

ಮೇಷ: ಅನೇಕ ರೀತಿಯ ಜನರನ್ನು ಭೇಟಿಯಾಗುವ ಸಂದರ್ಭದಲ್ಲಿ ಅಪರಿಚಿತರಿಂದ ಮೋಸ ಹೋಗದಿರಿ. ಜಾಗ್ರತೆ. ಶುಭಸಂಖ್ಯೆ: 6
ವೃಷಭ: ನಿಮ್ಮ ಪಾಲಿಗೆ ಅತ್ಯಾಶ್ಚರ್ಯಕರವಾದ ರೀತಿಯಲ್ಲಿ ಲಾಭಗಳಿಗೆ ವಿನೂತನವಾದ ದಾರಿಯೊಂದು ಸಿಗಲಿದೆ. ಶುಭಸಂಖ್ಯೆ: 9
ಮಿಥುನ: ನೀವು ಧೈರ್ಯವನ್ನು ಕಳೆದುಕೊಳ್ಳುವಂತೆ ನಯವಂಚಕರು ಹಲವು ರೀತಿಯ ಮಸಲತ್ತು ನಡೆಸಬಹುದು. ಶುಭಸಂಖ್ಯೆ: 3
ಕಟಕ: ಯಾವುದೇ ಸಮಸ್ಯೆ ಬರಲಿ, ಅದನ್ನು ಬಾಳಸಂಗಾತಿಯ ಜತೆಯಲ್ಲಿ ಚರ್ಚೆ ನಡೆಸುವುದು ಉತ್ತಮ. ಶುಭಸಂಖ್ಯೆ: 7
ಸಿಂಹ: ವಿದೇಶಕ್ಕೆ ಹೋಗಿ ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆಯಲಿರುವ ವಿಚಾರದಲ್ಲಿ ವಿನೂತನವಾದ ಬೆಳಕು ಕಾಣಸಿಗಲಿದೆ. ಶುಭಸಂಖ್ಯೆ: 5
ಕನ್ಯಾ: ಹೊರಗಿನ ಆಹಾರ, ತಿಂಡಿ ತಿನಿಸುಗಳ ಬಗೆಗೆ ಎಚ್ಚರ ಇರಲಿ. ಅದರ ಸೇವನೆ ಕಾಯಿಲೆಗೆ ದಾರಿ ಆಗದಿರಲಿ. ಶುಭಸಂಖ್ಯೆ: 8
ತುಲಾ: ಸರ್ವೇಶ್ವರಿಯಾದ ದೇವಿ ಪಾರ್ವತಿಯ ಅನುಗ್ರಹದಿಂದ ಕೈಗೆತ್ತಿಕೊಂಡ ಕಾರ್ಯಗಳಲ್ಲಿ ಗೆಲುವು ಲಭ್ಯ. ಶುಭಸಂಖ್ಯೆ: 2
ವೃಶ್ಚಿಕ: ನಿಮ್ಮ ಯಾವುದೇ ರೀತಿಯ ದೈಹಿಕ ಸಮಸ್ಯೆಯ ಬಗೆಗೆ ಖಂಡಿತ ಉದಾಸೀನರಾಗಿ ಇರಬೇಡಿ. ಎಚ್ಚರವಿರಲಿ. ಶುಭಸಂಖ್ಯೆ: 6
ಧನಸ್ಸು: ಎದುರಾಳಿಗಳಿಗೆ ಅನಿರೀಕ್ಷಿತವಾದ ರೀತಿಯಲ್ಲಿ ನಿಮ್ಮೊಡನೆ ಸಂಧಾನಕ್ಕೆ ಬರುವ ಸಾಧ್ಯತೆಗಳು ಅಧಿಕವಾಗಿವೆ. ಶುಭಸಂಖ್ಯೆ: 4
ಮಕರ: ಮಹಾವಿಷ್ಣುವನ್ನು ಹಾಗೂ ಲಕ್ಷ್ಮೀಯನ್ನು ಸ್ತುತಿಸಿ. ಧನಲಾಭದ ವಿಚಾರದಲ್ಲಿ ಅನುಗ್ರಹವನ್ನು ಪಡೆಯಿರಿ. ಶುಭಸಂಖ್ಯೆ: 9
ಕುಂಭ: ನಿಮ್ಮ ಸ್ವಭಾವವಾದ ಕರುಣಾಳುತನ ಮತ್ತು ವಿವೇಕಗಳಿಂದಾಗಿ ಜನರಿಂದ ಪ್ರಶಂಸೆ ದೊರೆಯಲಿದೆ. ಶುಭಸಂಖ್ಯೆ: 1
ಮೀನ: ಮನೆಯ ಜೀರ್ಣೋದ್ಧಾರದ ಕುರಿತ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿದೆ. ಶುಭಸಂಖ್ಯೆ: 4