ಈ ರಾಶಿಯ ನೀವಿಂದು ಧೈರ್ಯದಿಂದ ಮುನ್ನುಗ್ಗುವಿರಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಶ್ರಮಕೆ ತಕ್ಕ ಪ್ರತಿಫಲ. ಕುಟುಂಬದವರು ವಿರೋಧಿಸುವ ಸಾಧ್ಯತೆ ಇದೆ. ದೈವ ಬಲದ ಮೇಲೆ ಕಾರ್ಯ ಸಿದ್ಧಿಯಾಗುವುದು. ಶುಭಸಂಖ್ಯೆ: 3

ವೃಷಭ: ನೀರಿನಂತೆ ಹಣ ಖರ್ಚಾಗುವುದು. ನಿಯಂತ್ರಣವಿರಲಿ. ಆದರೂ ಅನಿರೀಕ್ಷಿತ ಲಾಭವಿದೆ. ಚಿತ್ತ ಚಾಂಚಲ್ಯವನ್ನು ನಿಯಂತ್ರಿಸಿ. ಶುಭಸಂಖ್ಯೆ: 7

ಮಿಥುನ: ಸಹೋದರರಿಂದ ಕಿರಿಕಿರಿ. ಕುಟುಂಬದ ಬಿಗುವಿನ ವಾತಾವರಣ ನಿವಾರಿಸಿ. ನಿಮ್ಮ ಶ್ರಮಕ್ಕೆ ಸರಿಯಾದ ಪ್ರತಿಫಲ ಕಾಣುವಿರಿ. ಶುಭಸಂಖ್ಯೆ: 7

ಕಟಕ: ಆತ್ಮೀಯ ಬಂಧುವರ್ಗದವರ ಭೇಟಿ. ಮಕ್ಕಳ ಭವಿಷ್ಯದ ಚಿಂತೆ ತಿರುಗಾಟ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 5

ಸಿಂಹ: ಫಲಿತಾಂಶದ ಬಗ್ಗೆ ಯೋಚಿಸಬೇಡಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರೆತು ನೆಮ್ಮದಿ. ಹಣದ ಅಪವ್ಯಯವಾಗುವ ಸಾಧ್ಯತೆ. ಶುಭಸಂಖ್ಯೆ: 1

ಕನ್ಯಾ: ಆತ್ಮೀಯ ಸ್ನೇಹಿತನ ಭೇಟಿ. ಅತಿಯಾದ ಆತ್ಮವಿಶ್ವಾಸದಿಂದ ತೊಂದರೆಯಾಗಬಹುದು. ಹಿತಶತ್ರುಗಳಿಂದ ದೂರವಿರಿ. ಶುಭಸಂಖ್ಯೆ: 6

ತುಲಾ: ಅನಗತ್ಯ ವಸ್ತು ಖರೀದಿ ಮಾಡಬೇಡಿ. ಮಕ್ಕಳಿಂದ ಹಣ ನಷ್ಟ. ಕಚೇರಿಯಲ್ಲಿ ಸ್ನೇಹಿತರ ಸಲಹೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 3

ವೃಶ್ಚಿಕ: ಸಮಯ ಸಾಧಕರಿಂದ ದೂರ ಇರಿ. ನಿಮ್ಮ ರ್ತಾಕ ನಡವಳಿಕೆ ಪ್ರಯೋಜನಕ್ಕೆ ಬರುತ್ತದೆ. ಆತ್ಮೀಯರ ವಿಯೋಗವಾದೀತು. ಶುಭಸಂಖ್ಯೆ: 9

ಧನುಸ್ಸು: ಕಠಿಣ ಪರಿಶ್ರಮಕ್ಕೆ ಸರಿಯಾದ ಫಲ. ಸಹೋದ್ಯೋಗಿ ಗಳಿಂದ ವಿಶೇಷ ಸಲಹೆ. ಸಂಗಾತಿಯೊಂದಿಗೆ ವಿರಸ ತಲೆದೋರಬಹುದು. ಶುಭಸಂಖ್ಯೆ: 8

ಮಕರ: ದೂರದ ಊರಿಗೆ ಪ್ರಯಾಣ. ಆರೋಗ್ಯದಲ್ಲಿ ವ್ಯತ್ಯಾಸ. ಹಿರಿಯರಿಂದ ವಿಶೇಷ ಸಲಹೆ ದೊರೆಯಲಿದೆ. ಸಮಾಧಾನ. ಶುಭಸಂಖ್ಯೆ: 8

ಕುಂಭ: ವೈದ್ಯರ ಸಲಹೆ ಪಾಲಿಸಿ. ಅನವಶ್ಯಕ ವಿವಾದಗಳಿಂದ ದೂರವಿರಿ. ಕಚೇರಿಯಲ್ಲಿ ಹೆಚ್ಚಿನ ಶ್ರಮ ಅಗತ್ಯವಾಗಬಹುದು. ಶುಭಸಂಖ್ಯೆ: 4

ಮೀನ: ಧೈರ್ಯದಿಂದ ಮುನ್ನುಗ್ಗುವಿರಿ. ನನೆಗುದಿಗೆ ಬಿದ್ದ ಕಾರ್ಯಕ್ಕೆ ಚಾಲನೆ. ಭೂಮಿ ಖರೀದಿ. ಕುಟುಂಬದಲ್ಲಿ ವಿವಾಹದ ಸಂಭ್ರಮ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net