

ಮೇಷ: ಕಾರ್ಯಕ್ಷೇತ್ರದಲ್ಲಿ ಯಶಸ್ಸು ಗೋಚರಿಸಲಿದೆ. ಸಹೋದ್ಯೋಗಿಗಳೊಂದಿಗೆ ಬಾಂಧವ್ಯ ವೃದ್ಧಿ. ಹಿರಿಯರ ಹಾರೈಕೆ. ಶುಭಸಂಖ್ಯೆ: 5
ವೃಷಭ: ಸಾಂಸಾರಿಕ ಗೊಂದಲಗಳನ್ನು ತಾಳ್ಮೆಯಿಂದ ಬಗೆಹರಿಸಿ. ಧನಾತ್ಮಕ ಚಿಂತನೆಯನ್ನು ಮಾಡಿ. ಹಳೆಯ ಸ್ನೇಹಿತನಬೇಟಿ. ಶುಭಸಂಖ್ಯೆ: 9
ಮಿಥುನ: ಹಣಕಾಸಿನ ಪರಿಸ್ಥಿತಿ ಬಿಗಡಾಯಿಸಲಿದೆ. ವೃತ್ತಿರಂಗದಲ್ಲಿ ಸಹವರ್ತಿಗಳಿಂದ ತೊಂದರೆ. ಬಂಧುಗಳೊಂದಿಗೆ ಭೋಜನ. ಶುಭಸಂಖ್ಯೆ: 1
ಕಟಕ: ನಿರುದ್ಯೋಗಿಗಳಿಗೆ ಆಕಸ್ಮಿಕವಾಗಿ ಉದ್ಯೋಗ ಪ್ರಾಪ್ತಿ. ವ್ಯಾಪಾರಸ್ಥರಿಗೆ ಅಧಿಕ ಲಾಭ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಇರಲಿ. ಶುಭಸಂಖ್ಯೆ: 4
ಸಿಂಹ: ಅನವಶ್ಯಕ ತಿರುಗಾಟ ಮಾಡಬೇಕಾದೀತು. ಸ್ವಂತ ಗ್ರಾಮಕ್ಕೆ ಭೇಟಿ. ಕೃಷಿಕರಿಗೆ ವಿಶೇಷ ಲಾಭ. ಭೂ ವಿವಾದ ಅಂತ್ಯ ಕಾಣಲಿದೆ. ಶುಭಸಂಖ್ಯೆ: 4
ಕನ್ಯಾ: ಅನಿರೀಕ್ಷಿತವಾಗಿ ಧನಲಾಭ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ನಿಮ್ಮ ಗುಣಗಾನ. ಸಹೋದ್ಯೋಗಿಗಳಿಂದ ಕಿರಿಕಿರಿ. ಶುಭಸಂಖ್ಯೆ: 7
ತುಲಾ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು. ಉನ್ನತ ವಿದ್ಯಾಭ್ಯಾಸ ಪೂರ್ಣ. ಸಂಗಾತಿಯೊಂದಿಗೆ ವಿರಸ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 7
ವೃಶ್ಚಿಕ: ಮನೆ ಬದಲಾವಣೆ ಸಾಧ್ಯತೆ. ಭೂಮಿ ವಿವಾದದ ತೀರ್ಪ. ಕುಟುಂಬದೊಂದಿಗೆ ಸಮಾಲೋಚನೆ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 8
ಧನುಸ್ಸು: ಕೆಲವೊಂದು ಘಟನೆಗಳು ನಿಮ್ಮ ಸಹನೆಯನ್ನು ಪರೀಕ್ಷಿಸಲಿವೆ. ಸಾರ್ವಜನಿಕವಾಗಿ ಮನ್ನಣೆ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 9
ಮಕರ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಕಚೇರಿಯಲ್ಲಿ ಕೆಲಸಗಾರರ ಮೇಲೆ ಅಸಮಾಧಾನ. ಬಂಧುಗಳಿಂದ ಸಹಾಯ. ಶುಭಸಂಖ್ಯೆ: 7
ಕುಂಭ: ಮಹಿಳೆಯರಿಗೆ ವಿಶೇಷ ದಿನ. ಪತ್ನಿಯೊಂದಿಗೆ ಧಾರ್ವಿುಕ ಮಂದಿರಕ್ಕೆ ಭೇಟಿ. ಮನಸ್ಸಿಗೆ ಸಮಾಧಾನ. ಸಂಜೆ ಸಿಹಿ ಸುದ್ದಿ. ಶುಭಸಂಖ್ಯೆ: 8
ಮೀನ: ಪಾಲುದಾರಿಕೆ ವ್ಯವಹಾರದಲ್ಲಿ ಮೋಸ. ಹಣಕಾಸಿನ ಬಗ್ಗೆ ಹಿರಿಯರ ಸಲಹೆ ಪಡೆಯಿರಿ. ಮನೆ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 3