ಈ ರಾಶಿಯವರು ತಾಳ್ಮೆಯಿಂದ ಇದ್ದರೆ ನಿಮ್ಮ ಎಲ್ಲ ಕೆಲಸಗಳೂ ಬೇಗ ಮುಗಿಯಲಿವೆ...

Nitya-Bhavishya-vvani-1-2-1
Published on

ಮೇಷ: ಆತ್ಮೀಯ ವ್ಯಕ್ತಿ ಎಂದು ಎಲ್ಲವನ್ನೂ ಅವರ ಬಳಿ ಹೇಳದಿರಿ. ಆರ್ಥಿಕ ಸ್ಥಿತಿ ಸುಧಾರಣೆ. ವಿರೋಧಿಗಳ ಬಗ್ಗೆ ಎಚ್ಚರ. ಶುಭಸಂಖ್ಯೆ: 5

ವೃಷಭ: ಬಾಳಸಂಗಾತಿಯ ಸಲಹೆ ಪಡೆದೇ ಮುಂದುವರಿಯಿರಿ. ಕೆಲ ವಿಷಯಗಳಲ್ಲಿ ಅವರ ತೀರ್ಮಾನವೇ ಮುಖ್ಯ. ಶುಭಸಂಖ್ಯೆ: 1

ಮಿಥುನ: ಆಪ್ತರ ಬೆಂಬಲ, ಧನಾತ್ಮಕ ಚಿಂತನೆಯಿಂದ ಗೆಲುವು. ಹಿರಿಯರ ಆಶೀರ್ವಾದದಿಂದ ನಿಮ್ಮ ಇಚ್ಛೆ ಈಡೇರಲಿದೆ. ಶುಭಸಂಖ್ಯೆ: 9

ಕಟಕ: ನೀವು ಜಾಣರೇ ಆಗಿದ್ದರೂ ಅವಸರ ಮಾಡದಿರಿ. ತಾಳ್ಮೆಯಿಂದಿದ್ದರೆ ನಿಮ್ಮ ಕೆಲಸ ಬೇಗ ಮುಗಿಯಲಿದೆ. ಶುಭಸಂಖ್ಯೆ: 2

ಸಿಂಹ: ಮುಂದಾಲೋಚನೆ ಇರದೆ ವ್ಯಾಪಾರದಲ್ಲಿ ಹಣ ಹೂಡಿದ್ದರಿಂದ ನಷ್ಟ. ಅದನ್ನು ಸರಿದೂಗಿಸಲು ಸಾಲ ಬೇಡ. ಶುಭಸಂಖ್ಯೆ: 7

ಕನ್ಯಾ: ಆರೋಗ್ಯದ ಬಗ್ಗೆ ಎಚ್ಚರ. ವೈದ್ಯರ ಸಲಹೆ ಪಡೆಯಿರಿ. ಮನೆಯಲ್ಲಿ ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಅನುಸರಿಸಿ. ಶುಭಸಂಖ್ಯೆ: 3

ತುಲಾ: ಹತ್ತಿರದವರೇ ನಿಮ್ಮ ಯೋಜನೆಗಳನ್ನು ಕೆಡಿಸುವ ಸಾಧ್ಯತೆ ಇದೆ. ಹಾಗಾಗಿ ಆದಷ್ಟು ಮಟ್ಟಿಗೆ ಗೌಪ್ಯತೆ ಕಾದುಕೊಳ್ಳಿ. ಶುಭಸಂಖ್ಯೆ: 8

ವೃಶ್ಚಿಕ: ಹಣದ ಮುಗ್ಗಟ್ಟು ಎದುರಾದೀತು. ಆದರೆ ಸಕಾಲದಲ್ಲಿ ಆಪ್ತರ ನೆರವು ಸಿಗುವುದು. ವಿಷ್ಣುಸಹಸ್ರನಾಮ ಪಠಿಸಿ. ಶುಭಸಂಖ್ಯೆ: 6

ಧನಸ್ಸು: ಮಕ್ಕಳಿಂದ ಕಿರಿಕಿರಿ ಆದೀತು. ವಿದ್ಯಾರ್ಥಿಗಳಿಗೆ ಓದಿನಲ್ಲಿ ತುಸು ಹಿನ್ನಡೆ. ಹಿರಿಯರ ಸಲಹೆಗಳನ್ನು ಸ್ವೀಕರಿಸಿ. ಶುಭಸಂಖ್ಯೆ: 4

ಮಕರ: ಸರಳತೆಯಿಂದ ಪರರಿಗೆ ಮಾರ್ಗದರ್ಶಕರಾಗಿ. ಆರ್ಥಿಕ ಚೇತರಿಕೆಗೆ ಒಬ್ಬಂಟಿ ಹೋರಾಟ ಮಾಡಲು ಹೋಗಬೇಡಿ. ಶುಭಸಂಖ್ಯೆ: 1

ಕುಂಭ: ಪ್ರತಿಯೊಬ್ಬರ ವ್ಯಕ್ತಿತ್ವವೂ ಅನನ್ಯ. ಹೀಗಾಗಿ ನಿಮ್ಮ ಬದುಕನ್ನು ಇನ್ನೊಬ್ಬರ ಬಾಳಿನ ಜತೆಗೆ ಹೋಲಿಸಿಕೊಳ್ಳದಿರಿ. ಶುಭಸಂಖ್ಯೆ: 9

ಮೀನ: ನಾಯಕತ್ವದ ಗುಣಗಳನ್ನು ಕಂಡು ಜನ ನಿಮ್ಮ ಸುತ್ತಮುತ್ತ ತಿರುಗುವರು. ಆದರೆ ಆತ್ಮಸ್ಥೈರ್ಯ ಕಳೆದುಕೊಳ್ಳದಿರಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net