

ಮೇಷ: ಸಹೋದರಿಯೊಂದಿಗೆ ಕಲಹ ಆಗಬಹುದು. ಆತುರದಲ್ಲಿ ಮಾತ್ರ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಅದೃಷ್ಟಸಂಖ್ಯೆ: 2
ವೃಷಭ: ಬೇಕು ಎಂದಿದ್ದು ಬೇಕೇ ಬೇಕು ಎಂದು ಹಠಕ್ಕೆ ಕೂರುತ್ತೀರಿ. ಸಂಗಾತಿಯ ಜೊತೆ ಸಮಯ ಕಳೆಯುತ್ತೀರಿ. ಅದೃಷ್ಟಸಂಖ್ಯೆ: 1
ಮಿಥುನ: ಅಧಿಕಾರ, ಹಣ ಎರಡನ್ನೂ ಸುಲಭವಾಗಿ ಸಂಪಾದಿಸುತ್ತೀರಿ. ಅದರೆ ಸಹೋದರನ ಸಹಕಾರ ದೊರೆಯದು. ಅದೃಷ್ಟಸಂಖ್ಯೆ: 4
ಕಟಕ: ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ ಬರುವ ಸಾಧ್ಯತೆಯಿದೆ. ಪ್ರಯಾಣ ಮಾಡುವುದಾದಲ್ಲಿ ಸ್ವಲ್ಪ ಎಚ್ಚರ ಇರಲಿ. ಅದೃಷ್ಟಸಂಖ್ಯೆ: 5
ಸಿಂಹ: ಕುಟುಂಬದಲ್ಲಿ ಮನಸ್ತಾಪ ಉಂಟಾಗಬಹುದು. ಆರ್ಥಿಕವಾಗಿ ನಷ್ಟ. ಷೇರುಗಳಲ್ಲಿ ಹೂಡಿಕೆ ಮಾಡಲು ತಕ್ಕ ದಿನವಲ್ಲ. ಅದೃಷ್ಟಸಂಖ್ಯೆ: 1
ಕನ್ಯಾ: ನಿಮ್ಮ ಕೆಲಸ ಲಾಭದಾಯಕವಾಗಿ ನೆರವೇರಲಿವೆ. ಈ ಬೆಳವಣಿಗೆಯಿಂದ ನೀವು ಆಲಸಿಯಾಗಬಾರದು. ಅದೃಷ್ಟಸಂಖ್ಯೆ: 9
ತುಲಾ: ನೀವು ಪಟ್ಟ ಕಷ್ಟದ ಪ್ರತಿಫಲ ನಿಮ್ಮನ್ನು ಹುಡುಕಿಕೊಂಡು ಬರುವ ಸಾಧ್ಯತೆ ಬಹಳ ಕಡಿಮೆ. ತಾಳ್ಮೆ ಇರಲಿ. ಅದೃಷ್ಟಸಂಖ್ಯೆ: 7
ವೃಶ್ಚಿಕ: ಹಠಕ್ಕೆ ಮಣೆ ಹಾಕುವ ದಿನ. ಮೂಲೆಗುಂಪು ಮಾಡಿದ್ದಕ್ಕೆ ನೀವು ಪ್ರತಿಭಟಿಸಿದ ವಿಧಾನನವು ಪರಿಣಾಮವನ್ನು ಬೀರಲಿದೆ. ಅದೃಷ್ಟಸಂಖ್ಯೆ: 3
ಧನಸ್ಸು: ನಿಮ್ಮ ಮುಂದೆ ನಾಟಕ ಮಾಡುವ ವಿರೋಧಿಗಳು ಸಿಕ್ಕಿಬೀಳುತ್ತಾರೆ. ನಿಮ್ಮ ಮಾತಿನ ಶೈಲಿ ಬದಲಾಗಲಿದೆ. ಅದೃಷ್ಟಸಂಖ್ಯೆ: 4
ಮಕರ: ನಿಮ್ಮ ಅಭಿಪ್ರಾಯಕ್ಕೆ ವಿರುದ್ಧವೆನಿಸಿದ ವಾದವೊಂದನ್ನು ಹೇರಲಾಗುತ್ತದೆ. ಕಾಣದ ಕೈಗಳ ನಡೆ ನಗು ತರಿಸುತ್ತದೆ. ಅದೃಷ್ಟಸಂಖ್ಯೆ: 6
ಕುಂಭ: ಮಾಡುತ್ತಿರುವ ಕೆಲಸಗಳು ನಿಮಗೇ ತಿರುಗುಬಾಣವಾದಾವು. ನಿಮ್ಮ ಸಹಾಯಕ್ಕೆ ಯಾರೂ ಬರಲಾರರು. ಅದೃಷ್ಟಸಂಖ್ಯೆ: 5
ಮೀನ: ತಿಳಿಯದ್ದನ್ನು ಗೊತ್ತಿಲ್ಲ ಎಂದರೆ ತಪ್ಪಿಲ್ಲ. ಅರ್ಥವಾಗದ ಬೆಳವಣಿಗೆಯ ಬಗ್ಗೆ ಕೇಳಿ ತಿಳಿದರೆ ನಷ್ಟವಿಲ್ಲ. ಅದೃಷ್ಟಸಂಖ್ಯೆ: 4