

ಮೇಷ: ಗ್ರಂಥಿಗೆ ಅಂಗಡಿಗಳವರು, ಗೊಬ್ಬರ
ಮಾರಾಟಗಾರರು, ಕಬ್ಬಿಣದ ವಸ್ತು ವ್ಯಾಪಾರಿಗಳಿಗೆ
ಜಾಗ್ರತೆ ಅಗತ್ಯವಾಗಿದೆ. ಶುಭಸಂಖ್ಯೆ: 5
ವೃಷಭ: ಹಿತಶತ್ರುಗಳು ನಿಮ್ಮನ್ನು ದುರಾಸೆಯತ್ತ
ಸೆಳೆಯಲು ಪ್ರಯತ್ನಿಸಬಹುದು. ಭವಾನಿಯನ್ನು
ಸ್ತುತಿಸಿ. ರಕ್ಷೆ ಲಭ್ಯ. ಶುಭಸಂಖ್ಯೆ: 7
ಮಿಥುನ: ನೆಂಟರಿಷ್ಟರ ಸಲಹೆ ಸೂಚನೆಗಳನ್ನೂ
ಕೇಳಿಸಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ಪಾಡಿಗೆ
ಸುಮ್ಮನಿರುವುದಕ್ಕೆ ಬಿಡಲಾರರು. ಶುಭಸಂಖ್ಯೆ: 1
ಕಟಕ: ವ್ಯಾಪಾರದ ವಿಚಾರದಲ್ಲಿ ಅಜಾಗ್ರತೆ
ಉಂಟಾದೀತು. ಅನುಭವಗಳ ಹಿನ್ನೆಲೆಯಲ್ಲಿ
ದೃಢ ನಿರ್ಧಾರ ತಳೆಯಿರಿ. ಶುಭಸಂಖ್ಯೆ: 8
ಸಿಂಹ: ಕಷ್ಟಸಹಿಷ್ಣುಗಳು ನೀವು ಯಾರನ್ನೂ
ಕೂಡ ಹೆಗಲಿಗೆ ಏರಿಸಿಕೊಳ್ಳದಿರಿ. ಇದರಿಂದಾಗಿ
ತೊಂದರೆಯೇ ಆಗಲಿದೆ. ಶುಭಸಂಖ್ಯೆ: 2
ಕನ್ಯಾ: ಹೋಟೆಲ್ ಉದ್ಯಮಿಗಳಿಗೆ ಅಸಂತೋಷದ
ಸಂದರ್ಭ ಬರಬಹುದು. ನಷ್ಟ ನಿವಾರಣೆಗೆ
ಲಕ್ಷ್ಮಿಯನ್ನು ಸ್ತುತಿಸಿ. ಶುಭಸಂಖ್ಯೆ: 9
ತುಲಾ: ದೂರದ ಬೆಟ್ಟದ ಬಗ್ಗೆ ತಿಳಿದಿದ್ದರೂ
ಮತ್ತೆ ಮೋಸಹೋಗುವ ಸಾಹಸ ಬೇಡ.
ಒಳಿತಿಗೆ ದಾರಿ ದೊರೆಯಲಿದೆ. ಶುಭಸಂಖ್ಯೆ: 3
ವೃಶ್ಚಿಕ: ಕೆಲವರು ಜನರು ನಿಮ್ಮ ವೈಯಕ್ತಿಕ
ವಿಚಾರಗಳಲ್ಲಿ ಮೂಗು ತೂರಿಸಬಹುದು.
ಅಂಥವರನ್ನು ದೂರಕ್ಕೆ ಸರಿಸಿ. ಶುಭಸಂಖ್ಯೆ: 5
ಧನುಸ್ಸು: ವಿವಾದಗಳಲ್ಲಿ ಗೆಲ್ಲಲು ಸುಸಂದರ್ಭ ಇದು.
ಗೌರಿದೇವಿಯನ್ನು ಭಕ್ತಿಯಿಂದ ಸ್ತುತಿಸಿ.
ನಿಮಗೆ ನ್ಯಾಯ ಸಿಗಲಿದೆ. ಶುಭಸಂಖ್ಯೆ: 4
ಮಕರ: ಕೌಟುಂಬಿಕ ಭಿನ್ನಾಭಿಪ್ರಾಯದಿಂದ
ಮನಸ್ಸಿಗೆ ನೋವಾದೀತು. ತಾಳ್ಮೆಯೇ
ನಿಮ್ಮನ್ನು ಕಾಪಾಡುವ ಅಸ್ತ್ರವಾಗಲಿದೆ. ಶುಭಸಂಖ್ಯೆ: 6
ಕುಂಭ: ಪರಿಪಕ್ವ ಮನೋಬಲವೇ ಸಂಜೀವಿನಿಯಾಗಿ
ಒದಗಿ ವಿಜಯವನ್ನು ದೊರಕಿಸುತ್ತದೆ.
ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ: 8
ಮೀನ: ಅನಿರೀಕ್ಷಿತ ಪ್ರವಾಸ ಮಾಡಬೇಕಾದೀತು.
ಹೊಸ ಹೊಸ ವಿಷಯಗಳನ್ನು ಅರಿಯುವ
ಅವಕಾಶ ಕೂಡ ಸಿಗಲಿದೆ. ಶುಭಸಂಖ್ಯೆ: 1