ಈ ರಾಶಿಯವರಿಂದು ತುಸು ವಿಶ್ರಾಂತಿ ಪಡೆದರೆ ಉತ್ತಮ, ಇಲ್ಲದಿದ್ರೆ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ

Nitya-Bhavishya-vvani-1-2-1
Published on

ಮೇಷ: ವೃತ್ತಿಯಲ್ಲಿ ಪರೀಕ್ಷೆ ಎದುರಾಗಬಹುದು. ಪ್ರಾಮಾಣಿಕತೆಯೇ ನಿಮ್ಮನ್ನು ಕಾಪಾಡುವ ಅಸ್ತ್ರವಾಗಿದೆ. ಹೆದರದಿರಿ. ಶುಭಸಂಖ್ಯೆ: 6

ವೃಷಭ: ದೂರದ ಬಂಧುಗಳು ಕಿರಿಕಿರಿ ಮಾಡಬಹುದು. ಸ್ವಲ್ಪ ಕಾಲ ನೋಡಿ ಬಳಿಕ ಜಾಣತನದಿಂದ ಅವರನ್ನು ದೂರ ಕಳಿಸಿಬಿಡಿ. ಶುಭಸಂಖ್ಯೆ: 3

ಮಿಥುನ:  ಸತ್ಯ-ಅಸತ್ಯಗಳಲ್ಲಿ ಯಾವುದು ಬೇಕೋ ಅದನ್ನು ಆರಿಸಿಕೊಳ್ಳಿ. ಆದರೆ ಸತ್ಯವೇ ಗೆಲುವು ಸಾಧಿಸುತ್ತದೆ ಎಂದು ನೆನಪಿರಲಿ. ಶುಭಸಂಖ್ಯೆ: 1

ಕಟಕ: ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡುವ ರೂಢಿ ಬೆಳೆಸಿಕೊಳ್ಳಲೇಬೇಕು. ಇಲ್ಲದಿದ್ದರೆ ತೊಂದರೆ ಉಂಟಾದೀತು. ಶುಭಸಂಖ್ಯೆ: 8

ಸಿಂಹ:  ಮಕ್ಕಳು ಹಠಮಾರಿತನ ತೋರಬಹುದು. ಆದರೆ ನೀವು ಹಿರಿತನದ ಪ್ರಜ್ಞೆಯಿಂದಲೇ ವರ್ತಿಸಿದರೆ ಉಪಯುಕ್ತ. ಶುಭಸಂಖ್ಯೆ: 4

ಕನ್ಯಾ: ಹಗಲುಗನಸುಗಳ ಹಿಂದೆ ಬೀಳಬೇಡಿ. ವಾಸ್ತವವನ್ನು ಒಪ್ಪಿಕೊಳ್ಳಿ. ಪರಿಶ್ರಮದ ಮೂಲಕ ಲಾಭ ಉಂಟಾಗಲಿದೆ. ಶುಭಸಂಖ್ಯೆ: 2

ತುಲಾ: ತಂದೆ-ತಾಯಿಯ ಹೃತ್ಪೂರ್ವಕವಾದ ಬೆಂಬಲದಿಂದ ಬದುಕಿನ ಹೊಸ ದಾರಿಯನ್ನು ಬೇಗನೆ ಕಂಡುಕೊಳ್ಳಲಿದ್ದೀರಿ. ಶುಭಸಂಖ್ಯೆ: 7

ವೃಶ್ಚಿಕ:  ಮೇಲಧಿಕಾರಿಗಳು ನಿಮ್ಮ ಮೇಲೆ ಸಿಟ್ಟು ಮಾಡಿಕೊಳ್ಳಬಹುದು. ಒರಟು ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದರೆ ಕ್ಷೇಮ. ಶುಭಸಂಖ್ಯೆ: 4

ಧನುಸ್ಸು:  ಆಪ್ತರು ಎನಿಸಿದವರೇ ಗಲಾಟೆ ಮಾಡುತ್ತಾರೆ. ಹಸನ್ಮುಖಿಯಾಗಿಯೇ ಪ್ರಸ್ತುತ ಬಿಕ್ಕಟ್ಟನ್ನು ಎದುರಿಸಿದರೆ ನೆಮ್ಮದಿಯಿದೆ. ಶುಭಸಂಖ್ಯೆ: 9

ಮಕರ: ಮೂಗಿನ ತುದಿಯಲ್ಲಿರುವ ಕೋಪದಿಂದ ತೊಂದರೆ ಅನುಭವಿಸಿದ್ದೀರಿ. ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಶುಭಸಂಖ್ಯೆ: 2

ಕುಂಭ: ಮಹಾಲಕ್ಷ್ಮಿಯನ್ನು ಸ್ತುತಿಸಿ. ಬರಬೇಕಾದ ಹಣ ಬೇಗ ಮರಳಿ ಬಂದು ಧನಲಾಭ ಉಂಟಾಗಲು ಸಾಧ್ಯವಿದೆ. ಶುಭಸಂಖ್ಯೆ: 7

ಮೀನ: ಸತತವಾದ ಶ್ರಮದಾಯಕ ಕೆಲಸದಿಂದ ಆರೋಗ್ಯದಲ್ಲಿ ವ್ಯತ್ಯಯವಾದೀತು. ತುಸು ವಿಶ್ರಾಂತಿ ಪಡೆದರೆ ಉತ್ತಮ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net