

ಮೇಷ: ಸದ್ಯದ ಗೆಲುವಿನ ಬಗೆಗೆ ಸಂತಸಪಡುತ್ತಿದ್ದೀರಿ. ಆದರೂ ಎದುರಾಳಿಗಳನ್ನು ಹಗುರವಾಗಿ ಕಾಣುವುದೇನೂ ಬೇಕಾಗಿಲ್ಲ. ಶುಭಸಂಖ್ಯೆ: 2
ವೃಷಭ: ನಿರಾಶೆಯ ಅಲೆಗಳಿಂದ ಸ್ವಲ್ಪ ಕಂಗೆಡುವಿರಿ. ಆದರೂ ಹಿಂಜರಿಯದೆ ಶೌರ್ಯದಿಂದ ಕನಸನ್ನು ಬೇಗಬೇಗನೆ ಸಾಕಾರಗೊಳಿಸಿ. ಶುಭಸಂಖ್ಯೆ: 9
ಮಿಥುನ: ವೃಥಾ ಖರ್ಚಿನ ಹಾದಿಗಳನ್ನು ಹಿಡಿಯುತ್ತಿದ್ದೀರಿ. ಆದರೆ ಅದರಿಂದ ದಿಢೀರ್ ಧನಲಾಭವೇನೂ ದೊರೆಯದು ಎಂದು ತಿಳಿದಿರಿ. ಶುಭಸಂಖ್ಯೆ: 4
ಕಟಕ: ಹಾಸಿಗೆ ಇದ್ದಷ್ಟೇ ಕಾಲುಗಳನ್ನು ಚಾಚುವಂಥ ಮನೋಭಾವವನ್ನು ಪ್ರದರ್ಶಿಸುವಿರಿ. ಇದರಿಂದ ಬಹು ದೊಡ್ಡದನ್ನೇ ಸಾಧಿಸುವಿರಿ. ಶುಭಸಂಖ್ಯೆ: 8
ಸಿಂಹ: ನಿಮ್ಮ ಏಳ್ಗೆಯನ್ನು ಸಹಿಸಲಾಗದವರು ಸ್ವಲ್ಪ ಕಿರಿಕಿರಿ ಉಂಟುಮಾಡಬಹುದು. ಭಕ್ತಿಯಿಂದ ಶನೈಶ್ಚರ ಸ್ತೋತ್ರವನ್ನು ಪಠಿಸಿ. ಶುಭಸಂಖ್ಯೆ: 5
ಕನ್ಯಾ: ಸಮಯಾವಧಾನಗಳಿಂದ ಕೆಲಸದ ಸ್ಥಳದಲ್ಲಿ ವಿಶೇಷ ಜನಪ್ರಿಯತೆಯನ್ನು ಪಡೆಯಲಿದ್ದೀರಿ. ಆದರೆ ಅದಕ್ಕೇ ಗರ್ವಪಡದಿರಿ. ಶುಭಸಂಖ್ಯೆ: 3
ತುಲಾ: ಹಲವಾರು ತಾಪತ್ರಯಗಳು ಎದುರಾಗುತ್ತವೆ. ಅದರ ನಡುವೆಯೂ ಹಿಡಿದ ಕೆಲಸಗಳನ್ನು ಮುಗಿಸುವ ಛಲ ತೋರುವಿರಿ. ಶುಭಸಂಖ್ಯೆ: 7
ವೃಶ್ಚಿಕ: ಕೈಗೆ ಬಂದ ತುತ್ತು ಬಾಯಿಗೆ ಬರುವುದನ್ನು ತಡೆಯುವುದಕ್ಕೆ ದುಷ್ಟರು ಪ್ರಯತ್ನಿಸಬಹುದು. ಆದರೆ ಅವರ ವಿರುದ್ಧ ಗೆಲ್ಲುವಿರಿ. ಶುಭಸಂಖ್ಯೆ: 1
ಧನುಸ್ಸು: ಕೆಲವು ಸಹೋದ್ಯೋಗಿಗಳು ನಿಮ್ಮ ವಿರುದ್ಧ ತಿರುಗಿಬೀಳಬಹುದು. ಸಂಕಷ್ಟದ ಪರಿಸ್ಥಿತಿಯನ್ನು ಜಾಣ್ಮೆಯಿಂದಲೇ ನಿರ್ವಹಿಸಿ. ಶುಭಸಂಖ್ಯೆ: 6
ಮಕರ: ಅನ್ಯಾಯವನ್ನು ಪ್ರತಿಭಟಿಸುವುದು ನಿಮ್ಮ ಸಹಜ ಸ್ವಭಾವ. ಎದುರಾಳಿಗಳನ್ನು ಸೋಲಿಸಲು ಇನ್ನೂ ಹೆಚ್ಚಿನ ಸ್ಥೆ ೖರ್ಯವನ್ನು ತೋರಿಸಿ. ಶುಭಸಂಖ್ಯೆ: 2
ಕುಂಭ: ಹಳೆಯ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ನಿಮ್ಮ ನೂತನ ಪ್ರಯತ್ನಗಳಿಗೆ ಅವರ ಬೆಂಬಲ ಕೂಡ ಗಳಿಸಿಕೊಂಡರೆ ಉತ್ತಮ. ಶುಭಸಂಖ್ಯೆ: 9
ಮೀನ: ಮತ್ತೊಮ್ಮೆ ಕನಸು ಕಂಡು ಗೆದ್ದೇ ಗೆಲ್ಲುವೆನೆಂಬ ಧೈರ್ಯವನ್ನು ಹೊಂದಿದ್ದಿರಿ. ಈ ಮನಃಸ್ಥಿತಿಯು ಯಶಸ್ವಿಯಾಗುವುದಕ್ಕೆ ಸಹಕಾರಿ. ಶುಭಸಂಖ್ಯೆ: 4