ ಅಧಿಕ ಲಾಭ ಸಾಧ್ಯತೆ. ಶುಭಸಂಖ್ಯೆ: 5

ವೃಷಭ: ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗಿ. ಬಡವರಿಗೆ ಸಹಾಯ ಮಾಡಿ. ಗುರು ಭೇಟಿ. ಮದುವೆ ವಿಚಾರದಲ್ಲಿ ಕಾರ್ಯಸಿದ್ದಿ. ಶುಭಸಂಖ್ಯೆ: 8

ಮಿಥುನ: ಬಂಧುಗಳೊಂದಿಗೆ ಸಂತೋಷಕೂಟ. ನನೆಗುದಿಗೆ ಬಿದ್ದ ಗೃಹ ನಿರ್ಮಾಣ ಕೆಲಸಕ್ಕೆ ಚಾಲನೆ. ಆತ್ಮೀಯರ ಸಲಹೆ ಪಡೆದುಕೊಳ್ಳಿ. ಶುಭಸಂಖ್ಯೆ: 8

ಕಟಕ: ಆತ್ಮವಿಶ್ವಾಸಕ್ಕೆ ಧಕ್ಕೆ ತರುವಂತಹ ಘಟನೆ. ಸಾರ್ವಜನಿಕವಾಗಿ ತಾಳ್ಮೆಯಿಂದ ವರ್ತಿಸಿ. ಹತ್ತಿರದ ಬಂಧುಗಳ ಆಗಮನ. ಶುಭಸಂಖ್ಯೆ: 3

ಸಿಂಹ: ದೊಡ್ಡಮೊತ್ತದ ಧನ ನಷ್ಟ. ಗೃಹ ನಿರ್ವಣಕ್ಕೆ ಕುಟುಂಬದೊಂದಿಗೆ ಮಾತುಕತೆ. ಆತ್ಮೀಯ ಸ್ನೇಹಿತನ ಆಗಮನ. ಶುಭಸಂಖ್ಯೆ: 4

ಕನ್ಯಾ: ಸ್ವಂತ ಉದ್ಯೋಗ ಮಾಡುವವರಿಗೆ ವಿಶೇಷ ದಿನ. ಗಾಯಕರಿಗೆ ವಿಶೇಷ ಧನಲಾಭ. ಹಳೆಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 4

ತುಲಾ: ದೃಢ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ಸಂಗಾತಿಯ ಸಲಹೆ ಪರಿಗಣಿಸಿ. ಸಹೋದರರೊಂದಿಗೆ ವಾಗ್ವಾದ ಉಂಟಾಗಬಹುದು. ಶುಭಸಂಖ್ಯೆ:4

ವೃಶ್ಚಿಕ: ಭೂ ವಿವಾದಕ್ಕೆ ಸಂಬಂಧಿಸಿ ಹಿರಿಯರ ಮಾರ್ಗದರ್ಶನ ಪಡೆಯಿರಿ. ಕೃಷಿಕರಿಗೆ ವಿಶೇಷ ದಿನ. ಪ್ರತಿಭಾನ್ವಿತರಿಗೆ ಉತ್ತಮ ಅವಕಾಶ. ಶುಭಸಂಖ್ಯೆ: 5

ಧನುಸ್ಸು: ಮನೆಯಲ್ಲಿ ಶುಭ ಕಾರ್ಯಕ್ಕೆ ಚಾಲನೆ. ಹಣದ ಕೊರತೆ ಕಾಡಬಹುದು. ವ್ಯಾಪಾರದಲ್ಲಿ ಅಧಿಕ ನಷ್ಟ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ:1

ಮಕರ: ಮಾತಿನಿಂದ ಶತ್ರುಗಳು ಸೃಷ್ಟಿಯಾಗಬಹುದು. ಸಾರ್ವಜನಿಕ ರಂಗದಲ್ಲಿರುವವರಿಗೆ ವಿಶೇಷ ಮನ್ನಣೆ. ಬಂಧುಗಳ ಮನೆಗೆ ಭೇಟಿ. ಶುಭಸಂಖ್ಯೆ:1

ಕುಂಭ: ಕೂಡಿಟ್ಟ ಹಣದ ಅಪವ್ಯಯ. ಮಕ್ಕಳ ಭವಿಷ್ಯದ ಚಿಂತೆ ಕಾಡಬಹುದು. ಧಾರ್ವಿುಕ ಕ್ಷೇತ್ರಕ್ಕೆ ಭೇಟಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 9

ಮೀನ: ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ಕೆಲಸದ ಪ್ರಗತಿ. ಬಂಧುಗಳ ಆಗಮನ. ಕುಟುಂಬದೊಂದಿಗೆ ದೇವಾಲಯಕ್ಕೆ ಭೇಟಿ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net