

ಮೇಷ: ಅನವಶ್ಯಕವಾಗಿ ಉದ್ವೇಗಕ್ಕೆ ಒಳಗಾಗಬೇಡಿ. ಹಳೆಯ ಸ್ನೇಹಿತನ ಭೇಟಿ. ದಿನಾಂತ್ಯದಲ್ಲಿ ಆಶ್ಚರ್ಯಕರ ಸುದ್ದಿ. ಶುಭಸಂಖ್ಯೆ: 9
ವೃಷಭ: ಕಷ್ಟಪಟ್ಟರೆ ಸುಖ ಇದೆ ಎಂದು ತಿಳಿದು ಕೊಳ್ಳುವುದು ಒಳ್ಳೆಯದು. ಅನಗತ್ಯ ವಿಷಯಗಳ ಬಗ್ಗೆ ತಲೆ ಹಾಕಬೇಡಿ. ಶುಭಸಂಖ್ಯೆ: 2
ಮಿಥುನ: ಅಷ್ಟಮದ ಶನಿಯಿಂದ ಅನಿರೀಕ್ಷಿತ ಆರೋಗ್ಯ ಸಮಸ್ಯೆ ಕಾಡಬಹುದು. ಎಚ್ಚರ ಅಗತ್ಯ. ಸರ್ಕಾರಿ ಕೆಲಸಗಳಲ್ಲಿ ಯಶ. ಶುಭಸಂಖ್ಯೆ: 3
ಕಟಕ: ಉದ್ಯೋಗ, ವ್ಯಾಪಾರದಲ್ಲಿ ನಿರಾಸೆ. ಧನವ್ಯಯ. ತಾಳ್ಮೆಯಿಂದ ವರ್ತಿಸಿ. ಕುಟುಂಬದಲ್ಲಿ ಮಹತ್ವದ ತೀರ್ವನ. ಶುಭಸಂಖ್ಯೆ: 5
ಸಿಂಹ: ಸಹೋದರರೊಂದಿಗೆ ಆಸ್ತಿ ವಿಚಾರದಲ್ಲಿ ವೈಮನಸ್ಯ. ತಾಯಿಯ ಸಲಹೆ ಪಾಲಿಸಿ. ಅವ್ಯಕ್ತ ಭಯದ ವಾತಾವರಣ. ಶುಭಸಂಖ್ಯೆ: 3
ಕನ್ಯಾ: ನಿಮ್ಮ ಹಠಮಾರಿತನ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಖಾಸಗಿ ಉದ್ಯೋಗಿಗಳಿಗೆ ವಿಶೇಷ ಧನಲಾಭ ಸಿಗಲಿದೆ. ಶುಭಸಂಖ್ಯೆ: 6
ತುಲಾ: ನಿಮ್ಮ ಪ್ರತಿಭೆಗೆ ತಕ್ಕಂತೆ ಪುರಸ್ಕಾರ ಸಿಗುತ್ತದೆ. ಸಾಹಿತಿಗಳಿಗೆ ವಿಶೇಷ ದಿನ. ನಂಬಿದವರೇ ಬೆನ್ನ ಹಿಂದೆ ವಂಚಿಸಬಹುದು. ಶುಭಸಂಖ್ಯೆ: 2
ವೃಶ್ಚಿಕ: ಕೇಂದ್ರದ ಗುರು ವಿಶೇಷ ಧನಲಾಭವನ್ನೂ ತರಲಿದ್ದಾನೆ. ಪಿತ್ರಾರ್ಜಿತ ಆಸ್ತಿ ವಿಷಯದಲ್ಲಿ ತಕರಾರು ತಲೆದೋರುವ ಸಾಧ್ಯತೆ. ಶುಭಸಂಖ್ಯೆ: 7
ಧನುಸ್ಸು: ಆಸ್ತಿ ವಿಚಾರದಲ್ಲಿ ಗೊಂದಲ.ಬಂಧುವರ್ಗದಿಂದ ವಿಶೇಷ ಮನ್ನಣೆ. ಮನೆಯಲ್ಲಿ ಶುಭಕಾರ್ಯಕ್ಕೆ ಚಾಲನೆ ಸಿಗಲಿದೆ. ಶುಭಸಂಖ್ಯೆ: 4
ಮಕರ: ನಿಮ್ಮ ಕೆಲವೊಂದು ನಿರ್ಧಾರಗಳನ್ನು ಕುಟುಂಬದವರು ವಿರೋಧಿಸುವ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸದ ಚಿಂತೆ. ಶುಭಸಂಖ್ಯೆ: 5
ಕುಂಭ: ಚಿತ್ತಚಾಂಚಲ್ಯವನ್ನು ನಿಯಂತ್ರಿಸಿಕೊಳ್ಳಿ. ಗೃಹ ನಿರ್ವಣದ ಬಗ್ಗೆ ಅಂತಿಮ ತೀರ್ಮಾನ. ಅನಾರೋಗ್ಯದ ಸಾಧ್ಯತೆ. ಶುಭಸಂಖ್ಯೆ: 7
ಮೀನ: ಕೆಲಸ ಕಳೆದುಕೊಳ್ಳುವ ಭೀತಿ ಕಾಡುವುದು. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ಪ್ರತಿಭಾನ್ವಿತರಿಗೆ ಅವಕಾಶ. ಶುಭಸಂಖ್ಯೆ: 1