ನಿತ್ಯ ಭವಿಷ್ಯ: ಈ ರಾಶಿಯವರಿಗೆ ಮೇಲಧಿಕಾರಿಗಳು ಮೆಚ್ಚುಗೆ ಸೂಚಿಸಲಿದ್ದಾರೆ

Nitya-Bhavishya-vvani-1-2-1
Published on

ಮೇಷ: ಅಗತ್ಯ ಕಾಗದಪತ್ರಗಳು ಕೂಡಲೇ ಕೈಗೆ ಸಿಗುವಂತೆ ಜೋಪಾನವಾಗಿರಿಸಿ. ಇದರಿಂದ ಕಿರಿಕಿರಿ ಕೊನೆಯಾಗಲಿದೆ. ಶುಭಸಂಖ್ಯೆ: 7

ವೃಷಭ: ಆರೋಗ್ಯದ ವಿಚಾರದಲ್ಲಿ ಗಮನವಿರಲಿ. ಉಳಿದ ವಿಚಾರಗಳೆಲ್ಲ ತೊಂದರೆ ಇಲ್ಲದೆ ಕ್ಷೇಮವಾಗಿಯೇ ಇರಲಿವೆ. ಶುಭಸಂಖ್ಯೆ: 5

ಮಿಥುನ: ಮಾನಸಿಕ ದೌರ್ಬಲ್ಯಗಳನ್ನು ಹಿಮ್ಮೆಟ್ಟಿಸಿ. ಇಲ್ಲವಾದರೆ ಕೆಲವು ಸ್ವಾರ್ಥಿಗಳು ನಾಶದ ದಾರಿಯನ್ನು ತೋರಬಹುದು. ಶುಭಸಂಖ್ಯೆ: 2

ಕಟಕ: ವೃತ್ತಿಯಲ್ಲಿ ಅನೇಕ ರೀತಿಯ ಒಳಿತುಗಳು ಸಂಭವಿಸಲಿವೆ. ಮೇಲಧಿಕಾರಿಗಳು ಮೆಚ್ಚುಗೆ ಸೂಚಿಸಲಿದ್ದಾರೆ. ಶುಭಸಂಖ್ಯೆ: 4

ಸಿಂಹ: ನಿಮಗೆ ಶುಭವನ್ನು ಉಂಟುಮಾಡುವ ವ್ಯಕ್ತಿ ಎಂದು ಯಾರನ್ನೂ ಕೂಡ ತಪ್ಪಾಗಿ ಗ್ರಹಿಸದಿರಿ. ಜಾಗ್ರತೆ ಅಗತ್ಯ. ಶುಭಸಂಖ್ಯೆ: 6

ಕನ್ಯಾ: ಬಾಲ್ಯಸ್ನೇಹಿತರೊಬ್ಬರು ನಾನಾ ರೀತಿಯಲ್ಲಿ ನೆರವು ನೀಡುತ್ತಾರೆ. ಕಾರ್ಯಗಳಲ್ಲಿ ನಿರಾಳತೆ ಲಭ್ಯವಾಗಲಿದೆ. ಶುಭಸಂಖ್ಯೆ: 9

ತುಲಾ:  ಕ್ಷಣಿಕ ಸುಖಕ್ಕಾಗಿ ಬದುಕಿನ ನೀತಿಯನ್ನು ಮೀರಲು ಹೋಗಬೇಡಿ. ತೊಂದರೆಗಳೇ ಎದುರಾಗಲು ಸಾಧ್ಯವಿದೆ. ಶುಭಸಂಖ್ಯೆ: 1

ವೃಶ್ಚಿಕ: ಉನ್ನತ ವ್ಯಾಸಂಗದ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶಗಳು ಕೂಡಿಬರುವ ಸಾಧ್ಯತೆಗಳಿವೆ. ಶುಭಸಂಖ್ಯೆ: 3

 ಧನುಸ್ಸು: ಪದೇಪದೆ ಒಪ್ಪಂದವನ್ನು ಬದಲಿಸುವ ಸಹಪಾಲುದಾರರಿಂದ ದೂರ ಸರಿದರೆ ವ್ಯವಹಾರದಲ್ಲಿ ಜಯವಿದೆ. ಶುಭಸಂಖ್ಯೆ: 8

ಮಕರ: ದೈನಂದಿನ ವ್ಯವಹಾರದ ಗಳಿಕೆಯ ವಿಚಾರದಲ್ಲಿ ಏರಿಕೆಯ ಸಿಹಿ ಸುದ್ದಿಯೊಂದು ಕೇಳಿಬರುವ ಅವಕಾಶವಿದೆ. ಶುಭಸಂಖ್ಯೆ: 7

ಕುಂಭ: ಲೆಕ್ಕ ತಪ್ಪಿದ್ದರಿಂದಲೇ ಸಾಕಷ್ಟು ನಷ್ಟಗಳನ್ನು ಅನುಭವಿಸಿದ್ದೀರಿ. ಇನ್ನಾದರೂ ಸ್ವಲ್ಪ ಎಚ್ಚರಿಕೆಯಿಂದಿದ್ದರೆ ಉತ್ತಮ. ಶುಭಸಂಖ್ಯೆ: 2

ಮೀನ: ತುಂಬ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಸಂಗಾತಿಯಿಂದ ಪರಿಹಾರ ಸಿಗಲಿದೆ. ಕುಲದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net