

ಮೇಷ: ಪ್ರೀತಿಯಲ್ಲಿ ಮೋಸ ಸಾಧ್ಯತೆ. ನಿರೀಕ್ಷಿತ ಉದ್ಯೋಗ ಪ್ರಾಪ್ತಿ. ಮಗಳ ವಿವಾಹದ ಪ್ರಯತ್ನ ಸಫಲ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 8
ವೃಷಭ: ಆಸ್ತಿಗೆ ಸಂಬಂಧಿಸಿ ನ್ಯಾಯಾಲಯದ ವ್ಯವಹಾರಗಳಲ್ಲಿ ನಿಮ್ಮ ಪರವಾಗಿ ತೀರ್ಪ. ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 4
ಮಿಥುನ: ತಾಯಿಯ ಆರೋಗ್ಯದಲ್ಲಿ ನಿಗಾವಹಿಸಿ. ಪತ್ರಕರ್ತರಿಗೆ, ಸಾಹಿತಿಗಳಿಗೆ ಧನ ನಷ್ಟವಾದೀತು. ನಟರಿಗೆ ವಿಶೇಷ ಅವಕಾಶ ಲಭ್ಯ. ಶುಭಸಂಖ್ಯೆ: 9
ಕಟಕ: ಹಿತಶತ್ರುಗಳಿಂದ ಒಳಸಂಚಿನಿಂದಾಗಿ ಬಂಧು ಗಳೊಂದಿಗೆ ಕಲಹ. ಧಾರ್ವಿುಕ ವ್ಯಕ್ತಿಗಳ ಭೇಟಿ. ಸಂತಾನ ಅಪೇಕ್ಷಿಗಳಿಗೆ ಶುಭ ಸುದ್ದಿ. ಶುಭಸಂಖ್ಯೆ: 4
ಸಿಂಹ: ದೀರ್ಘ ಪ್ರಯಾಣ ಸಂಭವ. ಚಿನ್ನ- ಬೆಳ್ಳಿ ಆಭರಣ ವ್ಯಾಪಾರದಲ್ಲಿ ಲಾಭ. ಲೆಕ್ಕಪರಿಶೋಧಕರು, ವೈದ್ಯರ ಜೀವನದಲ್ಲಿ ಪ್ರಗತಿ. ಶುಭಸಂಖ್ಯೆ: 2
ಕನ್ಯಾ: ಹೃದಯ ಸಂಬಂಧಿತ ರೋಗ ಉಲ್ಬಣ. ಗುರು ಹಿರಿಯರ ಸಲಹೆ ಪಡೆದು ಪ್ರಮುಖ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಿ. ಶುಭಸಂಖ್ಯೆ: 3
ತುಲಾ: ಹಣಕಾಸಿನ ವಿಚಾರದಲ್ಲಿ ಸ್ನೇಹಿತರೊಂದಿಗೆ ಕಲಹ. ವಿಶೇಷ ಜವಾಬ್ದಾರಿ ನಿರ್ವಹಿಸಿದ ಸಮಾಧಾನ. ವಿದ್ಯಾರ್ಥಿಗಳಿಗೆ ವಿಶೇಷ ದಿನ. ಶುಭಸಂಖ್ಯೆ: 5
ವೃಶ್ಚಿಕ: ಮಹಿಳಾ ಉದ್ಯೋಗಿಗಳೊಂದಿಗೆ ಕಲಹ. ದುಶ್ಚಟಗಳಿಗೆ ಹಣ ವ್ಯಯವಾಗಬಹುದು. ವೈವಾಹಿಕ ಸಮಸ್ಯೆಗಳಿಂದ ಹೈರಾಣ. ಶುಭಸಂಖ್ಯೆ:8
ಧನುಸ್ಸು: ವೈದ್ಯಕೀಯ ರಂಗದಲ್ಲಿ ಕೆಲಸ ಮಾಡುವವರಿಗೆ ಅಧಿಕ ಲಾಭ. ಋಣಮುಕ್ತರಾಗುವ ಅವಕಾಶ. ವ್ಯವಸಾಯಗಾರರಿಗೆ ಧನ ನಷ್ಟ. ಶುಭಸಂಖ್ಯೆ: 2
ಮಕರ: ಖಾಸಗಿ ಉದ್ಯೋಗಿಗಳಿಗೆ ಕೆಲಸದ ಒತ್ತಡ. ಬ್ಯಾಂಕ್ ನೌಕರರಿಗೆ ಗ್ರಾಹಕರಿಂದ ಕಿರಿಕಿರಿ. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ. ಶುಭಸಂಖ್ಯೆ: 9
ಕುಂಭ: ದೈವಿಕ ಚಿಂತನೆಯಲ್ಲಿ ಸಮಾಧಾನ. ಅಪರಿಚಿತರಿಂದ ಮೋಸ ಹೋಗುವಿರಿ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಆರ್ಥಿಕ ಮುಗ್ಗಟ್ಟು. ಶುಭಸಂಖ್ಯೆ: 5
ಮೀನ: ಬಂಧುಗಳಲ್ಲಿ ಗೌರವ. ಅನಿರೀಕ್ಷಿತ ಅತಿಥಿಗಳ ಆಗಮನ. ಆಸ್ತಿಗಾಗಿ ಸಹೋದರರೊಂದಿಗೆ ಮನಸ್ತಾಪ. ಕೃಷಿಕರಿಗೆ ಅಧಿಕ ಲಾಭ. ಶುಭಸಂಖ್ಯೆ: 3