ಇಂದು ಈ ರಾಶಿಯವರ ದಾಂಪತ್ಯದಲ್ಲಿ ಸಾಮರಸ್ಯ ಹೆಚ್ಚುವುದು: ನಿತ್ಯಭವಿಷ್ಯ

Nithya Bhavishya
Published on

ಮೇಷ: ನಂಬಿದ ಜನರಿಂದ ಮೋಸ. ದಾಂಪತ್ಯದಲ್ಲಿ ಕಲಹ. ಮನಕ್ಲೇಷ. ಅನಾರೋಗ್ಯ. ಕೃಷಿಕರಿಗೆ ಅಲ್ಪ ಲಾಭ. ಸ್ಥಳ ಬದಲಾವಣೆ. ಶುಭಸಂಖ್ಯೆ: 4

ವೃಷಭ: ದೇವತಾ ಕಾರ್ಯಗಳಲ್ಲಿ ಭಾಗಿ. ಸ್ತ್ರೀ ಲಾಭ. ಚಂಚಲ ಮನಸ್ಸು. ಉದ್ಯೋಗದಲ್ಲಿ ಕಿರಿ-ಕಿರಿ. ಚೋರಭಯ ಕಾಡಬಹುದು. ಶುಭಸಂಖ್ಯೆ: 9

ಮಿಥುನ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ. ವಿವೇಚನೆಯಿಂದ ವ್ಯವಹರಿಸಿ. ವಾಹನದಿಂದ ತೊಂದರೆ. ಸ್ತ್ರೀಯರು ತಾಳ್ಮೆವಹಿಸಿ. ಶುಭಸಂಖ್ಯೆ: 6

ಕಟಕ: ಕೈಗಾರಿಕಾ ಉದ್ಯಮಿಗಳಿಗೆ ಯಶಸ್ಸು. ಮನಃಶಾಂತಿ. ವಿದ್ಯಾಭ್ಯಾಸದಲ್ಲಿ ಗೊಂದಲ ಉಂಟಾದೀತು. ಶತ್ರು ಬಾಧೆ ಕಾಡಬಹುದು. ಶುಭಸಂಖ್ಯೆ: 5

ಸಿಂಹ: ಚಿಂತಿಸುವ ಅಗತ್ಯವಿಲ್ಲ. ಕ್ರಯವಿಕ್ರಯಗಳಲ್ಲಿ ಲಾಭವಾಗಲಿದೆ. ಕುಟುಂಬ ಸೌಖ್ಯವಿದೆ. ಅನಾರೋಗ್ಯ. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 4

ಕನ್ಯಾ: ವಿವಿಧ ಮೂಲಗಳಿಂದ ಲಾಭ. ಮಿತ್ರರ ಬೆಂಬಲ. ಹಿತ ಶತ್ರು ಬಾಧೆ. ಸ್ಥಿರಾಸ್ತಿ ಖರೀದಿ. ಸಾಮಾಜಿಕ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ: 3

ತುಲಾ: ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ. ಲೇವಾದೇವಿ ವ್ಯವಹಾರದವರಿಗೆ ಲಾಭ. ಕುಲದೇವರ ಸ್ಮರಣೆಯಿಂದ ಸಮಾಧಾನ. ಶುಭಸಂಖ್ಯೆ: 7

ವೃಶ್ಚಿಕ: ಅಪರಿಚಿತರ ವಿಷಯದಲ್ಲಿ ಜಾಗೃತರಾಗಿರಿ. ಸ್ತ್ರೀ ಮೂಲದಿಂದ ಲಾಭ. ಮಗನಿಂದ ಶುಭವಾರ್ತೆ. ವೈರಿಗಳಿಂದ ದೂರವಿರಿ. ಶುಭಸಂಖ್ಯೆ: 9

ಧನುಸ್ಸು: ಸ್ಪಷ್ಟ ಮನಸ್ಸು. ಆರೋಗ್ಯದಿಂದ ಇರುವಿರಿ. ಆರ್ಥಿಕ ಬಿಕ್ಕಟ್ಟು ನೆಮ್ಮದಿ ಕೆಡಿಸೀತು. ಸಮಾಧಾನದಿಂದಿರಿ. ದಾಯಾದಿ ಕಲಹ. ಶುಭಸಂಖ್ಯೆ:1

ಮಕರ: ವಿವಾಹ ಯೋಗ. ಮಿತ್ರರ ಬೆಂಬಲ. ವಿಪರೀತ ಕೋಪ. ಶತ್ರು ಬಾಧೆ. ವಿದೇಶಿ ವ್ಯವಹಾರದಲ್ಲಿ ಲಾಭ. ಆರ್ಥಿಕವಾಗಿ ಚೇತರಿಕೆ. ಶುಭಸಂಖ್ಯೆ: 5

ಕುಂಭ: ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಗಣ್ಯ ವ್ಯಕ್ತಿಗಳ ಭೇಟಿ. ದಾಂಪತ್ಯದಲ್ಲಿ ಸಾಮರಸ್ಯ ಹೆಚ್ಚುವುದು. ಬಡವರ ಸೇವೆ ಮಾಡಿ. ಶುಭಸಂಖ್ಯೆ: 7

ಮೀನ: ಸಲ್ಲದ ಅಪವಾದ ಬಂದೀತು, ಎಚ್ಚರ. ಯತ್ನ ಕಾರ್ಯಗಳಲ್ಲಿ ಜಯ. ಸುಖ ಭೋಜನ. ಇತರರ ಮಾತಿಗೆ ಮರುಳಾಗಬೇಡಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net