

ಮೇಷ: ವಿದ್ಯಾರ್ಥಿಗಳಿಗೆ ಅಷ್ಟೇನೂ ಶುಭದಾಯಕ ದಿನವಲ್ಲ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಅಶುಭ ವಾರ್ತೆ ಕೇಳುವಿರಿ. ಶುಭಸಂಖ್ಯೆ: 9
ವೃಷಭ: ಆರೋಗ್ಯದಲ್ಲಿ ಏರುಪೇರು. ವಿದ್ಯಾರ್ಥಿಗಳಿಗೆ ತೊಂದರೆ ಇಲ್ಲ. ರಾಜಕೀಯ ಕ್ಷೇತ್ರದವರಿಗೆ ಶುಭ ಸಮಾಚಾರ. ಸಮಸ್ಯೆ ಪರಿಹಾರ. ಶುಭಸಂಖ್ಯೆ: 3
ಮಿಥುನ: ಉದ್ಯೋಗದಲ್ಲಿ ಅಭಿವೃದ್ಧಿಯಾಗುವುದು. ಪ್ರಯಾಣದಿಂದ ಒಳ್ಳೆಯದಾಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 7
ಕಟಕ: ನಿಧಾನಗತಿಯಲ್ಲಿ ಆರ್ಥಿಕ ಚೇತರಿಕೆ. ಶತ್ರು ಭಯ ಕಾಡಬಹುದು. ಇಷ್ಟದೇವರ ಸ್ಮರಣೆ ಮಾಡಿ. ಕೋರ್ಟು ಕೆಲಸದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 2
ಸಿಂಹ: ಕೆಲಸಗಳಲ್ಲಿ ವಿರೋಧ ಎದುರಿಸಬೇಕಾಗುವುದು. ಮೌನವಾಗಿರುವುದೇ ಉತ್ತಮ. ನಿಮ್ಮ ಪಾಳಿಯೂ ಬರುತ್ತದೆ, ಕಾಯಿರಿ. ಶುಭಸಂಖ್ಯೆ: 6
ಕನ್ಯಾ: ಮಾನಸಿಕ ವೈರಾಗ್ಯ, ವ್ಯವಹಾರದಲ್ಲಿ ಪ್ರಗತಿಯಾಗಲಿದೆ. ಮನೆಯಲ್ಲಿ ಮನಃಶಾಂತಿ ಕದಡುವ ಘಟನೆ ನಡೆದೀತು, ಶಾಂತವಾಗಿರಿ. ಶುಭಸಂಖ್ಯೆ: 4
ತುಲಾ: ವ್ಯಾಸಂಗದಲ್ಲಿ ಆಸಕ್ತಿ ಕಡಿಮೆಯಾದೀತು. ಮೇಲಧಿಕಾರಿಗಳಿಂದ ವಿನಾಕಾರಣ ಒತ್ತಡ, ವಿವಾಹ ವಿಚಾರದಲ್ಲಿ ಅಶುಭ ಫಲವಿದೆ. ಶುಭಸಂಖ್ಯೆ: 7
ವೃಶ್ಚಿಕ: ಜವಳಿ ವ್ಯಾಪಾರದಲ್ಲಿ ನಷ್ಟ. ಬೇರೆ ವ್ಯವಹಾರದಲ್ಲಿ ಲಾಭ ಬರಲಿದೆ. ಮಾರಾಟ ಪ್ರತಿನಿಧಿಗಳಿಗೆ ಸಮಾಧಾನಕರ ಆದಾಯ. ಶುಭಸಂಖ್ಯೆ: 7
ಧನುಸ್ಸು: ಪತ್ರಿಕಾ ಪ್ರತಿನಿಧಿಗಳಿಗೆ ಒಳ್ಳೆಯ ದಿನ. ಪುಸ್ತಕ ಮಾರಾಟಗಾರರಿಗೆ ನಿರೀಕ್ಷಿತ ಆದಾಯ. ತಾಂತ್ರಿಕ ವರ್ಗದವರಿಗೆ ವಿಶೇಷ ದಿನ. ಶುಭಸಂಖ್ಯೆ: 3
ಮಕರ: ಹಣದ ತೊಂದರೆ ಪರಿಹಾರವಾಗಿ ದುಗುಡ ಮರೆಯಾಗುತ್ತದೆ. ಆತ್ಮ ಶಕ್ತಿ ಹೆಚ್ಚಿ ಸವಾಲುಗಳನ್ನು ದಿಟ್ಟವಾಗಿ ಎದುರಿಸುವಿರಿ. ಶುಭ ಸಂಖ್ಯೆ 7
ಕುಂಭ: ಕೆಲಸದಲ್ಲಿ ಅಧಿಕ ಒತ್ತಡ. ಪತ್ನಿ ಆರೋಗ್ಯದಲ್ಲಿ ಏರುಪೇರು, ವೈದ್ಯರ ಮಾರ್ಗದರ್ಶನ ಪಡೆಯಿರಿ. ಮಕ್ಕಳಿಂದ ತೊಂದರೆ. ಶುಭಸಂಖ್ಯೆ: 1
ಮೀನ: ಉಪನ್ಯಾಸಕರಿಗೆ ಉತ್ತಮ ದಿನ. ನಾನಾ ರೀತಿಯ ತೊಂದರೆ. ಕೋಪದಿಂದ ಅವಕಾಶ ಕೈತಪ್ಪುವ ಸಾಧ್ಯತೆಯಿದೆ ಜಾಗ್ರತೆ. ಶುಭಸಂಖ್ಯೆ: 9