ನಿತ್ಯ ಭವಿಷ್ಯ: ಅನಿವಾರ್ಯ ಇಲ್ಲದಿದ್ದಲ್ಲಿ ದ್ವಿಚಕ್ರ ವಾಹನ ಚಾಲನೆ ಬೇಡ. ನಿಮ್ಮನ್ನು ಹೊಗಳುವವರೆಲ್ಲ ಸಜ್ಜನರು ಎಂದುಕೊಳ್ಳದಿರಿ

Nitya-Bhavishya-vvani-1-2-1
Published on

ಮೇಷ: ಸಿಕ್ಕಿದ ಅಲ್ಪಸ್ವಲ್ಪ ಸಮಯದಲ್ಲಿಯೇ ನಿಮ್ಮ ಕೆಲಸಕಾರ್ಯಗಳನ್ನೆಲ್ಲ ಮಾಡಿ ಮುಗಿಸಿಕೊಳ್ಳುವ ಪರಿಸ್ಥಿತಿ ಎದುರಾಗಲಿದೆ. ಅದೃಷ್ಟಸಂಖ್ಯೆ: 9

ವೃಷಭ: ಯಾರಿಗೂ ವಿಷಯವನ್ನು ಅರ್ಥ ಮಾಡಿಸಲು ಹೋಗಿ ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳದಿರಿ. ಅದೃಷ್ಟಸಂಖ್ಯೆ: 5

ಮಿಥುನ: ಸಂಬಂಧಗಳಲ್ಲಿ ಬಿರುಕು ಮೂಡುತ್ತಿದೆ ಎನಿಸಬಹುದು. ಅದನ್ನು ಬೇಗ ಸರಿ ಮಾಡಿಕೊಂಡರೆ ಉತ್ತಮ. ಅದೃಷ್ಟಸಂಖ್ಯೆ: 3

ಕಟಕ: ಭಾವನಾತ್ಮಕ ವಿಚಾರಗಳಿಗೆ ಹೆಚ್ಚು ಸ್ಪಂದಿಸುತ್ತೀರಿ. ಒಂಟಿಯಾಗಿರಬೇಡಿ. ಮಾನಸಿಕ ಒತ್ತಡವಾದೀತು. ಅದೃಷ್ಟಸಂಖ್ಯೆ: 1

ಸಿಂಹ: ಹೊಸದನ್ನು ಕಲಿಯುವ ಅವಕಾಶ ಸಿಗಬಹುದು ಎನಿಸುತ್ತದೆ. ಸಂಜೆಯೊಳಗೆ ಸತ್ಯಾಂಶ ಅರಿವಾಗಲಿದೆ. ಅದೃಷ್ಟಸಂಖ್ಯೆ: 7

ಕನ್ಯಾ: ಕನಸು ಕಾಣುವುದು ತಪ್ಪಲ್ಲ. ಅದನ್ನು ನನಸು ಮಾಡುವ ಯತ್ನ ಮುಖ್ಯ. ಹಿಂದಿನ ಯತ್ನಗಳ ಫಲಿತಾಂಶ ಲಭಿಸಲಿದೆ. ಅದೃಷ್ಟಸಂಖ್ಯೆ: 4

ತುಲಾ: ಪರಿಚಿತರು ಕ್ಷಮಿಸಿ ಎಂದು ಬರಬಹುದು. ಚಿಕ್ಕಪುಟ್ಟ ಕೆಲಸಗಳಿಗೂ ಹೆಚ್ಚಿನ ಓಡಾಟ, ಶ್ರಮಪಡಬೇಕಾಗುತ್ತದೆ. ಅದೃಷ್ಟಸಂಖ್ಯೆ: 2

ವೃಶ್ಚಿಕ: ದೈವೀಕಾರ್ಯಗಳಲ್ಲಿ ಭಾಗವಹಿಸುವಿರಿ. ಸಾಕುಪ್ರಾಣಿಗಳ ಆಹಾರ, ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ. ಅದೃಷ್ಟಸಂಖ್ಯೆ: 9

ಧನಸ್ಸು: ಆರೋಪಗಳು ಎದುರಾಗಬಹುದು. ಹೊಸ ವಿದ್ಯುತ್ ಉಪಕರಣ ಖರೀದಿಸುವ ಇಚ್ಛೆ ಇದ್ದರೂ ಸದ್ಯಕ್ಕೆ ಬೇಡ. ಅದೃಷ್ಟಸಂಖ್ಯೆ: 6

ಮಕರ: ಬಯಸಿದ್ದು ಕೈಗೂಡಬಹುದು. ಆದರೆ ಕೆಟ್ಟ ವಿಚಾರವಾಗಿದ್ದಲ್ಲಿ ಪ್ರಯತ್ನಿಸಬೇಡಿ. ಸನ್ಮಾರ್ಗವನ್ನು ಬಿಡಬೇಡಿ. ಅದೃಷ್ಟಸಂಖ್ಯೆ: 3

ಕುಂಭ: ಆಪ್ತರ ನೆನಪು ಕಾಡುತ್ತದೆ. ಬಹಳ ಖರ್ಚು ಮಾಡುತ್ತೀರಿ. ಬೇಜವಾಬ್ದಾರಿಯಿಂದಾಗಿ ಹಣ ಕಳೆದುಕೊಂಡೀರಿ. ಅದೃಷ್ಟಸಂಖ್ಯೆ: 7

ಮೀನ: ಅನಿವಾರ್ಯ ಇಲ್ಲದಿದ್ದಲ್ಲಿ ದ್ವಿಚಕ್ರ ವಾಹನ ಚಾಲನೆ ಬೇಡ. ನಿಮ್ಮನ್ನು ಹೊಗಳುವವರೆಲ್ಲ ಸಜ್ಜನರು ಎಂದುಕೊಳ್ಳದಿರಿ. ಅದೃಷ್ಟಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net