

ಮೇಷ: ದೂರದ ಊರಿನ ಪ್ರವಾಸದ ಸಂದರ್ಭವು ಅಂದುಕೊಂಡಷ್ಟು ಸರಳವಾಗಿರದು. ಚಾತುರ್ಯದಿಂದಿದ್ದರೆ ಕ್ಷೇಮ. ಶುಭಸಂಖ್ಯೆ: 2
ವೃಷಭ: ದೂರದ ಸಂಬಂಧಿಯೊಬ್ಬರು ಕಠೋರವಾದ ಮಾತುಗಳಿಂದ ಆಕ್ಷೇಪಣೆಗಳನ್ನು ಮಾಡಬಹುದು. ಸಹನೆ ಇರಲಿ. ಶುಭಸಂಖ್ಯೆ: 1
ಮಿಥುನ: ಗಟ್ಟಿ ತಳಪಾಯವಿಲ್ಲದ ಕಾರ್ಯಯೋಜನೆಗಳನ್ನು ಬಿಟ್ಟರೆ ಮಾತ್ರವೇ ನಿಮಗೆ ಕ್ಷೇಮವಿರಲಿದೆ. ಬಂಡವಾಳವೂ ಉಳಿಯಲಿದೆ. ಶುಭಸಂಖ್ಯೆ: 8
ಕಟಕ: ಮಾತಿನ ಮಂಟಪವನ್ನು ಮಾತ್ರ ಕಟ್ಟುತ್ತ ಹೋದರೆ ಕೆಲಸದ ವಿಚಾರವೊಂದು ಕೈತಪ್ಪಬಹುದು. ಎಚ್ಚರದಿಂದಿರಿ. ಶುಭಸಂಖ್ಯೆ: 9
ಸಿಂಹ: ಅಚಾತುರ್ಯವಾಗುವುದು ಬೇಡ ಎಂದು ಅಂದುಕೊಂಡಷ್ಟೂ ಹಿತಶತ್ರುಗಳಿಂದ ತೊಂದರೆ ಇದೆ. ಜಾಣ್ಮೆ ಅಗತ್ಯ. ಶುಭಸಂಖ್ಯೆ: 3
ಕನ್ಯಾ: ಅಪರಿಚಿತ ವ್ಯಕ್ತಿಯೊಬ್ಬರು ನಿಮ್ಮ ಸಂಕಟಗಳಿಗೆ ಸ್ಪಂದಿಸುವ ಮೂಲಕ ವಿಶ್ವಾಸವು ವರ್ಧಿಸುವ ಸಾಧ್ಯತೆ ಅಧಿಕ. ಶುಭಸಂಖ್ಯೆ: 4
ತುಲಾ: ಆಕಸ್ಮಿಕವಾದ ಬೆಳವಣಿಗೆಯಿಂದ ವಿವಿಧ ರೀತಿಯ ಕಷ್ಟಕರ ಸಂದರ್ಭಗಳಿಗೆ ವಿಮುಕ್ತಿ ಸಿಗುವುದಕ್ಕೆ ಸಾಧ್ಯವಿದೆ. ಶುಭಸಂಖ್ಯೆ: 6
ವೃಶ್ಚಿಕ: ದೂರದ ಪ್ರಯಾಣ ಅನಿವಾರ್ಯವೇ ಆದರೆ ಮಹಾಗಣಪತಿಗೆ ಶ್ರದ್ಧಾಭಕ್ತಿಗಳಿಂದ ನಮಿಸಿಯೇ ಪ್ರಯಾಣಿಸಿ. ಶುಭಸಂಖ್ಯೆ: 5
ಧನುಸ್ಸು: ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಏನೂ ತೊಂದರೆಯಾಗದೆಂಬ ನಿರ್ಲಕ್ಷ್ಯದ ಧೋರಣೆ ಬೇಡ. ಶುಭಸಂಖ್ಯೆ: 7
ಮಕರ: ಸಹೋದರರ ಜತೆಗೆ ಸೌಹಾರ್ದತೆಯ ಸಂಬಂಧಗಳೇ ಇರಲಿ. ಆದರೆ ಯಾಚನೆಯ ಮನೋಭಾವನೆ ಬೇಡ. ಶುಭಸಂಖ್ಯೆ: 2
ಕುಂಭ: ಮೊದಲು ನಿಮ್ಮನ್ನು ನೀವು ಗೆಲ್ಲಲು ಯತ್ನಿಸಿ. ಆನಂತರ ಇತರರನ್ನೂ ಜಯಿಸುವ ದಾರಿ ಗೋಚರವಾಗಲಿದೆ. ಶುಭಸಂಖ್ಯೆ: 8
ಮೀನ: ಸಕಾರಾತ್ಮಕ ಚಿಂತನೆಯ ಶಕ್ತಿ ಅಪಾರ. ಅಗೋಚರ ಶಕ್ತಿಯ ಮೇಲೆ ನಂಬಿಕೆ ಇಟ್ಟು ಪ್ರಾರ್ಥಿಸಿದರೆ ಸಿದ್ಧಿ ಇದೆ. ಶುಭಸಂಖ್ಯೆ: 1