ಈ ರಾಶಿಯವರಿಗಿಂದು ಮಾನಸಿಕ ನೆಮ್ಮದಿ, ಕಾರ್ಯ ಸಾಧನೆಯಾಗಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ತಾಳ್ಮೆಯಿಂದ ಇರಿ. ಆರೋಗ್ಯದಲ್ಲಿ ವ್ಯತ್ಯಾಸ ವಾಗಬಹುದು. ವಿವಾದಾತ್ಮಕ ವಿಷಯಗಳಿಂದ ದೂರವಿರುವುದು ಕ್ಷೇಮ. ಶುಭಸಂಖ್ಯೆ: 5

ವೃಷಭ: ಮನಕ್ಲೇಶ. ಅಪರಿಚಿತರಿಂದ ತೊಂದರೆ. ಹೆಚ್ಚಿನ ಜವಾಬ್ದಾರಿ ಹೊರಬೇಕಾಗಬಹುದು. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 8

ಮಿಥುನ: ಕಾರ್ಯಗಳಲ್ಲಿ ವಿಳಂಬ. ವಿನಾಕಾರಣ ದ್ವೇಷ ಸಾಧಿಸುವವರಿದ್ದಾರೆ. ಶತ್ರುಭಾದೆ ಬಗ್ಗೆ ಎಚ್ಚರ. ಮಾನಸಿಕ ಒತ್ತಡ ನಿಯಂತ್ರಿಸಿಕೊಳ್ಳಿ. ಶುಭಸಂಖ್ಯೆ: 9

ಕಟಕ: ಪ್ರಮುಖ ಕೆಲಸದಲ್ಲಿ ಜಯ. ಮನೋವ್ಯಥೆ. ಸಲ್ಲದ ಅಪವಾದ. ಅತಿಯಾದ ನಿದ್ರೆ. ವ್ಯಾಪಾರ ವ್ಯವಹಾರಗಳಲ್ಲಿ ಮೋಸ. ಶುಭಸಂಖ್ಯೆ: 7

ಸಿಂಹ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ. ಅನ್ಯರಿಂದ ಸಹಾಯ. ಧನ ಲಾಭ. ಕುಟುಂಬದಲ್ಲಿ ಪ್ರೀತಿ. ಶತ್ರು ಬಾಧೆ ಕಾಡಬಹುದು. ಶುಭಸಂಖ್ಯೆ: 1

ಕನ್ಯಾ: ಅನಗತ್ಯ ಖರ್ಚು. ಅಧಿಕ ಕೆಲಸದಿಂದ ವಿಶ್ರಾಂತಿ ಅಗತ್ಯ. ಶತ್ರುಧ್ವಂಸ. ಅನಾರೋಗ್ಯ. ಇತರರ ಮಾತಿಗೆ ಮರುಳಾಗದಿರಿ. ಶುಭಸಂಖ್ಯೆ:3

ತುಲಾ: ದಾಂಪತ್ಯದಲ್ಲಿ ಬಿರುಕು. ಕೋಪ ಅನರ್ಥಕ್ಕೆ ಕಾರಣವಾಗಲಿದೆ. ಸೌಜನ್ಯದಿಂದ ವರ್ತಿಸಿ. ಮಾಡುವ ಕೆಲಸದಲ್ಲಿ ಹಿಂಜರಿಕೆ ಬೇಡ. ಶುಭಸಂಖ್ಯೆ: 6

ವೃಶ್ಚಿಕ: ಉದ್ಯೋಗದಲ್ಲಿ ಭಡ್ತಿ. ಪ್ರಿಯ ಜನರ ಭೇಟಿ. ಶರೀರದಲ್ಲಿ ತಳಮಳದ ಅನುಭವ. ಭೂ ಲಾಭ, ಮಾತಿನ ಮೇಲೆ ನಿಗಾ ವಹಿಸಿ. ಶುಭಸಂಖ್ಯೆ: 6

ಧನುಸ್ಸು: ಆರ್ಥಿಕ ವಂಚನೆಗೊಳಗಾಗುವ ಸಾಧ್ಯತೆ. ಪುಣ್ಯಕ್ಷೇತ್ರ ದರ್ಶನ. ಸತ್ಕಾರ್ಯದಲ್ಲಿ ಆಸಕ್ತಿ. ಮಿತ್ರರಿಂದ ಕೆಡುಕು. ಸಾಧಾರಣ ಫಲ. ಶುಭಸಂಖ್ಯೆ: 9

ಮಕರ: ಹಣ ಬಂದರೂ ಉಳಿಯುವದಿಲ್ಲ. ಅಧಿಕ ಧನ ವ್ಯಯವಾದೀತು. ಅಕಾಲ ಭೋಜನ. ತೀರ್ಥಯಾತ್ರೆ, ದೇವಾಲಯಗಳಿಗೆ ಭೇಟಿ. ಶುಭಸಂಖ್ಯೆ: 3

ಕುಂಭ: ಮಾನಸಿಕ ನೆಮ್ಮದಿ. ಆಲಸ್ಯ ಮನೋಭಾವ ಒಳ್ಳೆಯದಲ್ಲ. ಕಾರ್ಯ ಸಾಧನೆಯಾಗಲಿದೆ. ದುಡುಕು ಸ್ವಭಾವ. ಚೋರ ಭಯ. ಶುಭಸಂಖ್ಯೆ: 1

ಮೀನ: ಮಾತಿನಿಂದ ಕಲಹ. ನೆಮ್ಮದಿ ಇಲ್ಲದ ಜೀವನ. ದೂರ ಪ್ರಯಾಣ. ಆರೋಗ್ಯದ ಸಮಸ್ಯೆ ಬಾಧಿಸಲಿದೆ. ವಿದ್ಯಾರ್ಥಿಗಳಿಗೆ ಪ್ರಗತಿ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net