ಈ ರಾಶಿಯವರು ಸಂಗಾತಿ ಬಳಿ ಮುನಿಸು ತೋರುವುದು ಕ್ಷೇಮಕರವಲ್ಲ: ನಿತ್ಯ ಭವಿಷ್ಯ

Nithya Bhavishya vvani
Published on

ಮೇಷ: ಯಾರೇ ಆಗಿರಲಿ, ಗೌರವಿಸಿ ಆದರ ತೋರುವ ವಿಚಾರವನ್ನು ಬಿಡದಿರಿ. ಈ ದೊಡ್ಡತನದಿಂದ ಯಶಸ್ಸು ಸಾಧ್ಯವಾಗಲಿದೆ. ಶುಭಸಂಖ್ಯೆ: 9

ವೃಷಭ: ಸಂಗಾತಿಯ ಬಳಿ ಮುನಿಸು ತೋರುವುದು ಕ್ಷೇಮಕರವಲ್ಲ. ಆದದ್ದಾಯಿತು ಎಂದು ಹೇಳಿ ಅವರನ್ನು ಸಮಾಧಾನಪಡಿಸಿ. ಶುಭಸಂಖ್ಯೆ: 2

ಮಿಥುನ: ವಿವೇಕದ ಬೆಳಕಿನಿಂದ ಮನಸ್ಸಿನೊಳಗಿನ ಕತ್ತಲೆಯನ್ನು ಕಳೆದುಕೊಳ್ಳುವ ವಿಶೇಷವಾದ ಅವಕಾಶ ಕೂಡಿಬರಲಿದೆ. ಶುಭಸಂಖ್ಯೆ: 5

ಕಟಕ: ಭಕ್ತಿಯಿಂದ ಭಗವಂತನ ಸ್ತುತಿಯನ್ನು ಮಾಡಿ. ನಿಮ್ಮ ವ್ಯವಹಾರದ ಸುತ್ತಮುತ್ತ ಸಂತಸಕ್ಕೆ ಸುಲಭವಾದ ದಾರಿ ಸಿಗಲಿದೆ. ಶುಭಸಂಖ್ಯೆ: 4

ಸಿಂಹ: ಕೀಳರಿಮೆಯ ನೋವು ಅನುಭವಿಸುತ್ತಿದ್ದೀರಿ. ನಿಮ್ಮ ಸಂಕಲ್ಪಕ್ಕೆ ಹೊಸದಾದ ಚೈತನ್ಯವನ್ನು ಒದಗಿಸಿಕೊಳ್ಳಿ. ಸಿದ್ಧಿ ಸಿಗಲಿದೆ. ಶುಭಸಂಖ್ಯೆ: 7

ಕನ್ಯಾ: ಕುಸಿಯುತ್ತಿರುವ ಆದಾಯದಿಂದ ತಲೆನೋವು ಬರಬಹುದು. ನಿಮ್ಮ ಚಾತುರ್ಯದಿಂದಲೇ ಈ ಸಮಸ್ಯೆಯನ್ನು ಎದುರಿಸಿ. ಶುಭಸಂಖ್ಯೆ: 3

ತುಲಾ: ಸಂಗೀತ ಕಲಾವಿದರಿಗೆ, ಕುಶಲಕರ್ವಿುಗಳಿಗೆ ಧನಲಾಭಕ್ಕಾಗಿ ಹಲವಾರು ರೀತಿಯಲ್ಲಿ ಅವಕಾಶಗಳು ಎದುರಾಗಲಿವೆ. ಶುಭಸಂಖ್ಯೆ: 8

ವೃಶ್ಚಿಕ: ನಾನಾ ರೀತಿಯ ಜನರು ನಾನಾ ಥರದ ಅಭಿಪ್ರಾಯಗಳ ಮೂಲಕ ಬಾಧಿಸಲಿದ್ದಾರೆ. ವಿವೇಕದ ದಾರಿಯೇ ಉತ್ತಮ. ಶುಭಸಂಖ್ಯೆ: 1

ಧನುಸ್ಸು: ದೌರ್ಬಲ್ಯಗಳನ್ನು ನಿವಾರಣೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ. ವಿಷ್ಣು ಸಹಸ್ರನಾಮವನ್ನು ಪಠಿಸಿ. ಉತ್ತಮ ಅವಕಾಶ ಲಭ್ಯ. ಶುಭಸಂಖ್ಯೆ: 6

ಮಕರ: ದೂರದ ಊರಿನ ಸ್ನೇಹಿತರು ಅನಿರೀಕ್ಷಿತವಾಗಿ ಆಗಮಿಸಲಿದ್ದಾರೆ. ಅನೇಕ ಹಳೆಯ ಸಮಸ್ಯೆಗಳಿಗೆ ಪರಿಹಾರವನ್ನೂ ನೀಡಲಿದ್ದಾರೆ. ಶುಭಸಂಖ್ಯೆ: 9

ಕುಂಭ: ಪಾಲಕರೇ ನಿಮ್ಮ ಪಾಲಿನ ಬಹು ದೊಡ್ಡ ಆಸ್ತಿ. ಅವರಿಂದ ನಿಮಗೆ ಮುಂದಿನ ದಿನಗಳ ಭವಿಷ್ಯದ ಬಗ್ಗೆ ಸಲಹೆ ಸೂಚನೆ ಸಿಗಲಿವೆ. ಶುಭಸಂಖ್ಯೆ: 2

ಮೀನ: ನಿಮ್ಮದಾದ ದಾರಿಯಲ್ಲಿ ನಿಮ್ಮದೇ ರೀತಿಯಲ್ಲಿನ ಯೋಜನೆಗಳನ್ನು ಚೆನ್ನಾಗಿ ರೂಪಿಸಿಕೊಳ್ಳುವಂಥ ಕಾಲ ಸದ್ಯವೇ ಒದಗಿಬರಲಿದೆ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net