

ಮೇಷ: ಬಹುದಿನಗಳ ನಂತರ ಕೆಲಸದಲ್ಲಿ ಸಮಾಧಾನ ಹೊಂದುವಿರಿ. ಏರುಪೇರಾಗಿದ್ದ ವ್ಯಾಪಾರ ಸರಿಪಡಿಸಿ ಕೊಳ್ಳಲು ಅವಕಾಶ ಸಿಗಲಿದೆ. ಶುಭಸಂಖ್ಯೆ: 9
ವೃಷಭ: ನಕಾರಾತ್ಮಕ ಭಾವನೆಯಿಂದ ಹೊರಬರುವಿರಿ. ಗುರಿ ತಲುಪುವಿರಿ. ಜೀವನೋಪಾಯಕ್ಕೆ ಪರ್ಯಾಯ ಮಾರ್ಗಹುಡುಕಿ. ಶುಭಸಂಖ್ಯೆ:1
ಮಿಥುನ: ಕಾರ್ಯಗಳಲ್ಲಿ ವಿಳಂಬವಾಗುವುದು . ಖರ್ಚಿನ ವಿಚಾರದಲ್ಲಿ ಎಚ್ಚರ ವಹಿಸಿ. ವೈದ್ಯಕೀಯ ಖರ್ಚುಗಳು ಹೆಚ್ಚಲಿದೆ. ಶುಭಸಂಖ್ಯೆ: 5
ಕಟಕ: ಸಜ್ಜನರ ಭೇಟಿಯಿಂದ ಕಾರ್ಯಜಯ. ರೇಷ್ಮೆ ಹಾಗೂ ಕಬ್ಬು ಬೆಳೆಗಳಿಂದ ನಿರೀಕ್ಷೆಗೂ ಮೀರಿದ ಲಾಭ ಬರಲಿದೆ. ಶುಭಸಂಖ್ಯೆ: 7
ಸಿಂಹ: ಧರ್ಮಪತ್ನಿಯ ಸಹಕಾರ ಮುನ್ನಡೆಗೆ ಪೂರಕವಾಗಲಿದೆ. ಹೊಸ ಕೆಲಸಕ್ಕೆ ಶ್ಲಾಘನೆ ಸಿಗಲಿದೆ. ಸಂತಸದ ಸುದ್ದಿ ಕೇಳಿ ಬರುವುದು. ಶುಭಸಂಖ್ಯೆ: 3
ಕನ್ಯಾ: ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿರುವುದಿಲ್ಲ. ಆದ್ದರಿಂದ ವ್ಯವಹಾರ, ಖರ್ಚು ವೆಚ್ಚದಲ್ಲಿ ಮಿತಬಳಕೆಯನ್ನು ಸಾಧಿಸಿ. ಶುಭಸಂಖ್ಯೆ:6
ತುಲಾ: ರಾಜಕೀಯ ವರ್ಗದವರಿಗೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಇಂದು ಸಕಾಲ. ಸ್ನೇಹಿತರ ವಿಶ್ವಾಸ ಮರಳಿ ದೊರೆಯಲಿದೆ. ಶುಭಸಂಖ್ಯೆ: 4
ವೃಶ್ಚಿಕ: ವಾಹನದಲ್ಲಿ ಪ್ರಯಾಣಿಸುವಾಗ ಜಾಗೃತರಾಗಿರಿ. ಅನಾರೋಗ್ಯಕ್ಕೆ ಸ್ವಂತ ನಿರ್ಧಾರದಿಂದ ಔಷಧಿಯನ್ನು ತೆಗೆದುಕೊಳ್ಳಬೇಡಿ. ಶುಭಸಂಖ್ಯೆ: 9
ಧನುಸ್ಸು: ಅತಿಆಲಸ್ಯವು ನಿಮ್ಮ ಕೆಲಸಕ್ಕೆ ಅಡ್ಡಿ. ಜನರ ಅಪಹಾಸ್ಯಕ್ಕೆ ಗುರಿಯಾಗುವಿರಿ. ಉದ್ಯಮಿಗಳಿಗೆ ಹಿರಿಯರಿಂದ ಆಶೀರ್ವಾದ ಪ್ರಾಪ್ತಿ. ಶುಭಸಂಖ್ಯೆ: 3
ಮಕರ: ಬ್ಯಾಂಕ್ ನೌಕರರಿಗೆ ವರ್ಗಾವಣೆ ಪ್ರಯತ್ನದಲ್ಲಿ ಸಫಲತೆ. ಸಂಜೆಯನ್ನು ಪ್ರೀತಿ ಪಾತ್ರರೊಂದಿಗೆ ಕಳೆಯಲು ಬಯಸುವಿರಿ. ಶುಭಸಂಖ್ಯೆ: 2
ಕುಂಭ: ದುರಭ್ಯಾಸದಿಂದ ದೂರ ಉಳಿಯುವ ನಿಮ್ಮ ನಿರ್ಧಾರ ಪ್ರಯೋಜನಕಾರಿ. ನಿರ್ಧಾರ ಬದಲಿಸಬೇಡಿ. ನೂತನ ವಸ್ತು ಖರೀದಿ. ಶುಭಸಂಖ್ಯೆ: 6
ಮೀನ: ನಿಮ್ಮ ಮಕ್ಕಳ ನಡವಳಿಕೆಯಿಂದ ಗೌರವಕ್ಕೆ ಧಕ್ಕೆಯಾದೀತು. ನಾಯಕತ್ವ ಹೊಂದಿರುವ ನಿಮಗೆ ಜನಬಲ ಕಡಿಮೆಯಾಗಲಿದೆ. ಶುಭಸಂಖ್ಯೆ: 7