ನಿತ್ಯ ಭವಿಷ್ಯ: ಚಿಂತೆ ಬೇಡ ನಿಮಗೆ ಹಿತ್ತಲ ಗಿಡವೇ ಔಷಧವಾಗಲಿದೆ

Nithya Bhavishya vvani
Published on

ಮೇಷ: ಗೆಳೆಯರ ಮೂಲಕ ನಿಮ್ಮ ಕೆಲಸಗಳು ನೆರವೇರಿಬಿಡುತ್ತವೆ ಎಂದುಕೊಳ್ಳದಿರಿ. ನಿಮಗೆ ನೀವೇ ಎಂಬುದು ನೆನಪಿರಲಿ. ಶುಭಸಂಖ್ಯೆ: 1

ವೃಷಭ: ಸಣ್ಣ ಮಾತುಕತೆಯಲ್ಲಿ ಮುಗಿಯುವ ವಿವಾದವನ್ನು ಕೋರ್ಟ್ ತನಕ ಒಯ್ಯದಿರಿ. ನಿಮಗೇ ಹಾನಿಯಾದೀತು. ಶುಭಸಂಖ್ಯೆ: 9

ಮಿಥುನ:  ಹತ್ತಿರದಲ್ಲಿಯೇ ಇರುವ ವಸ್ತುವಿಗಾಗಿ ಊರಿನ ತುಂಬ ಹುಡುಕಾಡದಿರಿ. ಹಿತ್ತಲ ಗಿಡವೇ ಔಷಧವಾಗಲಿದೆ. ಶುಭಸಂಖ್ಯೆ: 2

ಕಟಕ: ಸಾಮಾಜಿಕ ಜಾಲತಾಣದ ಮೂಲಕ ಯಾರನ್ನೂ ಟೀಕಿಸದಿರಿ. ಅದರಿಂದ ಶತ್ರುಗಳ ಸಂಖ್ಯೆಯೇ ವೃದ್ಧಿಸಬಹುದು. ಶುಭಸಂಖ್ಯೆ: 8

ಸಿಂಹ: ಬಹಳ ಜನರ ಆಪ್ತರಾದ ನೀವು ಸ್ವಲ್ಪವಾದರೂ ನಿಷ್ಠುರತೆ ತೋರದಿದ್ದರೆ ದುರುಪಯೋಗಕ್ಕೆ ಒಳಗಾಗಬೇಕಾದೀತು. ಶುಭಸಂಖ್ಯೆ: 3

ಕನ್ಯಾ: ನಿಮ್ಮ ಧಾರಾಳತನದಿಂದ ನಿಮಗೇ ತೊಂದರೆಗಳು ಉಂಟಾಗಬಹುದು. ಹೀಗಾಗಿ ಅತಿ ಧಾರಾಳತನ ಬೇಡ. ಶುಭಸಂಖ್ಯೆ: 7

ತುಲಾ: ವಿರುದ್ಧ ಲಿಂಗಿಗಳ ಕಾಟವನ್ನು ಎದುರಿಸುವ ಸಂದರ್ಭ ಬರಬಹುದು. ವೃಥಾ ಆರೋಪ ಕೂಡ ಹೊರಬೇಕಾದೀತು. ಶುಭಸಂಖ್ಯೆ: 4

ವೃಶ್ಚಿಕ: ಒಂದೇ ಬಾರಿಗೆ ಹಲವು ಜನರು ನಿಮ್ಮ ವಿರೋಧಿಗಳಾಗಬಹುದು. ಮೌನವಾಗಿದ್ದರೆ ಏನೂ ತೊಂದರೆಯಾಗದು. ಶುಭಸಂಖ್ಯೆ: 6

ಧನುಸ್ಸು: ಸಹೋದ್ಯೋಗಿಗಳು ಹಿತಶತ್ರುಗಳಂತೆ ವರ್ತಿಸಿದರೂ ನಿಮ್ಮ ಮಾತು ಮಾತ್ರ ಸೌಮ್ಯವಾಗಿಯೇ ಇರಲಿ. ಶುಭಸಂಖ್ಯೆ: 5

ಮಕರ:  ಹಳೆಯ ವಸ್ತುಗಳ ವಿಲೇವಾರಿಯ ವೇಳೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಇಲ್ಲವಾದರೆ ಅಲರ್ಜಿ ಉಂಟಾಗಬಹುದು. ಶುಭಸಂಖ್ಯೆ: 1

ಕುಂಭ: ಪರಿಶ್ರಮದಿಂದ ಕೂಡಿದ ನಿಮ್ಮ ಅನೇಕ ಯೋಜನೆಗಳು ನಿಧಾನವಾಗಿಯಾದರೂ ಸಾಫಲ್ಯವನ್ನು ಹೊಂದಲಿವೆ. ಶುಭಸಂಖ್ಯೆ: 9

ಮೀನ: ಮನದ ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಭಕ್ತಿಯಿಂದ ಗುರುರಾಯರನ್ನು ಪ್ರಾರ್ಥಿಸಿ. ನೆಮ್ಮದಿಯನ್ನು ಪಡೆಯುವಿರಿ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net